ನವದೆಹಲಿ: ಕೇಂದ್ರ ಎನ್‍ಡಿಎ ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣೆಗಳ ಪರಿಣಾಮವಾಗಿ ದೇಶದ ಆಂತರಿಕ ಉತ್ಪನ್ನ ದರ (ಜಿಡಿಪಿ) ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾದ ನಾಲ್ಕನೇಯ ತ್ರೈಮಾಸಿಕದಲ್ಲಿ ಶೇ. 7.7 ರಷ್ಟು ಏರಿಕೆ ಆಗಿದ್ದು, ಚೀನಾವನ್ನು ಹಿಂದಿಕ್ಕಿದೆ. ಈ ಅವಧಿಯಲ್ಲಿ ಚೀನಾ 6.8% ಪ್ರಗತಿ ಸಾಧಿಸಿದೆ.
ಭಾರತದ ಜಿಡಿಪಿ ಬೆಳವಣಿಗೆಗೆ ಪ್ರಮುಖ 7 ಕ್ಷೇತ್ರಗಳಲ್ಲಿ ಉಂಟಾಗುತ್ತಿರುವ ವೇಗದ ಪ್ರಗತಿ ಕಾರಣವಾಗಿದ್ದು, ಪ್ರಮುಖವಾಗಿ ಕೃಷಿ (4.5%), ಉತ್ಪಾದನೆ (9.1%) ಮತ್ತು ನಿರ್ಮಾಣ ಕ್ಷೇತ್ರದಲ್ಲಿ (11.5%) ತಮ್ಮ ಪಾಲುದಾರಿಕೆಯನ್ನು ನೀಡಿದೆ. ಭಾರತ ಏಷ್ಯಾ ರಾಷ್ಟ್ರಗಳಲ್ಲಿ ಮೂರನೇ ಅತೀದೊಡ್ಡ ಆರ್ಥಿಕತೆಯನ್ನು ಹೊಂದಿದೆ ಎಂದು ಕೇಂದ್ರ ಸಾಂಖ್ಯಿಕ ಕಚೇರಿ ತಿಳಿಸಿದೆ.
Advertisement
GDP growth has been increasing continuously every quarter with growth of 7.7% in Q4 of 2017-18. Shows that economy is on right track & set for even higher growth in the future. This is #SahiVikas under leadership of PM Narendra Modi ji & Arun Jaitley ji: Piyush Goyal (file pic) pic.twitter.com/5SrBOTh7ZG
— ANI (@ANI) May 31, 2018
Advertisement
ಪ್ರಸಕ್ತ 2017-2018 ವರ್ಷದ ನಾಲ್ಕು ತ್ರೈಮಾಸಿಕಗಳಲ್ಲಿ ಕ್ರಮವಾಗಿ 5.6%, 6.3%, 7% ಮತ್ತು 7.7% ಬೆಳವಣಿಗೆಯನ್ನು ದಾಖಲಿಸಿದೆ. ಈ ಅಂಕಿ ಅಂಶಗಳು ಕೇಂದ್ರ ಸರ್ಕಾರ ತೆಗೆದುಕೊಂಡ ಆರ್ಥಿಕ ಸುಧಾರಣಾ ಕ್ರಮಗಳಿಗೆ ಸಾಕ್ಷಿಯಾಗಿದೆ. ಪ್ರಮುಖವಾಗಿ ದೇಶದ ಉತ್ಪಾದನಾ ಕ್ಷೇತ್ರದಲ್ಲಿ 2017 -2018 ರ ಎರಡು ತ್ರೈಮಾಸಿಕದಲ್ಲಿ ಕ್ರಮವಾಗಿ 8.5% ಹಾಗೂ 9.1% ರಷ್ಟು ಹೆಚ್ಚಳವಾಗಿದೆ. ಅಲ್ಲದೇ ಕೇಂದ್ರ ಜಾರಿಗೆ ತಂದ ಜಿಎಸ್‍ಟಿ ಕ್ರಮಗಳು ಕೈಗಾರಿಕಾ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದೆ.
Advertisement
1/2 The constant increasing trend of quarterly GDP numbers in the Four-Quarters of 2017-18 at 5.6%, 6.3%, 7% and 7.7% indicates that the structural measures of reforms undertaken by Government is now bringing rich dividends in the form of higher GDP Growth Rate.
— Dr Hasmukh Adhia (@adhia03) May 31, 2018
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಆರ್ಥಿಕ ತಜ್ಞರದ ತುಷಾರ ಆರೋರ ಅವರು, ಜಿಡಿಪಿ ಬೆಳವಣಿಗೆ ದರದ ಅಂದಾಜು ಮಟ್ಟವನ್ನು ದಾಟಿ ಆರ್ಥಿಕ ಪ್ರಗತಿ ಕಂಡಿದೆ. ಅದರಲ್ಲೂ ಜಿಎಸ್‍ಟಿ ಜಾರಿಗೆಯಿಂದ ಉಂಟಾದ ತೊಂದರೆ ಸಾಮರ್ಥವಾಗಿ ನಿಭಾಸಿದ್ದೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಜಿಡಿಪಿ ಬೆಳವಣಿಗೆ ಮಾರ್ಚ್ ಅಂತ್ಯದ ವೇಳೆಗೆ ಶೇ. 7% ರಷ್ಟು ಬೆಳವಣಿಗೆ ಕಾಣಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಅಂದಾಜು ಮಾಡಿದ್ದರು.
ಪ್ರಸ್ತುತ ದೇಶದ ಅರ್ಥಿಕ ದರ ಬೆಳವಣಿಕೆ ಏರಿಕೆ ಆಗಿರುವುದನ್ನು ಗಮನಿಸಿದ ಆರ್ಥಿಕ ತಜ್ಞರು ಮುಂದಿನ 2018 – 2019 ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ದರ ಗಣನೀಯ ಪ್ರಮಾಣದಲ್ಲಿ ಏರಿಕೆ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪ್ರಮುಖವಾಗಿ ಮುಂದಿನ ಆರ್ಥಿಕ ತ್ರೈಮಾಸಿಕದಲ್ಲಿ ಮನ್ಸೂನ್ ಮಳೆ ಆಧಾರಿಸಿ ಕೃಷಿಯಲ್ಲಿ ಹೆಚ್ಚಿನ ಬೆಳವಣಿಗೆ ಉಂಟಾಗುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2/2What is most noticeable is the increase in the Growth Rate of GVA of Manufacturing Sector in the last two Quarters of 2017-18 at 8.5% and 9.1% at constant price. We would like to believe that GST has given a big boost to the Industrial Sector.
— Dr Hasmukh Adhia (@adhia03) May 31, 2018
ಯಾವ ಅವಧಿಯಲ್ಲಿ ಎಷ್ಟಿತ್ತು?
ಮಾರ್ಚ್ 2016 – 9.2%
ಜೂನ್ 2016 – 7.9%
ಸೆಪ್ಟೆಂಬರ್ 2016 – 7.5%
ಡಿಸೆಂಬರ್ 2016 – 7%
ಮಾರ್ಚ್ 2017 – 6.1%
ಜೂನ್ 2017 – 5.7%
ಸೆಪ್ಟೆಂಬರ್ 2017 – 6.5%
ಡಿಸೆಂಬರ್ 2017 – 7.2%
ಮಾರ್ಚ್ 2018 – 7.7%
GDP numbers are on an expected note, it is what we said in the Economic Survey: Arvind Subramanian, CEA pic.twitter.com/38O6f52F8h
— ANI (@ANI) May 31, 2018