ಮುಂಬೈ: 2023ರ ಏಕದಿನ ವಿಶ್ವಕಪ್ (ICC WorldCup 2023) ಟೂರ್ನಿಯ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ (India Vs Pakistan) ಪಂದ್ಯದ ದಿನಾಂಕ ಬದಲಾವಣೆ ಮಾಡಲಾಗಿದೆ. ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಇಂಡೋ ಪಾಕ್ ಪಂದ್ಯ ಅದೇ ಸ್ಥಳ, ಸಮಯದಲ್ಲಿ ಅಕ್ಟೋಬರ್ 14 ರಂದು ನಡೆಯಲಿದೆ.
Advertisement
ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ ನಡೆಸಿದ ಬಳಿಕ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ವೇಳಾಪಟ್ಟಿ ಬದಲಾವಣೆಯ ಮಾಹಿತಿ ನೀಡಿದ್ದಾರೆ. ಭದ್ರತಾ ಕಾರಣಗಳಿಂದ ಕೆಲವು ಪಂದ್ಯಗಳ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಿಲಕ್ ವರ್ಮಾ ಫಿಫ್ಟಿ ತಪ್ಪಿಸಿ ಹಿಗ್ಗಾಮುಗ್ಗ ಟ್ರೋಲ್‌ಗೆ ಗುರಿಯಾದ ಪಾಂಡ್ಯ – ಅಭಿಮಾನಿಗಳು ಕೆಂಡ
Advertisement
Advertisement
ಅ.15ರಂದೇ ದೆಹಲಿಯಲ್ಲಿ ಅಫ್ಘಾನಿಸ್ತಾನ-ಇಂಗ್ಲೆಂಡ್ ನಡುವಿನ ಪಂದ್ಯ ನಿಗದಿಯಾಗಿರುವುದರಿಂದ ಅ.14ಕ್ಕೆ ಭಾರತ-ಪಾಕ್ ಪಂದ್ಯವನ್ನ ಬದಲಾವಣೆ ಮಾಡಲಾಗಿದೆ. ನವೆಂಬರ್ 11 ರಂದು 24 ಗಂಟೆಗಳ ಕಾಲವೂ ಪಂದ್ಯ ನಡೆಯಲಿದೆ. ಅಂದು ಡಬಲ್ ಹೆಡರ್‌ನಲ್ಲಿ ಪಂದ್ಯವನ್ನ ನಿಗದಿಮಾಡಲಾಗಿದ್ದು, ಆಸ್ಟ್ರೇಲಿಯಾ ಬಾಂಗ್ಲಾದೇಶ ನಡುವಿನ ಪಂದ್ಯವನ್ನು ಬೆಳಗ್ಗೆ 10:30ಕ್ಕೆ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ಪಂದ್ಯವನ್ನು ಮಧ್ಯಹ್ನ 2 ಗಂಟೆಗೆ ನಿಗದಿಪಡಿಸಲಾಗಿದೆ.
Advertisement
ಈ ಹಿಂದೆ ಅಕ್ಟೋಬರ್ 12ರಂದು ಹೈದರಾಬಾದ್ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಶ್ರೀಲಂಕಾ-ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 10ಕ್ಕೆ, ಅ.13ರಂದು ನಿಗದಿಯಾಗಿದ್ದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಅ.12ಕ್ಕೆ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವನ್ನು ಅ.13ಕ್ಕೆ, ಇಂಗ್ಲೆಂಡ್-ಬಾಂಗ್ಲಾದೇಶ ನಡುವಿನ ಪಂದ್ಯವನ್ನು ಅ.10ಕ್ಕೆ, ಭಾರತ ಮತ್ತು ನೆದರ್‌ಲೆಂಡ್ ನಡುವಿನ ಪಂದ್ಯವನ್ನು ನವೆಂಬರ್ 12ಕ್ಕೆ ಬದಲಾವಣೆ ಮಾಡಲಾಗಿದೆ ಎಂದು ಜಯ್ ಶಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸೂರ್ಯನ ಆರ್ಭಟಕ್ಕೆ ವಿಂಡೀಸ್ ಕಂಗಾಲು, ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ – ಸರಣಿ ಜಯದ ಕನಸು ಜೀವಂತ
ಈ ಬಾರಿ ಭಾರತದ ಪೂರ್ಣ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು ಅ.5ರಿಂದ ನವೆಂಬರ್ 19ರ ವರೆಗೆ ಒಟ್ಟು 48 ಪಂದ್ಯಗಳು ನಡೆಯಲಿವೆ. ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಆರಂಭಿಕ ಪಂದ್ಯ ಹಾಗೂ ಫೈನಲ್ ಪಂದ್ಯವು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜರುಗಲಿದೆ.
Web Stories