ನವದೆಹಲಿ: ನಿಪಾ ವೈರಸ್ ಜ್ವರಕ್ಕೆ 16 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಅರ್) ಆಸ್ಟ್ರೇಲಿಯಾ ಸರ್ಕಾರದ ನೆರವನ್ನು ಕೋರಿದೆ.
ಆಸ್ಟ್ರೇಲಿಯಾ ಕ್ವೀನ್ಸ್ ಲ್ಯಾಂಡ್ ಸಂಶೋಧಕರು ನಿಪಾ ವೈರಾಣು ನಿಯಂತ್ರಣಕ್ಕೆ ಆ್ಯಂಟಿಬಾಡಿ ಒಂದನ್ನು ಸಂಶೋಧನೆ ಮಾಡಿದ್ದು, ಇದನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಿಲ್ಲ.
Advertisement
ಭಾರತದಲ್ಲಿ ಮನುಷ್ಯರಲ್ಲಿ ಕಂಡುಬಂದಿರುವ ನಿಪಾ ವೈರಾಣುವನ್ನು ಈ ಆ್ಯಂಟಿಬಾಡಿ ನಿಯಂತ್ರಿಸುವುದೇ ಎಂದು ಪರೀಕ್ಷಿಸಲು ಮೋನೋಕ್ಲೋನಲ್ ಆ್ಯಂಟಿಬಾಡಿಯನ್ನು ನೀಡುವಂತೆ ಮನವಿ ಮಾಡಿದ್ದೇವೆ ಎಂದು ಐಸಿಎಂಅರ್ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ತಿಳಿಸಿದ್ದಾರೆ.
Advertisement
ಆಸ್ಟ್ರೇಲಿಯಾದಲ್ಲಿ ಕೃತಕ ವಾತಾವರಣದಲ್ಲಿ ಟೆಸ್ಟ್ ಟ್ಯೂಬ್ ಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಮನುಷ್ಯರ ಮೇಲೆ ಪ್ರಯೋಗ ಮಾಡಿಲ್ಲ ಎಂದು ಅವರು ತಿಳಿಸಿದರು.
Advertisement
ಆ್ಯಂಟಿಬಾಡಿಯನ್ನು ಭಾರತದೊಂದಿಗೆ ಹಂಚಿಕೊಳ್ಳಲು ಆಸ್ಟ್ರೇಲಿಯ ಒಪ್ಪಿದೆ. ವೈರಾಣುವಿನಿಂದ ಆಗಿರುವ ಸೋಂಕಿನ ಪ್ರಮಾಣ ಹೆಚ್ಚಿದ್ದು ಎಷ್ಟರ ಮಟ್ಟಿಗೆ ಆ್ಯಂಟಿಬಾಡಿ ಮನುಷ್ಯರ ಮೇಲೆ ಕೆಲಸ ಮಾಡುತ್ತದೆ ಎಂದು ಈಗಲೇ ಹೇಳಲು ಬರುವುದಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ:ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!
Advertisement
ಕೊಯಿಕ್ಕೋಡುವಿನಲ್ಲಿ 9, ಮಲಪ್ಪುರಂ ನಲ್ಲಿ 3 ಇಬ್ಬರು ಸೇರಿ ಒಟ್ಟು 12 ಮಂದಿ ನಿಪಾ ವೈರಸ್‍ನಿಂದಾಗಿ ಸಾವನ್ನಪ್ಪಿದ್ದಾರೆ. 160 ಸ್ಯಾಂಪಲ್ ಗಳನ್ನು ವೈರಾಲಜಿ ಇನ್ಸ್ಟಿಟ್ಯೂಟ್ ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ನಿರ್ಧಿಷ್ಟ ಲಕ್ಷಣಗಳು ಕಂಡು ಬಂದಿರುವ 18 ಜನರು ಕೊಯಿಕ್ಕೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಪಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಮಲಪ್ಪುರಂ ನ 22 ಮಂದಿಯನ್ನು ಕೊಯಿಕ್ಕೋಡು ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಇರಿಸಲಾಗಿದೆ. 95 ಕುಟುಂಬಗಳ ಮೇಲೆ ವಿಶೇಷ ಕಣ್ಗಾವಲು ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.