-ರಾಜಸ್ಥಾನದ ಜೈಸಲ್ಮೇರ್‌ನಲ್ಲೂ ಪಟಾಕಿ ಮಾರಾಟ, ಖರೀದಿ ನಿಷೇಧ
ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ (India-Pakistan) ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಚಂಡೀಗಢ ಸರ್ಕಾರ (Chandigarh Government) 2 ತಿಂಗಳುಗಳ ಕಾಲ ಪಟಾಕಿ ನಿಷೇಧಿಸಿದೆ.
ಪಹಲ್ಗಾಮ್ ದಾಳಿಯ (Pahalgam Terrorist Attack) ಬಳಿಕ ಭಾರತ ಹಾಗೂ ಪಾಕ್ ನಡುವಿನ ಕಾದಾಟ ಹೆಚ್ಚಾಗುತ್ತಿದೆ. ಹಿಂದೂಗಳ ನರಮೇಧಕ್ಕೆ ಪ್ರತೀಕಾರವಾಗಿ `ಆಪರೇಷನ್ ಸಿಂಧೂರ’ದಡಿಯಲ್ಲಿ (Operation Sindoor) ಭಾರತೀಯ ಸೇನೆ ಪಾಕ್ ಮೇಲೆ ವಾಯುದಾಳಿ ನಡೆಸಿತ್ತು. ಬಳಿಕ ಗುರುವಾರ ರಾತ್ರಿ ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತವು ತಕ್ಕ ಉತ್ತರ ನೀಡಿದೆ.ಇದನ್ನೂ ಓದಿ: ನಮ್ಮ ನಾಯಕ ಹೇಡಿ.. ಮೋದಿ ಹೆಸರು ಹೇಳುವುದಕ್ಕೂ ಹೆದರುತ್ತಿದ್ದಾರೆ: ತಮ್ಮ ಪ್ರಧಾನಿ ವಿರುದ್ಧವೇ ಗುಡುಗಿದ ಪಾಕ್ ಸಂಸದ
ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಯುದ್ಧ ಭೀತಿ ಹಿನ್ನೆಲೆ ಇದೀಗ ಚಂಡೀಗಢ ಸರ್ಕಾರ ಎರಡು ತಿಂಗಳುಗಳ ಪಟಾಕಿ ನಿಷೇಧಿಸಿದೆ. ಮದುವೆ, ಶುಭ ಸಮಾರಂಭಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ಇನ್ನೂ ರಾಜಸ್ಥಾನದ ಜೈಸಲ್ಮೇರ್‌ನಲ್ಲಿಯೂ (Jaisalmer) ಪಟಾಕಿ ಸಿಡಿಸುವುದರ ಜೊತೆಗೆ ಮಾರಾಟ ಹಾಗೂ ಖರೀದಿಯನ್ನು ನಿಷೇಧಿಸಿಲಾಗಿದೆ.
ಈ ಕುರಿತು ಚಂಡೀಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಶಾಂತ್ ಕುಮಾರ್ ಯಾದವ್ ಮಾತನಾಡಿ, 2023ರ ಬಿಎನ್‌ಎಸ್ (BNS) ಸೆಕ್ಷನ್ 163ರ ಅಡಿಯಲ್ಲಿ 2025ರ ಮೇ 09 ರಿಂದ ಜುಲೈ 7ರವರೆಗೆ ಪಟಾಕಿ ನಿಷೇಧಿಸಲಾಗಿದೆ ಎಂದು ಆದೇಶಿಸಿದ್ದಾರೆ.
ಮದುವೆ, ಶುಭ ಸಮಾರಂಭ ಹಾಗೂ ಧಾರ್ಮಿಕ ಹಬ್ಬಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಕಾರಣ ಯುದ್ಧ ಭೀತಿಯ ಸಂದರ್ಭದಲ್ಲಿ ಈ ರೀತಿ ಪಟಾಕಿ ಶಬ್ದವು ಡ್ರೋನ್ ಹಾಗೂ ಕ್ಷಿಪಣೆ ದಾಳಿಯ ಭ್ರಮೆಯನ್ನು ಸೃಷ್ಟಿಸಿ, ಸಾರ್ವಜನಿಕರಲ್ಲಿ ಭಯ ಉಂಟು ಮಾಡುತ್ತದೆ. ಹೀಗಾಗಿ ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಎಲ್‌ಒಸಿಯಲ್ಲಿ ಭಾರತ-ಪಾಕ್ ಸಂಘರ್ಷ; ಭಾರತೀಯ ಯೋಧ ಹುತಾತ್ಮ