ಕನ್ನಡಿಗ ಮಯಾಂಕ್‌ಗೆ ದಿಢೀರ್‌ ಬುಲಾವ್ – ಟೀಂ ಇಂಡಿಯಾಗೆ ಬನ್ನಿ

Public TV
1 Min Read
Mayank Agarwal

ಮುಂಬೈ: ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾದ ಆಟಗಾರರಿಗೆ ಕೊರೊನಾ ಕಾಡುತ್ತಿದೆ. ನಾಯಕ ರೋಹಿತ್ ಶರ್ಮಾಗೆ ಕೊರೊನಾ ಕಾಣಿಸಿಕೊಂಡ ಪರಿಣಾಮ ಬದಲಿ ಆಟಗಾರರಾಗಿ ಕನ್ನಡಿಗ ಮಯಾಂಕ್ ಅಗರ್ವಾಲ್ ಬುಲಾವ್ ಪಡೆದಿದ್ದಾರೆ.

ROHITH SHARMA

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, ಇಂಗ್ಲೆಂಡ್ ಟೆಸ್ಟ್ ತಂಡದೊಂದಿಗೆ ಮಯಾಂಕ್ ಅಗರ್ವಾಲ್‌ರನ್ನು  ಸೇರ್ಪಡೆಗೊಳಿಸಲಾಗಿದೆ. ಈಗಾಗಲೇ ಮಯಾಂಕ್ ಇಂಗ್ಲೆಂಡ್‍ಗೆ ತೆರಳಿದ್ದಾರೆ. ರೋಹಿತ್ ಶರ್ಮಾಗೆ ಕೊರೊನಾ ಕಾಣಿಸಿಕೊಂಡ ಬಳಿಕ ತಂಡಕ್ಕೆ ಮಯಾಂಕ್‍ರನ್ನು ಕರೆಸಿಕೊಳ್ಳಲಾಗಿದೆ ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಐರ್ಲೆಂಡ್ ವಿರುದ್ಧ ಶುಭಾರಂಭ ಕಂಡ ಭಾರತ – ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ದೀಪಕ್ ಹೂಡಾ

mayankagarawal 290535328 416153940435546 6128601239045612221 n 1

ಇಂಗ್ಲೆಂಡ್‍ನಲ್ಲಿ ಕೊರೊನಾ ಟೆಸ್ಟ್ ಮಾಡುವ ವೇಳೆ ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಬಳಿಕ ರೋಹಿತ್ ತಂಡದ ಹೋಟೆಲ್‍ನಲ್ಲಿ ಐಸೋಲೇಷನ್‍ನಲ್ಲಿದ್ದು, ಬಿಸಿಸಿಐ ವೈದ್ಯಕೀಯ ತಂಡ ಅವರ ಅರೋಗ್ಯದ ಮೇಲೆ ನಿಗಾ ಇರಿಸಿದೆ. ಈ ಮೊದಲು ಆರ್.ಅಶ್ವಿನ್‍ಗೆ ಕೊರೊನಾ ಕಾಣಿಸಿಕೊಂಡಿತ್ತು. ಬಳಿಕ ಇದೀಗ ಅಶ್ವಿನ್ ಚೇತರಿಸಿಕೊಂಡಿದ್ದು ಅಭ್ಯಾಸ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ – ಕ್ಯಾನ್ಸಲ್ ಆಗುತ್ತಾ ಟೆಸ್ಟ್ ಪಂದ್ಯ?

ಕಳೆದ ವರ್ಷ 5 ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ತಂಡದಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಿತ್ತು. ಕೋವಿಡ್ ಹೆಚ್ಚಾದ ಬಳಿಕ 5ನೇ ಪಂದ್ಯ ನಡೆಸದೆ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದೀಗ ಈ ಪಂದ್ಯವನ್ನು ಮುಂದುವರಿಸುತ್ತಿದ್ದು, ಏಕೈಕ ಟೆಸ್ಟ್ ಪಂದ್ಯ ಜುಲೈ 1 ರಿಂದ ಆರಂಭವಾಗುತ್ತಿದೆ. ಈಗಾಗಲೇ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *