ಬೆಂಗಳೂರು: ಆಫ್ಘಾನಿಸ್ತಾನ (Afghanistan) ತಂಡದ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಟೀಂ ಇಂಡಿಯಾ (Team India) ಆಫ್ಘನ್ ತಂಡಕ್ಕೆ 213 ರನ್ ಟಾರ್ಗೆಟ್ ನೀಡಿದೆ. 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಒಂದು ಹಂತದಲ್ಲಿ 4.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 22 ರನ್ ಗಳಿಸಿತ್ತು. ಈ ವೇಳೆ ನಾಯಕ ರೋಹಿತ್ ಶರ್ಮಾ (Rohit Sharma) ಶತಕ (121 ರನ್) ಹಾಗೂ ರಿಂಕು ಸಿಂಗ್ (Rinku Singh) ಆರ್ಧ ಶತಕ (69) ಜೊತೆಯಾಟ ಭಾರತ 212 ರನ್ ತಲುಪಿಸುವಲ್ಲಿ ಯಶಸ್ವಿಯಾಯಿತು.
Advertisement
Advertisement
ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್!: ಆರ್ ಸಿಬಿಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಆಟವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಅಭಿಮಾನಿಗಳು ನಿರಾಸೆ ಅನುಭವಿಸಬೇಕಾಯಿತು. ಮೊದಲ ವಿಕೆಟ್ ಪತನವಾಗುತ್ತಿದ್ದಂತೆ ಬ್ಯಾಟಿಂಗ್‍ಗೆ ಆಗಮಿಸಿದ ಕೊಹ್ಲಿ ಕೇವಲ 1 ಬಾಲ್ ಎದುರಿಸಿ ಕ್ಯಾಚ್ ಕೊಟ್ಟು ಔಟಾದರು. ನೆಚ್ಚಿನ ಆಟಗಾರ ಕೊಹ್ಲಿ ಶೂನ್ಯಕ್ಕೆ ಔಟಾದಾಗ ತುಂಬಿದ ಕ್ರೀಡಾಂಗಣದಲ್ಲಿ ನೀರವ ಮೌನ ಮನೆ ಮಾಡಿತ್ತು. ಕೊಹ್ಲಿ ಬೆನ್ನಲ್ಲೇ ಆಗಮಿಸಿದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೂಡಾ ಮೊದಲ ಎಸೆತದಲ್ಲೇ ಔಟಾಗಿ ಸೊನ್ನೆ ಸುತ್ತಿದರು.
Advertisement
ಯಶಸ್ವಿ ಜೈಸ್ವಾಲ್ 4, ಶಿವಮ್ ದುಬೆ 1 ರನ್ ಗಳಿಸಿ ಔಟಾದರು. ಆಫ್ಘಾನಿಸ್ತಾನ ಪರವಾಗಿ ಫರೀದ್ ಅಹ್ಮದ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರು. ಒಮರ್‍ಝೈ 1 ವಿಕೆಟ್ ಗಳಿಸಿದರು.