ಲಂಡನ್: ವಿಶ್ವಕಪ್ ಟೂರ್ನಿಯ ಅಂತಿಮ ಪಂದ್ಯವನ್ನು ಆಡುತ್ತಿರುವ ಶ್ರೀಲಂಕಾ ತಂಡ ಟೀಂ ಇಂಡಿಯಾಗೆ ಗೆಲ್ಲಲು 265 ರನ್ ಗುರಿ ನೀಡಿದೆ.
ಲಂಕಾ ತಂಡದ ಪರ ಶತಕ ಸಿಡಿಸಿದ ಮ್ಯಾಥ್ಯೂಸ್ ತಂಡ ಸವಾಲಿನ ಮೊತ್ತ ಗಳಿಸಲು ಕಾರಣರಾದರು. ಪಂದ್ಯದಲ್ಲಿ 128 ಎಸೆತಗಳನ್ನು ಎದರುಸಿದ ಮ್ಯಾಥ್ಯೂಸ್ 113 ರನ್ (10 ಬೌಂಡರಿ, 2 ಸಿಕ್ಸ್) ಗಳಿಸಿದರು. ಆ ಮೂಲಕ ವೃತ್ತಿ ಜೀವನದ 3ನೇ ಶತಕವನ್ನು ಗಳಿಸಿದರು. ವಿಶೇಷ ಎಂದರೆ ಮ್ಯಾಥ್ಯೂಸ್ 3 ಶತಕಗಳನ್ನು ಭಾರತ ವಿರುದ್ಧವೇ ಸಿಡಿಸಿದ್ದಾರೆ.
Advertisement
Sri Lanka finish on 264/7
It's a lot more than it looked like they would make when Jasprit Bumrah reduced them to 55/4, and they've got Angelo Mathews to thank.
Will it be enough?#SLvIND | #CWC19 pic.twitter.com/PaLShJ37kA
— ICC Cricket World Cup (@cricketworldcup) July 6, 2019
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡಕ್ಕೆ ಟೀಂ ಇಂಡಿಯಾ ಬೌಲರ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಕರುಣಾರತ್ನೆ 10 ರನ್ ಹಾಗೂ 18 ರನ್ ಹೊಡೆದಿದ್ದ ಕುಶಾಲ್ ಪೆರೆರಾ ಅವರನ್ನು ಔಟ್ ಮಾಡಿದರು. ಆ ಬಳಿಕ 20 ರನ್ ಗಳಿಸಿದ್ದ ಅವಿಷ್ಕಾ ಫರ್ನಾಂಡೊ ವಿಕೆಟನ್ನು ಪಾಂಡ್ಯ ಪಡೆದರೆ, ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಜಡೇಜಾ ತಮ್ಮ ಮೊದಲ ಓವರಿನಲ್ಲಿ ಕುಶಾಲ ಮೆಂಡೀಸ್ (3 ರನ್) ವಿಕೆಟ್ ಪಡೆದು ಮಿಂಚಿದರು. ಮೊದಲ ನಾಲ್ಕು ವಿಕೆಟ್ ಪಡೆದಾಗಲೂ ಧೋನಿ 3 ಕ್ಯಾಚ್ ಪಡೆದು 1 ಸ್ಟಂಪ್ ಔಟ್ ಮಾಡಿದ್ದರು. ಇದರೊಂದಿಗೆ ಲಂಕಾ ತಂಡ 55 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇತ್ತ ಏಕದಿನ ಕ್ರಿಕೆಟಿನಲ್ಲಿ ಬುಮ್ರಾ 100 ವಿಕೆಟ್ ಸಾಧನೆ ಮಾಡಿದರು.
Advertisement
That's how you celebrate your first World Cup century ????#SLvIND | #CWC19 | #LionsRoar pic.twitter.com/35qaEg1ieB
— ICC Cricket World Cup (@cricketworldcup) July 6, 2019
Advertisement
ಸಂಕಷ್ಟದ ಹಂತದಲ್ಲಿ ತಂಡಕ್ಕೆ ಆಸೆಯಾದ ಮ್ಯಾಥ್ಯೂಸ್, ತಿರಿಮಣೆ 53 ರನ್(68 ಎಸೆತ, 4 ಬೌಂಡರಿ) ರೊಂದಿಗೆ ಸೇರಿ 5ನೇ ವಿಕೆಟ್‍ಗೆ 124 ರನ್ ಜೊತೆಯಾಟ ನೀಡಿದರು. ಇತ್ತ ಬೃಹತ್ ಜೊತೆಯಾಟದೊಂದಿಗೆ ತಂಡಕ್ಕೆ ತಲೆನೋವಾಗಿದ್ದ ಜೋಡಿಯನ್ನು ತಿರಿಮಣೆ ವಿಕೆಟ್ ಪಡೆಯುವ ಮೂಲಕ ಕುಲ್ದೀಪ್ ಯಾಧವ್ ಬಹು ದೊಡ್ಡ ಬ್ರೇಕ್ ನೀಡಿದರು. ಅಂತಿಮ ಹಂತದಲ್ಲಿ 113 ರನ್ ಗಳಿಸಿದ್ದ ಮ್ಯಾಥ್ಯೂಸ್ ರನ್ನು ಬುಮ್ರಾ ಪೆವಿಲಿಯನ್‍ಗಟ್ಟಿದ್ದರು. ಅಂತಿಮವಾಗಿ 7 ವಿಕೆಟ್ ಕಳೆದುಕೊಂಡು 264 ರನ್ ಗಳಿಸಿದ ಶ್ರೀಲಂಕಾ ಟೀಂ ಇಂಡಿಯಾಗೆ 265 ರನ್ ಗುರಿ ನೀಡಿತು. ಟೀಂ ಇಂಡಿಯಾ ಪರ ಬುಮ್ರಾ 3 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಪಾಂಡ್ಯ, ಜಡೇಜಾ, ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.
We know, but we're not saying ????#CWC19 | #SLvIND | #TeamIndia https://t.co/LAiI0UG1Xe
— ICC Cricket World Cup (@cricketworldcup) July 6, 2019