ಭಾರತಕ್ಕೆ ರಷ್ಯಾದಿಂದ ಬಂತು ಎಸ್ 400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ

Public TV
1 Min Read
russian s400 missilere

ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ ನಡುವೆಯೂ ರಷ್ಯಾ ಭಾರತಕ್ಕೆ ಮಿಲಿಟರಿ ಸರಬರಾಜು ನೀಡುವುದನ್ನು ಮುಂದುವರಿಸಿದೆ. ಈಗಾಗಲೇ ಭಾರತ ಮಾಸ್ಕೋದಿಂದ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ.

ಯುದ್ಧದ ನಡುವೆಯೂ ರಷ್ಯಾ ಭಾರತಕ್ಕೆ ಮಿಲಿಟರಿ ಸರಬರಾಜುಗಳನ್ನು ಕಳುಹಿಸುತ್ತಿದೆ. ಇಲ್ಲಿವರೆಗೆ ರಷ್ಯಾ ಯಾವುದೇ ವಸ್ತುಗಳ ರವಾನೆಯಲ್ಲಿ ವಿಳಂಬ ಮಾಡಿಲ್ಲ. ಎಸ್-400 ಕ್ಷಿಪಣಿ ವ್ಯವಸ್ಥೆಯನ್ನು ಹಡಗಿನ ಮೂಲಕ ಭಾರತಕ್ಕೆ ಕಳುಹಿಸಿದೆ. ಕ್ಷಿಪಣಿ ವ್ಯವಸ್ಥೆಯ ಇತರ ಭಾಗಗಳು ವಿಮಾನ ಹಾಗೂ ಸಮುದ್ರ ಮಾರ್ಗಗಳ ಮೂಲಕ ಆಗಮಿಸಿವೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

Russia S 400

ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ 45 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ರಷ್ಯಾದಿಂದ ಖರೀದಿ ಮಾಡಿದ್ದ ಸರಬರಾಜುಗಳನ್ನು ಭಾರತ ಸ್ವೀಕರಿಸಲು ಕಷ್ಟವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿತ್ತು. ಆದರೂ ಭಾರತ ಇದೀಗ ರಷ್ಯಾದಿಂದ ಮಿಲಿಟರಿ ವಸ್ತುಗಳನ್ನು ಯಾವುದೇ ಸಮಸ್ಯೆಗಳಿಲ್ಲದೇ ಸ್ವೀಕರಿಸಿದೆ. ಇದನ್ನೂ ಓದಿ: ಅಮೆರಿಕ ನೆಲದಲ್ಲೇ ಅಮೆರಿಕಕ್ಕೆ ತಿರುಗೇಟು ನೀಡಿದ ಭಾರತ

ಪಾಶ್ಚಿಮಾತ್ಯ ದೇಶಗಳು ಹೇರಿರುವ ನಿರ್ಬಂಧಗಳಿಂದ ರಷ್ಯಾ ಮುಂದೆ ಪಾವತಿ ವಿಚಾರದಲ್ಲಿ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಭಾರತ ಪರಿಹಾರವನ್ನು ಹುಡುಕುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *