ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ (Muddenahalli) ಶ್ರೀ ಸತ್ಯಸಾಯಿ ಗ್ರಾಮದಲ್ಲಿ (Sathya Sai Village) ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವೆ ಫೆ. 8 ರಂದು ಕ್ರಿಕೆಟ್ ಪಂದ್ಯಾವಳಿ (Cricket Tournament) ನಡೆಯಲಿದೆ.
ಶ್ರೀ ಮಧುಸೂದನ ಸಾಯಿ ಅವರು ಆಯೋಜಿಸುತ್ತಿರುವ ʼಒನ್ ವರ್ಲ್ಡ್ ಒನ್ ಫ್ಯಾಮಿಲಿʼ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದು, ಭಾರತೀಯ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ (Sunil Gavaskar) ಅವರು ಮುಖ್ಯ ಪಾತ್ರವನ್ನು ವಹಿಸಿ ಸಂಘಟಿಸುತ್ತಿದ್ದಾರೆ.
Advertisement
ಕ್ರಿಕೆಟ್ ದಿಗ್ಗಜರಾದ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ವೆಂಕಟೇಶ್ ಪ್ರಸಾದ್ ಹಾಗೂ ಶ್ರೀಲಂಕಾದ ದಿಗ್ಗಜರಾದ ಅರವಿಂದ ಡಿ ಸಿಲ್ವಾ, ಮುತ್ತಯ್ಯ ಮುರಳೀಧರನ್, ಟಿ ಎಂ ದಿಲ್ಶಾನ್ ಭಾಗಿಯಾಗಲಿದ್ದಾರೆ.
Advertisement
Advertisement
2025 ರ ಒಂದು ವಿಶ್ವ ಒಂದು ಕುಟುಂಬ ಕಪ್ ನಲ್ಲಿ ‘ಜಗತ್ತೇ ಒಂದು ಕುಟುಂಬ’ (ವಸುಧೈವ ಕುಟುಂಬಕಂ) ಎಂದು ಕೆತ್ತಲಾಗಿದೆ. ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಬಾಲಕರಿಗಾಗಿ ಗವಾಸ್ಕರ್ – ವಿಶ್ವನಾಥ್ ಕ್ರಿಕೆಟ್ ಅಕಾಡೆಮಿಯನ್ನು ಸ್ಥಾಪಿಸಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಈಗಾಗಲೇ ಘೋಷಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ ವಿಶ್ವದಾಖಲೆ ನಿರ್ಮಾಣಕ್ಕೆ ಬೇಕಿದೆ ಕೇವಲ 94 ರನ್!
Advertisement
ಕಳೆದ ವರ್ಷವೂ ಸಹ ಪಂದ್ಯ ನಡೆಸಲಾಗಿದ್ದು ಈ ವರ್ಷವೂ ಎರಡನೇ ಬಾರಿಗೆ ಪಂದ್ಯ ಆಯೋಜನೆ ಮಾಡಲಾಗಿದೆ. ಪಂದ್ಯ ವೀಕ್ಷಣೆಗೆ 6000 ಮಂದಿಗೆ ಅವಕಾಶಗಳಿದ್ದು, ಸಂಸ್ಥೆ ವತಿಯಿಂದ ಕೆಲವರಿಗೆ ಉಚಿತ ಪಾಸ್ ಸೌಲಭ್ಯವಿದೆ.
ಪಂದ್ಯ ವೀಕ್ಷಣೆಗೆ ಮಾಡಬಯಸುವವರು ಅನ್ ಲೈನ್ ಮೂಲಕ 2000 ರೂಪಾಯಿ ದರ ನೀಡಿ ಟಿಕೆಟ್ ಬುಕ್ (www.owofcup.com) ಮಾಡಿಕೊಳ್ಳಬಹುದಾಗಿದೆ. ಉಚಿತ ಮಾಡಿದ್ರೆ ಒಮ್ಮೆಲೆ ಸಾವಿರಾರು ಮಂದಿ ಆಗಮನವಾಗಿ ನೂಕುನುಗ್ಗಲು ಆಗಬಹುದು. ಹಾಗಾಗಿ ಮುಂಜಗ್ರತಾ ಕ್ರಮವಾಗಿ ಟಿಕೆಟ್ ಸೇಲ್ ಮಾಡಲಾಗುತ್ತಿದೆ ಅಂತ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ನರಸಿಂಹಮೂರ್ತಿ ತಿಳಿಸಿದರು. ಜನವರಿ 8 ರ ಬೆಳಿಗ್ಗೆ 9 ಗಂಟೆಯಿಂದ ಪಂದ್ಯಾಟದ ಕಾರ್ಯಕ್ರಮಗಳು ಆರಂಭವಾಗಲಿದೆ.
ಹೆಸರಾಂತ ಕ್ರಿಕೆಟ್ ಆಟಗಾರರು ಕ್ಯಾಂಪಸ್‌ಗೆ ಆಗಮಿಸಿ ತರಬೇತಿ ನೀಡಲಿದ್ದಾರೆ. ಬಾಲಕರನ್ನು ಅರ್ಹತೆಗೆ ಅನುಗುಣವಾಗಿ ಆರಿಸಿ ಯಾವುದೇ ಶುಲ್ಕವಿಲ್ಲದೆ ವಸತಿ ಸಹಿತ ಸಂಪೂರ್ಣ ಉಚಿತವಾಗಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿಯನ್ನು ನೀಡಲಾಗುತ್ತದೆ.
ಅಕಾಡೆಮಿಯ ಹೆಸರಿನಲ್ಲಿ ಆಟಗಾರರನ್ನು ಗೌರವಿಸಲಾಗುವುದು. ಅರ್ಹತೆಯ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ನರಸಿಂಹಮೂರ್ತಿ ತಿಳಿಸಿದರು.