ಮುಂಬೈ: ಪಂಜಾಬ್‍ನ ಪಠಾಣ್‍ಕೋಟ್ ವಾಯುನೆಲೆ ಮೇಲೆ ದಾಳಿ, ಕಾಶ್ಮೀರ ಉರಿ ಸೇನಾ ಕಚೇರಿ ಮೇಲೆ ಉಗ್ರರ ದಾಳಿ ಆ ಬಳಿಕ ಸೇನೆಯ ಸರ್ಜಿಕಲ್ ಸ್ಟ್ರೈಕ್ ನಿಂದಾಗಿ ಹದೆಗೆಟ್ಟಿದ್ದ ಭಾರತ ಪಾಕಿಸ್ತಾನದ ಸಂಬಂಧ ಈಗ ಕ್ರಿಕೆಟ್ ಮೂಲಕ ಮತ್ತೆ ಆರಂಭವಾಗುವ ಸಾಧ್ಯತೆಯಿದೆ.
ಬಿಸಿಸಿಐ ಕೇಂದ್ರ ಗೃಹ ಸಚಿವಾಲಯಕ್ಕೆ ಅನುಮತಿ ಕೋರಿ ಬರೆದ ಪತ್ರದಿಂದಾಗಿ ಹಳಸಿದ ಸಂಬಂಧ ಮತ್ತೆ ಆರಂಭಗೊಳ್ಳುತ್ತಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
Advertisement
2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ(ಎಫ್‍ಟಿಪಿ) ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯಬೇಕು. ಆದರೆ ಉಗ್ರರ ದಾಳಿ ಮತ್ತು ಗಡಿಯಲ್ಲಿನ ಅಪ್ರಚೋದಿತ ದಾಳಿಯಿಂದ ಭಾರತ ಸರ್ಕಾರ ಸರಣಿ ಆಡಲು ಬಿಸಿಸಿಐಗೆ ಅನುಮತಿ ನೀಡಿರಲಿಲ್ಲ. ಆದರೆ ಈಗ ದುಬೈನಲ್ಲಿ ಸರಣಿ ಆಡಲು ಬಿಸಿಸಿಐ ಉತ್ಸುಕವಾಗಿದ್ದು ಈ ಸಂಬಂಧ ಅನುಮತಿ ನೀಡುವಂತೆ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.
Advertisement
2016ರಲ್ಲಿ ಯುಎಇಯಲ್ಲಿ ಸರಣಿ ನಡೆಸಲು ಬಂದಿದ್ದ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿತ್ತು. ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಸುವಂತೆ ಬಹಳಷ್ಟು ಮಾತುಕತೆ ನಡೆದಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ.
Advertisement
ಇದನ್ನೂ ಓದಿ: ಭಾರತದ ವಿರುದ್ಧ ಆಸೀಸ್ ಸೋತಿದ್ದೂ ಮಾತ್ರವಲ್ಲ, ಈಗ 3.25 ಕೋಟಿಯ ಬಹುಮಾನವೂ ಹೋಯ್ತು!
Advertisement
“ಸೆಪ್ಟೆಂಬರ್ ನವೆಂಬರ್‍ನಲ್ಲಿ ಕ್ರಿಕೆಟ್ ಸರಣಿ ಆಡಲು ಬಿಸಿಸಿಐ ಮಂದಾಗಿದೆ. ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಹದೆಗೆಟ್ಟ ಕಾರಣ ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ ಈ ಬಾರಿ ಸರ್ಕಾರ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಗೊತ್ತಿಲ್ಲ. ಎಫ್‍ಟಿಪಿ ಅನ್ವಯ ಸರಣಿ ಆಡಲೇಬೇಕಿದೆ. ಹೀಗಾಗಿ ಪಾಕ್ ವಿರುದ್ಧ ದುಬೈಗೆ ಟೀಂ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಮುಂದಾಗಿದೆ. ಸರ್ಕಾರದಿಂದ ಅನುಮತಿ ಸಿಗದೇ ಇದ್ದರೆ ಬಿಸಿಸಿಐ ಏನು ಮಾಡಲು ಸಾಧ್ಯವಿಲ್ಲ” ಎಂದು ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.
ಭಾರತ ಪಾಕಿಸ್ತಾನ ನಡುವೆ 2017-08ರಲ್ಲಿ ಕೊನೆಯ ಟೆಸ್ಟ್ ಸರಣಿ ನಡೆದಿದ್ದರೆ, 2012-13ರಲ್ಲಿ ಕೊನೆಯ ಏಕದಿನ ಸರಣಿ ನಡೆದಿತ್ತು. ಎರಡೂ ತಂಡಗಳು 2016ರ ಮಾರ್ಚ್ ನಲ್ಲಿ ಕೊನೆಯ ಪಂದ್ಯವನ್ನು ಆಡಿತ್ತು. ಕೋಲ್ಕತ್ತಾದಲ್ಲಿ ನಡೆದ ಟಿ20 ವಿಶ್ವಕಪ್‍ನಲ್ಲಿ ಭಾರತ 6 ವಿಕೆಟ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ: ವಿಶ್ವದ ವೇಗದ ಕಾರಿನಲ್ಲಿ ದುಬೈ ಪೊಲೀಸರ ಪ್ಯಾಟ್ರೋಲಿಂಗ್!