ಪಾಟ್ನಾ: 100ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಭಾರತದಲ್ಲಿ ʼಇಸ್ಲಾಮಿಕ್ ಸರ್ಕಾರʼ ಸ್ಥಾಪಿಸುವ ಯೋಜನೆಗಳ ಕುರಿತು ಉಲ್ಲೇಖಿಸಿರುವ ದಾಖಲೆಯನ್ನು ಬಿಹಾರ್ ಪೊಲೀಸರಿಗೆ ಸಿಕ್ಕಿದ್ದು, ಅದನ್ನು ಬಹಿರಂಗಪಡಿಸಿದ್ದಾರೆ.
‘ಇಂಡಿಯಾ 2047- ಭಾರತದಲ್ಲಿ ಇಸ್ಲಾಂ ಆಡಳಿತದ ಕಡೆಗೆ’ ಎಂಬ ಶೀರ್ಷಿಕೆ ಇರುವ ಎಂಟು ಪುಟಗಳ ದಾಖಲೆಯನ್ನು ಜುಲೈ 13 ರಂದು ಬಿಹಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದೊಂದಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ ಭಯೋತ್ಪಾದಕ ಘಟಕವೊಂದನ್ನು ಪೊಲೀಸರು ಭೇದಿಸಿದ್ದಾರೆ. ಫುಲ್ವಾರಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ ವೇಳೆ ಈ ದಾಖಲೆ ವಶಕ್ಕೆ ಪಡೆದಿದ್ದಾರೆ. ಪಾಟ್ನಾದ ಷರೀಫ್ ಪ್ರದೇಶದಲ್ಲಿ ಭಾರತ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಇದನ್ನೂ ಓದಿ: ಹವಾಮಾನ ವೈಪರೀತ್ಯ- ಅಮರನಾಥ ಯಾತ್ರೆ ಪುನಃ ಸ್ಥಗಿತ
Advertisement
Advertisement
ಜಾರ್ಖಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಹಾಗೂ ನಿಷೇಧಿತ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾದ ಮಾಜಿ ಸದಸ್ಯ ಮತ್ತು ಪ್ರಸ್ತುತ ಪಿಎಫ್‌ಐ, ಎಸ್‌ಡಿಪಿಐ ಸದಸ್ಯನಾಗಿರುವ ಅಥರ್ ಪರ್ವೇಜ್ ಬಂಧಿತ ಆರೋಪಿಗಳಾಗಿದ್ದಾರೆ.
Advertisement
ದಾಖಲೆಯಲ್ಲೇನಿದೆ?
ಕೇವಲ ಶೇ.10ರಷ್ಟು ಮುಸ್ಲಿಂ ಜನಸಂಖ್ಯೆಯಿದ್ದರೂ ಭಾರತದಲ್ಲಿ ಇಸ್ಲಾಂ ಆಡಳಿತ ತರುವ ಬಗ್ಗೆ ಪಿಎಫ್‌ಐಗೆ ಆತ್ಮವಿಶ್ವಾಸವಿದೆ. ಬಹುಸಂಖ್ಯಾತ ಸಮುದಾಯವನ್ನು ಅಧೀನಗೊಳಿಸಿ, ಭಾರತದಲ್ಲಿ ಇಸ್ಲಾಂ ವೈಭವವನ್ನು ಮರಳಿ ತರುವ ಯೋಜನೆ ಕುರಿತು ಉಲ್ಲೇಖಿಸಲಾಗಿದೆ.
Advertisement
ಈ ಗುರಿ ಸಾಧಿಸುವ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಆ ಪ್ರಕಾರ PFI ಕಾರ್ಯಕರ್ತರು, ಮುಸ್ಲಿಂ ಸಮುದಾಯಕ್ಕೆ ಗುರಿ ಸಾಧನೆಗಾಗಿ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ಸಂಸತ್ ಕಲಾಪದಲ್ಲಿ ಅಸಂಸದೀಯ ಪದಗಳಿಗೆ ಕತ್ತರಿ – ಈ ಪದಗಳು ಬ್ಯಾನ್
ಪಕ್ಷ ಸೇರಿದಂತೆ ನಮ್ಮ ಎಲ್ಲಾ ಮುಂಚೂಣಿ ಸಂಸ್ಥೆಗಳು ಹೊಸ ಸದಸ್ಯರನ್ನು ನೇಮಕ ಮಾಡಿಕೊಳ್ಳುವತ್ತ ಗಮನಹರಿಸಬೇಕು. ನಾವು ನಮ್ಮ ಪಿಇ ವಿಭಾಗಕ್ಕೆ ಸದಸ್ಯರನ್ನು ನೇಮಿಸಿಕೊಂಡು ತರಬೇತಿ ನೀಡಲು ಪ್ರಾರಂಭಿಸುತ್ತೇವೆ. ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ತಂತ್ರಗಳು, ಕತ್ತಿಗಳು, ರಾಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳ ಬಳಕೆ ಕುರಿತು ತರಬೇತಿ ನೀಡಬೇಕು ಎಂದು ದಾಖಲೆಯಲ್ಲಿ ಉಲ್ಲೇಖವಾಗಿದೆ.
ನಿಷ್ಠಾವಂತ ಮುಸ್ಲಿಮರನ್ನು ಕಾರ್ಯನಿರ್ವಾಹಕ ಮತ್ತು ನ್ಯಾಯಾಂಗ ಸ್ಥಾನಗಳು, ಪೊಲೀಸ್ ಮತ್ತು ಸೇನೆ ಸೇರಿದಂತೆ ಸರ್ಕಾರಿ ಇಲಾಖೆಗಳಿಗೆ ನೇಮಕ ಮಾಡುವುದು. ಪಿಎಫ್‌ಐ ಸಂಘಟನೆಯು ಮೇಲ್ಜಾತಿ ಹಿಂದೂಗಳ ಕಲ್ಯಾಣದಲ್ಲಿ ಮಾತ್ರ ಆಸಕ್ತಿ ಹೊಂದಿರುವ ಸಂಘಟನೆ ಎಂದು ಬಿಂಬಿಸುವ ಮೂಲಕ ಆರ್‌ಎಸ್‌ಎಸ್, ಎಸ್‌ಸಿ/ಎಸ್‌ಟಿ/ಒಬಿಸಿಗಳ ನಡುವೆ ಒಡಕು ಸೃಷ್ಟಿಸುವ ಯೋಜನೆಗಳನ್ನು ಸಹ ದಾಖಲೆಯಲ್ಲಿ ಪಟ್ಟಿ ಮಾಡಲಾಗಿದೆ.
ಈ ಕಾರ್ಯಸಿದ್ಧಿಗಾಗಿ ನಮಗೆ ಸ್ನೇಹಪರ ಇಸ್ಲಾಮಿಕ್ ದೇಶಗಳಿಂದ ಸಹಾಯ ಬೇಕಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಇಸ್ಲಾಂ ಧರ್ಮದ ಧ್ವಜಧಾರಿಯಾಗಿರುವ ಟರ್ಕಿಯೊಂದಿಗೆ PFI ಸ್ನೇಹ ಸಂಬಂಧವನ್ನು ಬೆಳೆಸಿಕೊಂಡಿದೆ. ಇತರ ಕೆಲವು ಇಸ್ಲಾಮಿಕ್ ದೇಶಗಳಲ್ಲಿ ವಿಶ್ವಾಸಾರ್ಹ ಸ್ನೇಹ ಬೆಳೆಸುವ ಪ್ರಯತ್ನ ಕೂಡ ನಡೆಯುತ್ತಿದೆ ಎಂದು ದಾಖಲೆಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ‘I2U2’ ಮೊದಲ ವರ್ಚುವಲ್ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ ಮೋದಿ
ಪ್ರಕರಣ ಕುರಿತು ಮಾತನಾಡಿರುವ ಎಎಸ್‌ಪಿ ಫುಲ್ವಾರಿ ಷರೀಫ್ ಮನೀಶ್ ಕುಮಾರ್, ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಲಾಗಿದೆ. ಕಳೆದ ಎರಡು ತಿಂಗಳಿಂದ ಆರೋಪಿಗಳು ಬೇರೆ ರಾಜ್ಯದಿಂದ ಬರುತ್ತಿದ್ದರು. ಬರುವವರು ಟಿಕೆಟ್ ಕಾಯ್ದಿರಿಸುವಾಗ ಮತ್ತು ಹೋಟೆಲ್‌ಗಳಲ್ಲಿ ತಂಗುವಾಗ ಹೆಸರು ಬದಲಿಸಿಕೊಳ್ಳುತ್ತಿದ್ದರು. ಒಟ್ಟು 26 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.