ತಿರುವನಂತಪುರಂ: ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್‌ವಾಡ್, ಇಶಾನ್ ಕಿಶಾನ್ ಆಕರ್ಷಕ ಅರ್ಧಶತಕ ನೆರವಿನಿಂದ ಇಲ್ಲಿ ನಡೆಯುತ್ತಿರುವ 2ನೇ ಟಿ-20 ಪಂದ್ಯದಲ್ಲಿ ಆಸೀಸ್‌ಗೆ ಟೀಂ ಇಂಡಿಯಾ 236 ರನ್‌ಗಳ ಗುರಿ ನೀಡಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ (India vs Australia) ಬೌಲಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ನಡೆಸಿದ ಭಾರತ ಉತ್ತಮ ಆರಂಭ ನೀಡಿತು. ಭಾರತ ತಂಡದ ಆರಂಭಿಕ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು. ಜೈಸ್ವಾಲ್ ಮತ್ತು ಗಾಯಕ್‌ವಾಡ್ ಇನ್ನಿಂಗ್ಸ್ ಆರಂಭದಲ್ಲೇ 35 ಬಾಲ್‌ಗಳಿಗೆ 77 ರನ್‌ಗಳ ಜೊತೆಯಾಟ ಆಡಿದರು. 25 ಬಾಲ್‌ಗೆ ಅರ್ಧಶತಕ (53 ರನ್, 2 ಸಿಕ್ಸ್, 9 ಫೋರ್) ಗಳಿಸಿ ಮಿಂಚಿದರು. ಈ ಮಧ್ಯೆ ಜಂಪಾಗೆ ಕ್ಯಾಚ್ ನೀಡಿ ಜೈಸ್ವಾಲ್ ನಿರ್ಗಮಿಸಿದರು. ಇದನ್ನೂ ಓದಿ: ಬಿಸಿಸಿಐ ವಿಜಯ್ ಮರ್ಚಂಟ್ ಟ್ರೋಫಿ ಪಂದ್ಯಾವಳಿಗೆ ರಾಯಚೂರಿನ ಯುವಕ ಉಪನಾಯಕ
Advertisement
Advertisement
ನಂತರ ಗಾಯಕ್‌ವಾಡ್‌ಗೆ ಇಶಾನ್ ಕಿಶಾನ್ ಸಾಥ್ ನೀಡಿ ತಂಡಕ್ಕೆ ಹೆಚ್ಚಿನ ರನ್ ಸೇರ್ಪಡೆಯಾಗಲು ಸಹಕಾರಿಯಾದರು. 58 ಬಾಲ್‌ಗೆ 87 ರನ್ ಆಕರ್ಷಕ ಜೊತೆಯಾಟವಾಡಿದರು. ಫೋರ್, ಸಿಕ್ಸ್ ಸಿಡಿಸಿ ಆಸೀಸ್ ಬೌಲರ್‌ಗಳ ಬೆವರಿಳಿಸಿದ ಕಿಶಾನ್ 32 ಬಾಲ್‌ಗೆ 52 (4 ಸಿಕ್ಸ್, 3 ಫೋರ್) ರನ್ ಗಳಿಸಿದರು. ಬೌಂಡರಿಗೆ ಬಾಲ್ ಅಟ್ಟಲು ಮುಂದಾಗಿ ಇಶಾನ್ ಕಿಶಾನ್ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
Advertisement
Advertisement
ಈ ವೇಳೆ ಗಾಯಕ್‌ವಾಡ್‌ಗೆ ಸೂರ್ಯಕುಮಾರ್ ಯಾದವ್ ಜೊತೆಯಾದರು ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸೂರ್ಯ ಕ್ರೀಸ್‌ಗ ಬಂದಂತೆ ಮೊದಲ ಬಾಲ್‌ನ್ನು ಸಿಕ್ಸ್‌ಗಟ್ಟಿ ಮತ್ತಷ್ಟು ಭರವಸೆ ಮೂಡಿಸಿದರು. ಆದರೆ 10 ಬಾಲ್‌ಗೆ 19 ರನ್ ಗಳಿಸಿ (2 ಸಿಕ್ಸ್) ಬಹುಬೇಗ ನಿರ್ಗಮಿಸಿದರು. ಇದನ್ನೂ ಓದಿ: IPL 2024 Retention: ರೋಹಿತ್ ಕ್ಯಾಪ್ಟನ್ – ಮುಂಬೈನಲ್ಲಿ ಯಾರಿಗೆ ಲಕ್, ಯಾರಿಗೆ ಕೊಕ್?
ನಿಧಾನಗತಿಯ ಆಟದೊಂದಿಗೆ ಅರ್ಧಶತಕ ಬಾರಿಸಿದ್ದ ಗಾಯಕ್‌ವಾಡ್ 43 ಬಾಲ್‌ಗೆ 58 ರನ್‌ಗಳಿಸಿ (2 ಸಿಕ್ಸ್, 3 ಫೋರ್) ಆಟ ಮುಂದುವರಿಸಿದ್ದರು. ಕ್ರೀಸ್‌ಗೆ ಬಂದಂತೆ ಸಿಕ್ಸ್, ಬೌಂಡರಿ ಬಾರಿಸಿ ಘರ್ಜಿಸಿದ ರಿಂಕು ಸಿಂಗ್ ಜೊತೆ ಗಾಯಕ್‌ವಾಡ್ ಹೆಚ್ಚುಹೊತ್ತು ನಿಲ್ಲಲಿಲ್ಲ. ನಾಥನ್ ಎಲ್ಲಿಸ್ ಬೌಲಿಂಗ್‌ನಲ್ಲಿ ಡೇವಿಡ್‌ಗೆ ಕ್ಯಾಚ್ ನೀಡಿ ಹೊರನಡೆದರು. ಬೌಟಾಗದೇ ರಿಂಕು ಸಿಂಗ್ ಕೇವಲ 9 ಬಾಲ್‌ಗೆ 31 ರನ್ (2 ಸಿಕ್ಸ್, 4 ಫೋರ್) ಸಿಡಿಸಿದರು. ತಿಲಕ್ ವರ್ಮಾ 7 ರನ್‌ಗಳಿಸಿದರು.
ಈ ಮೂಲಕ ಭಾರತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು. ಆ ಮೂಲಕ ಆಸೀಸ್‌ಗೆ 236 ಬೃಹತ್ ಮೊತ್ತದ ಗುರಿ ನೀಡಿದೆ. ಆಸೀಸ್ ಪರ ನಾಥನ್ ಎಲ್ಲಿಸ್ 3 ವಿಕೆಟ್ ಕಿತ್ತು ಗಮನ ಸೆಳೆದರು. ಮಾರ್ಕಸ್ ಸ್ಟೊಯಿನಿಸ್ 1 ವಿಕೆಟ್ ಪಡೆದರು. ಇದನ್ನೂ ಓದಿ: IPL 2024 Retention: ಪಂತ್ ಮತ್ತೆ ಅಖಾಡಕ್ಕೆ – ಕನ್ನಡಿಗನನ್ನು ಕೈಬಿಟ್ಟು ಮಿಚೆಲ್ ಮಾರ್ಷ್ ಉಳಿಸಿಕೊಂಡ ಕ್ಯಾಪಿಟಲ್ಸ್