ನವದೆಹಲಿ: ಸಿಂಧೂನದಿ (Indus Water Treaty) ವಿಚಾರದಲ್ಲಿ ಡಬಲ್‌ಗೇಮ್ ಆಡ್ತಿರೋ ಪಾಕಿಸ್ತಾನದ (Pakistan) ವಿರುದ್ಧ ಭಾರತ (India) ಈಗ ಜಲಯುದ್ಧ (Water War) ಸಾರಿದೆ. ಸಿಂಧೂ ಜಲ ಒಪ್ಪಂದದಲ್ಲಿ ಬದಲಾವಣೆಗಾಗಿ ಪಾಕಿಸ್ತಾನಕ್ಕೆ ಭಾರತ ನೋಟಿಸ್ ಜಾರಿ ಮಾಡಿದೆ.
ಒಪ್ಪಂದದ ಉಲ್ಲಂಘನೆಯನ್ನು 90 ದಿನಗಳ ಒಳಗೆ ಸರಿಪಡಿಸಲು ಸೂಚಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಭಾರತದ ನಿರಂತರ ಪ್ರಯತ್ನದ ನಡುವೆಯೂ ಕಿಶೆನ್‌ಗಂಗಾ, ರಾಟ್ಲ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ಸ್ ಸಂಬಂಧ ಚರ್ಚಿಸಲು ಪಾಕಿಸ್ಥಾನ ಮುಂದಾಗಿಲ್ಲ. ಸಿಂಧೂ ಜಲ ಒಪ್ಪಂದಕ್ಕೆ ಅನುಗುಣವಾಗಿ ಸಂಪೂರ್ಣ, ಯಥಾವತ್ತಾಗಿ ಜಾರಿಗೊಳಿಸಿಲ್ಲ. ಇದು ಐಡಬ್ಲ್ಯೂಟಿಯಲ್ಲಿನ ಬದಲಾವಣೆಗಾಗಿ ಸೂಕ್ತ ಅಂತಲೂ ನೋಟಿಸ್‌ನಲ್ಲಿ ಹೇಳಿದೆ. ಇದನ್ನೂ ಓದಿ: 1 ವರದಿಗೆ ಕರಗಿತು 4 ಲಕ್ಷ ಕೋಟಿ ಸಂಪತ್ತು – 7ನೇ ಸ್ಥಾನಕ್ಕೆ ಜಾರಿದ ಅದಾನಿ: ಯಾವುದು ಎಷ್ಟು ಇಳಿಕೆ?
Advertisement
Advertisement
ಕಿಶೆನ್‌ಗಂಗಾ ಮತ್ತು ರಾಟ್ಲ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಗಳಿಗೆ ತಾಂತ್ರಿಕ ಆಕ್ಷೇಪ ಪರಿಶೀಲನೆಗೆ ಪರಿಣತರ ಸಮಿತಿಗೆ ಪಟ್ಟು ಹಿಡಿದಿದ್ದ ಪಾಕ್, ಏಕಾಏಕಿ ಹಿಂದೆ ಸರಿದಿತ್ತು. 1960ರ ಒಪ್ಪಂದದಂತೆ ಪೂರ್ವದ ಬಿಯಾಸ್, ರಾವಿ ಮತ್ತು ಸಟ್ಲೆಜ್ ನೀರಿನ ಹಕ್ಕು ಭಾರತಕ್ಕೆ ಹಾಗೂ ಪಶ್ಚಿಮದ ಮೂರು ನದಿಗಳಾದ ಸಿಂಧೂ, ಚೆನಾಬ್ ಮತ್ತು ಝೇಲಂ ನದಿಗಳ ನಿಯಂತ್ರಣ ಪಾಕಿಸ್ತಾನದ ಸುಪರ್ದಿಗೆ ದೊರಕಿತ್ತು.
Advertisement
Advertisement
ಸಿಂಧೂನದಿಯಿಂದ ಕೇವಲ ಶೇ.20ರಷ್ಟು ನೀರು ಭಾರತಕ್ಕೆ ಇದ್ದರೆ, ಶೇ. 80ರಷ್ಟು ನೀರು ಪಾಕಿಸ್ತಾನದಲ್ಲಿದೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k