ಎಜ್‍ಬಾಸ್ಟನ್: ಮಧ್ಯೆ ಮಧ್ಯೆ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದರೂ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತವನ್ನು ಪೇರಿಸಿದ್ದು, ಪಾಕಿಸ್ತಾನಕ್ಕೆ 320 ರನ್‍ಗಳ ಗುರಿಯನ್ನು ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅವರ ಆಕರ್ಷಕ ಅರ್ಧಶತಕದಿಂದಾಗಿ 48 ಓವರ್‍ಗಳಲ್ಲಿ 319 ರನ್ ಗಳಿಸಿದೆ.
Advertisement
ರೋಹಿತ್ ಶರ್ಮಾ ಮತ್ತು ವಿರಾಟ್ ಶಿಖರ್ ಧವನ್ ಮೊದಲನೇ ವಿಕೆಟ್‍ಗೆ 147 ಎಸೆತಗಳಲ್ಲಿ 136 ರನ್ ಜೊತೆಯಾಟವಾಡಿದರು. ಶಿಖರ್ ಧವನ್ 68 ರನ್(65 ಎಸೆತ, 6 ಬೌಂಡರಿ, 1 ಸಿಕ್ಸರ್) ಗಳಿಸಿದಾಗ ಕ್ಯಾಚ್ ನೀಡಿ ಔಟಾದರು. ಶತಕದತ್ತ ದಾಪುಗಾಲು ಹಾಕುತ್ತಿದ್ದ ರೋಹಿತ್ ಶರ್ಮಾ 91 ರನ್( 119 ಎಸೆತ, 7 ಬೌಂಡರಿ, 2ಸಿಕ್ಸರ್) ಗಳಿಸಿದಾಗ ರನ್ ಔಟ್ ಆದರು.
Advertisement
ಯುವಿ ಕೊಹ್ಲಿ ಜುಗಲ್‍ಬಂದಿ: ಯುವರಾಜ್ ಕ್ರೀಸ್‍ಗೆ ಬಂದ ಬಳಿಕ ಭಾರತದ ರನ್ ವೇಗ ಹೆಚ್ಚಾಯಿತು. 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವಿ ಅಂತಿಮವಾಗಿ 53 ರನ್(32 ಎಸೆತ, 8 ಬೌಂಡರಿ, 1 ಸಿಕ್ಸರ್) ಗಳಿಸಿ ಎಲ್‍ಬಿಯಾದರು. ಇವರಿಬ್ಬರು ಮೂರನೇ ವಿಕೆಟ್‍ಗೆ 58 ಎಸೆತಗಳಲ್ಲಿ 93 ರನ್ ಸೊರೆಗೈದರು. ಅದರಲ್ಲೂ ವಾಹಬ್ ಎಸೆದ 46ನೇ ಓವರ್‍ನ 5 ಎಸೆತಗಳಲ್ಲಿ 20ರನ್ ಬಂದಿತ್ತು.
Advertisement
ಕೊಹ್ಲಿ ಕಮಾಲ್: ಆರಂಭದಲ್ಲಿ ನಿಧನವಾಗಿ ಆಡುತ್ತಿದ್ದ ಕೊಹ್ಲಿ 58 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಬಳಿಕ ಆಕ್ರಮಣಕಾರಿ ಆಟವನ್ನು ಆಡಲಾರಂಭಿಸಿದರು. ಅಂತಿಮವಾಗಿ 81 ರನ್( 68 ಎಸೆತ, 6 ಬೌಂಡರಿ, 3 ಸಿಕ್ಸರ್ ಸಿಡಿಸಿ) ಔಟಾಗದೇ ಉಳಿದರು.
Advertisement
ಕೊನೆಯಲ್ಲಿ ಸಿಡಿದ ಪಾಂಡ್ಯಾ: ಹಾರ್ದಿಕ್ ಪಾಂಡ್ಯಾ 20 ರನ್(6 ಎಸೆತ, 3 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 300 ರನ್‍ಗಳ ಗಡಿ ದಾಟಿಸಿದರು. ಮುರಿಯದ ನಾಲ್ಕನೇ ವಿಕೆಟ್‍ಗೆ ಕೊಹ್ಲಿ ಮತ್ತು ಪಾಂಡ್ಯಾ 10 ಎಸೆತಗಳಲ್ಲಿ 34 ರನ್ ಸೂರೆಗೈದರು. ಇಮಾದ್ ವಾಸೀಂ ಎಸೆದ 48 ನೇ ಓವರ್‍ನಲ್ಲಿ ಪಾಂಡ್ಯಾ ಮೂರು ಸಿಕ್ಸರ್ ಹೊಡೆದರೆ, ಕೊಹ್ಲಿ ಬೌಂಡರಿ ಹೊಡೆದ ಪರಿಣಾಮ ಈ ಓವರ್‍ನಲ್ಲಿ 23 ರನ್ ಬಂದಿತ್ತು.
ಹಸನ್ ಅಲಿ 1 ವಿಕೆಟ್ ಪಡೆದರೆ, ಶಾದಬ್ ಖಾನ್ 1 ವಿಕೆಟ್ ಪಡದರು. ಇತರೇ ರೂಪದಲ್ಲಿ 6 ರನ್ ಬಂದಿತ್ತು. 9ನೇ ಓವರ್ ಮತ್ತು 34ನೇ ಓವರ್‍ನಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು 48 ಓವರ್‍ಗೆ ಇಳಿಸಲಾಗಿತ್ತು.
ರನ್ ಓವರ್
50 ರನ್ 10.4 ಓವರ್
100 ರನ್ 19.3 ಓವರ್
150 ರನ್ 27.3 ಓವರ್
200 ರನ್ 37.5 ಓವರ್
250 ರನ್ 44.2 ಓವರ್
300 ರನ್ 47.1 ಓವರ್
319 ರನ್ 48 ಓವರ್