ನವದೆಹಲಿ: ದೇಶದ ಹೆಸರನ್ನು ಭಾರತ (Bharath) ಎಂದು ಬದಲಿಸಬೇಕೆಂಬ ಚರ್ಚೆ ಇಂದು ನಿನ್ನೆಯದ್ದಲ್ಲ ವಿಪಕ್ಷ ಕೂಟ ಐಎನ್‍ಡಿಐಎ (INDIA) ಎಂದು ಇಟ್ಟುಕೊಂಡ ನಂತರ ಕೇಳಿಬಂದ ಕೂಗಲ್ಲ ಇದು. 2016, 2020ರಲ್ಲಿ ಈ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ (Supreme Court) ವಿಚಾರಣೆ ಕೂಡ ನಡೆದಿತ್ತು. ಆದರೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು.
ಭಾರತ ಹೆಸರು ಬಂದಿದ್ದೇಗೆ?
ನಮ್ಮ ದೇಶಕ್ಕೆ ನಾನಾ ಹೆಸರಿವೆ. ಜಂಬೂದ್ವೀಪ, ಭರತಖಂಡ, ಹಿಮವರ್ಷ, ಅಜನಾಭವರ್ಷ, ಆರ್ಯವರ್ಷ, ಹಿಂದೂ, ಹಿಂದೂಸ್ತಾನ್, ಇಂಡಿಯಾ ಎಂಬ ಹೆಸರುಗಳಿವೆ. ಅದರಲ್ಲಿ ಭಾರತ ಹೆಸರು ಪ್ರಸಿದ್ಧವಾಗಿದೆ.
ಭಾರತ ಹೆಸರಿನ ಹಿಂದೆ ಅದೆಷ್ಟೋ `ಭರತ’ರಿದ್ದಾರೆ. ದುಷ್ಯಂತನ ಪುತ್ರ ಭರತ, ದಶರಥನ ಪುತ್ರ ಭರತ, ನಾಟ್ಯಶಾಸ್ತ್ರದಲ್ಲಿ ಬರುವ ಭರತ ಮುನಿ, ರಾಜರ್ಷಿ ಭರತರಿದ್ದಾರೆ. ದುಷ್ಯಂತನ ಪುತ್ರ ಭರತನಿಂದ ಭಾರತ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಇದನ್ನೂ ಓದಿ: ಹಿಂದೂ ಧರ್ಮವನ್ನು ಹುಟ್ಟಿಸಿದವರು ಯಾರು? – ಉದಯ್‌ನಿಧಿ ಬಳಿಕ ಜಿ. ಪರಮೇಶ್ವರ್ ಪ್ರಶ್ನೆ
ಭರತ್ ಎಂದರೇ ಅಗ್ನಿ/ವಿಶ್ವರಕ್ಷಕ ಎಂದರ್ಥ. ಸಂಸ್ಕೃತದಲ್ಲಿ `ಭರ್’ ಎಂದರೇ ಯುದ್ಧ/ ಸಮೂಹ/ ಜನಗಣ ಎಂದರ್ಥ. ಮಹಾಭಾರತಕ್ಕೆ 2500 ವರ್ಷಗಳ ಹಿಂದೆಯೇ ಭಾರತದ ಬಗ್ಗೆ ಉಲ್ಲೇಖವಿದೆ.
ವಿಷ್ಣು ಪುರಾಣದಲ್ಲಿ (Vishnu Purana) ʼಭಾರತʼದ ಬಗ್ಗೆ ಪ್ರಸ್ತಾಪವಿದೆ. ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೆಶ್ಚೈವ ದಕ್ಷಿಣಂ | ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿ: ದಕ್ಷಿಣದ ಸಮುದ್ರದಿಂದ ಉತ್ತರದ ಹಿಮಪರ್ವತಗಳವರೆಗೆ ಹರಡಿರುವ ದೇಶ ಭಾರತ. ಇಲ್ಲಿರುವವರು ಭರತನ ವಂಶಜರು.
ಇಂಡಿಯಾ ಪದ ಬಂದಿದ್ದೇಗೆ?
ಇಂಡಿಯಾ (India) ಪದದ ಮೂಲ ಭಾರತವಲ್ಲ.ಇದು ಗ್ರೀಕ್‍ನ ಇಂಡಿಕಾ (Indica) ಎಂಬ ಪದದಿಂದ ಬಂದಿದೆ. ಇಂಡಿಕಾ ಎಂಬ ಪದವನ್ನು ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ ಮೆಗಾಸ್ತನೀಸ್ (Megasthenes) ಪ್ರಯೋಗಿಸಿದ್ದ. ಮೆಗಸ್ತಾನೀಸ್ ಗ್ರೀಕ್ ಉಚ್ಛಾರಣೆಯಂತೆ ಇಂಡಸ್, ಇಂಡಿಯಾ ಎಂದು ಉಲ್ಲೇಖಿಸಿದ್ದರಿಂದ ಇಂಡಿಯಾ ಪದ ಬಂದಿದೆ.
Web Stories