ಲಕ್ನೋ: ಜಗತ್ತು ಎದುರಿಸುತ್ತಿರುವ ವಿವಿಧ ಸಂಕಷ್ಟಗಳ ನಡುವೆ, ಭಾರತಕ್ಕೆ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಸಾಬೀತು ಪಡಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಉತ್ತರಪ್ರದೇಶದ (Uttar Pradesh) ಪಿಲಿಭಿತ್‍ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ, ಗುರಿ ಎಷ್ಟೇ ಕಠಿಣವಾಗಿದ್ದರೂ, ಅದನ್ನು ಸಾಧಿಸಲು ಭಾರತ ಸಂಕಲ್ಪ ಮಾಡಿದರೆ, ಅದು ಖಂಡಿತವಾಗಿಯೂ ಸಾಧಿಸುತ್ತದೆ. ಇಂದು ಈ ಸ್ಫೂರ್ತಿ ಮತ್ತು ಶಕ್ತಿಯೊಂದಿಗೆ, ನಾವು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ (Congress) ಸರ್ಕಾರವು ವಿಶ್ವದಿಂದ ಸಹಾಯವನ್ನು ಕೇಳುತ್ತಿದ್ದ ಸಮಯವಿತ್ತು. ಈಗ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಭಾರತದಿಂದ ಇಡೀ ಜಗತ್ತಿಗೆ ಔಷಧಿಗಳನ್ನು ಲಭ್ಯವಾಗುವಂತೆ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕವಿತಾ ಮನವಿಗೆ ಕೋರ್ಟ್ ಡೋಂಟ್ ಕೇರ್ – ಏ.23 ರವರೆಗೆ ಜೈಲೇ ಗತಿ
Advertisement
Advertisement
ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾದಾಗ, ಜನ ಅದರ ಬಗ್ಗೆ ಹೆಮ್ಮೆಪಡುತ್ತಾರೆ ಅಲ್ಲವೇ? ನಮ್ಮ ಚಂದ್ರಯಾನವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ನೀವು ಹೆಮ್ಮೆ ಪಟ್ಟಿದ್ದೀರಿ ಅಲ್ಲವೇ? ದೇಶ ಬಲಿಷ್ಠವಾದಾಗ ಜಗತ್ತು ನಮ್ಮ ಮಾತನ್ನು ಕೇಳುತ್ತದೆ ಎಂದಿದ್ದಾರೆ.
Advertisement
Advertisement
ಏಪ್ರಿಲ್ 19 ರಂದು ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದಲ್ಲಿ ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸಹರಾನ್‍ಪುರ, ಕೈರಾನಾ, ಮುಜಾಫರ್‍ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ್ ಮತ್ತು ಪಿಲಿಭಿತ್‍ನಲ್ಲಿ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ಗೆ ʻZ’ ಕೆಟಗರಿ ಭದ್ರತೆ