ಮುಂಬೈ: ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಬದಲು ಇಂದು ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಗ್ಲೌಸ್ ತೊಟ್ಟು ಕೀಪಿಂಗ್ ಮಾಡಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲನ್ನು ಕಂಡಿದೆ. ಭಾರತ ಇನ್ನಿಂಗ್ಸ್ ನಲ್ಲಿ ಪ್ಯಾಟ್ ಕಮ್ಮಿನ್ಸ್ ಎಸೆದ ಬೌನ್ಸರ್ ಬಾಲ್ ರಿಷಬ್ ಪಂತ್ ತಲೆಗೆ ಬಿದ್ದ ಪರಿಣಾಮ ಅವರು ಗಾಯಗೊಂಡರು. ಹೀಗಾಗಿ ಪಂತ್‍ಗೆ ವಿಶ್ರಾಂತಿ ನೀಡಿ ಅವರ ಜವಾಬ್ದಾರಿಯನ್ನು ಕೆ.ಎಲ್.ರಾಹುಲ್‍ಗೆ ನೀಡಲಾಯಿತು.
Advertisement
Update: Rishabh Pant has got a concussion after being hit on his helmet while batting. KL Rahul is keeping wickets in his absence. Pant is under observation at the moment. #TeamIndia #INDvAUS pic.twitter.com/JkVElMacQc
— BCCI (@BCCI) January 14, 2020
Advertisement
ಈ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ 28 ರನ್ (33 ಎಸೆತ, 2 ಬೌಂಡರಿ, ಸಿಕ್ಸರ್) ಗಳಿಸಿದ್ದರು. ಉತ್ತಮ ಬ್ಯಾಟಿಂಗ್ ಆರಂಭಿಸಿದ್ದ ಪಂತ್ ಕಮ್ಮಿನ್ಸ್ ಎಸೆದ ಇನ್ನಿಂಗ್ಸ್ ನ 43ನೇ ಓವರ್ ನ 2ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
Advertisement
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 49.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 255 ರನ್ ಪೇರಿಸಿತ್ತು. ಶಿಖರ್ ಧವನ್ 74 ರನ್ (91 ಎಸೆತ, 9 ಬೌಂಡರಿ, ಸಿಕ್ಸ್), ಕೆ.ಎಲ್.ರಾಹುಲ್ 47 ರನ್ (61 ಎಸೆತ, 4 ಬೌಂಡರಿ) ಹೊಡೆದಿದ್ದರು. ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಆ್ಯರನ್ ಫಿಂಚ್ 110 ರನ್ (114 ಎಸೆತ, 13 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ವಾರ್ನರ್ 128 ರನ್ (112 ಎಸೆತ, 17 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರಿಂದ 37.4 ಓವರ್ ನಲ್ಲಿ 258 ರನ್ ಗಳಿಸಿ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದೆ.
Advertisement
Rishabh Pant has now reached 20 in nine of his 14 ODI innings, but has only gone on to make a half-century once.#INDvAUS pic.twitter.com/E4tAmewyLP
— ICC (@ICC) January 14, 2020