ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ 7 ವಿಕೆಟ್‍ಗಳ ಹೀನಾಯ ಸೋಲುಂಡ ಟೀಮ್ ಇಂಡಿಯಾಗೆ ಸೋಲಿನ ಮೇಲೆ ಸೋಲಾಗಿದೆ. ಜೊತೆಗೆ ಪಂದ್ಯದಲ್ಲಿ ಮಾಡಿದ ಒಂದು ಎಡವಟ್ಟಿನಿಂದಾಗಿ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ 2 ಅಂಕಗಳನ್ನು ಕಳೆದುಕೊಂಡು 4 ಸ್ಥಾನಕ್ಕೆ ಕುಸಿತ ಕಂಡಿದೆ.
Advertisement
ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಲೋ ಓವರ್‌ರೇಟ್ ಕಾರಣ ದಂಡಕ್ಕೆ ಗುರಿಯಾಗಿದೆ. ಪಂದ್ಯದಲ್ಲಿ ಆಟಗಾರರ ಸಂಭಾವನೆಯಲ್ಲಿನ ಶೇ.40ರಷ್ಟು ತಂಡದೊಂದಿಗೆ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ 2 ಅಂಕಗಳ ನಷ್ಟ ಅನುಭವಿಸಿದೆ. ಪಂದ್ಯದಲ್ಲಿ ಭಾರತ ತಂಡ ನಿಗದಿತ ಸಮಯಕ್ಕೆ ಸರಿಯಾಗಿ 2 ಓವರ್‌ಗಳನ್ನು ಎಸೆಯುವುದು ಬಾಕಿಯಿತ್ತು. ಈ ಕಾರಣ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಕ್ರಮ ಕೈಗೊಂಡಿದ್ದಾರೆ. ಪರಿಣಾಮ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಮೂರನೇ ಸ್ಥಾನಕ್ಕೆ ಏರಿಕೆ ಕಂಡರೆ, ಟೀಂ ಇಂಡಿಯಾ 4ನೇ ಸ್ಥಾನಕ್ಕೆ ಕುಸಿತ ಕಂಡು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‍ಗೇರುವ ಅವಕಾಶ ವಂಚಿತವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಧೋನಿ ಹುಟ್ಟುಹಬ್ಬಕ್ಕಾಗಿ 41 ಅಡಿ ಎತ್ತರದ ಕಟೌಟ್ ಹಾಕಿದ ಫ್ಯಾನ್ಸ್
Advertisement
Advertisement
5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ನೀಡಿದ್ದ 378 ರನ್‍ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡವು 2ನೇ ಇನ್ನಿಂಗ್ಸ್‌ನ 76.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 378 ರನ್‍ಗಳಿಸುವ ಮೂಲಕ ಜಯ ಸಾಧಿಸಿತು. ಇದರಿಂದ ಅಂತಿಮ ಟೆಸ್ಟ್ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಟೀಂ ಇಂಡಿಯಾ ಕನಸು ಭಗ್ನಗೊಂಡಿತು. ಇಂಗ್ಲೆಂಡ್ ತಂಡ ಐದು ಟೆಸ್ಟ್‌ಗಳ ಸರಣಿಯಲ್ಲಿ 2-2 ಅಂತರದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಭಾರತದ ಕನಸು ಭಗ್ನ – ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಜಯ
Advertisement
India suffer a double blow in the #WTC23 standings.
Read more ???? https://t.co/KtGuIUqQHK pic.twitter.com/s7sx9Xj4HC
— ICC (@ICC) July 6, 2022
ಐಸಿಸಿ ನೀತಿ ಸಂಹಿತೆ 2.22 ನಿಯಮದನ್ವಯ ಸ್ಲೋ ಓವರ್‌ರೇಟ್ ಪ್ರಮಾದ ಎಸಗಿರುವ ಕಾರಣ ಕನಿಷ್ಠ ಕ್ರಮವಾಗಿ ಭಾರತ ತಂಡ ಆಟಗಾರರಿಗೆ ಪಂದ್ಯದ ಸಂಭಾವನೆಯಲ್ಲಿನ ಶೇ. 40ರಷ್ಟನ್ನು ದಂಡ ವಿಧಿಸಲಾಗಿದೆ. ಭಾರತ ತಂಡ ನಿಗದಿತ ಸಮಯದ ಅಂತ್ಯಕ್ಕೆ ಇನ್ನು 2 ಓವರ್‌ಗಳನ್ನು ಎಸೆಯುವುದು ಬಾಕಿಯಿತ್ತು. ಜೊತೆಗೆ 16.11.2 ನಿಯಮದ ಪ್ರಕಾರ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‍ಶಿಪ್‍ನ 2 ಅಂಕಗಳನ್ನು ಭಾರತ ತಂಡ ಕಳೆದುಕೊಂಡಿತು.
ಈ ಮೂಲಕ ಆಸ್ಟ್ರೇಲಿಯಾ ತಂಡ ಪಾಯಿಂಟ್ ಪಟ್ಟಿಯಲ್ಲಿ 77.78 ಪಿಸಿಟಿ ಪಡೆದು ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 71.43 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಪಾಕಿಸ್ತಾನ 52.38 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿಕೆ ಕಂಡರೆ, ಭಾರತ 52.08 ಪಿಸಿಟಿಯೊಂದಿಗೆ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ.