ಕೊಲ್ಕತ್ತಾ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ತಂಡದ ಸ್ಟಾರ್ ಆಟಗಾರ ಹಾರ್ಧಿಕ್ ಪಾಂಡ್ಯ ನಾಟೌಟ್ ತೀರ್ಪು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ಪಂದ್ಯದ 45ನೇ ಓವರ್‍ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕೇನ್ ರಿಚರ್ಡ್ ಸನ್ ಫುಲ್ಟಾಸ್ ಬಾಲ್ ಎಸೆದಿದ್ದರು. ಈ ಎಸೆತವನ್ನು ಪಾಂಡ್ಯ ಬಲವಾಗಿ ಹೊಡೆದಿದ್ದರು. ಆದರೆ ಬಾಲ್ ನಾಯಕ ಸ್ವೀವ್ ಸ್ಮಿತ್ ಕೈ ಸೇರಿತ್ತು. ಆದರೆ ಇದನ್ನು ನೋ ಬಲ್ ಎಂದು ಪ್ರಕಟಿಸಿದ ಅಂಪೈರ್ ನಾಟೌಟ್ ಎಂದು ತೀರ್ಪ ನೀಡಿದರು.
Advertisement
ಈ ವೇಳೆ ಔಟ್ ಎಂದು ತಿಳಿದು ಪಾಂಡ್ಯ ಪೆವಿಲಿಯನ್ ಕಡೆಗೆ ಹೆಜ್ಜು ಹಾಕುತ್ತಿದ್ದರು. ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದಕ್ಕೆ ಸ್ಪಿತ್ ಬೌಲರ್ ಕಡೆ ಬಾಲ್ ಎಸೆದ ರನ್ ಔಟ್ ಮಾಡಲು ಹೇಳಿದರು. ಕೈಗೆ ಬಾಲ್ ಸಿಕ್ಕಿದ ಕೂಡಲೇ ರಿಚರ್ಡ್ ಸನ್ ಬೇಲ್ಸ್ ಹಾರಿಸಿದರು. ಈ ವೇಳೆ ಆಸೀಸ್ ಆಟಗಾರರು ಔಟ್ ಗೆ ಮನವಿ ಮಾಡಿದರೂ ಆದರೆ ಅಂಪೈರ್ ತಮ್ಮ ಮೊದಲ ತೀರ್ಮಾನಕ್ಕೆ ಬದ್ಧರಾಗಿ ನಾಟೌಟ್ ಎಂದು ತೀರ್ಪು ನೀಡಿದರು.
Advertisement
ನಿಯಮ ಏನ್ ಹೇಳುತ್ತೆ?
ನಿಯಮ 37.7ರ ಪ್ರಕಾರ ಯಾವುದೇ ಬ್ಯಾಟ್ಸ್ ಮನ್ ತಾನು ಔಟ್ ಎಂದು ಭಾವಿಸಿ ಅಂಗಳದಿಂದ ಹೊರನಡೆಯುತ್ತಿರುವ ಸಂದರ್ಭದಲ್ಲಿ ಅಂಪೈರ್ ನಾಟೌಟ್ ಎಂದು ತೀರ್ಪು ಎಂದು ನೀಡಿದರೆ, ಪುನಃ ಅಂಪೈರ್ ಆಟಗಾರರನ್ನು ವಾಪಸ್ ಬರಲು ಸೂಚಿಸಬಹುದಾಗಿದೆ. ಆದರೆ ಈ ಅವಧಿಯಲ್ಲಿ ಅಂಗಳದಲ್ಲಿದ ಆಟಗಾರರ ಯಾವುದೇ ಚಟುವಟಿಕೆ ಮಾಡಿದರೂ ಅದು ಡೆಡ್‍ಬಾಲ್ ಎಂದು ಪರಿಗಣಿಸಲಾಗುತ್ತದೆ.
Advertisement
https://twitter.com/DoobeyJi/status/910840950183804928?