ನವದೆಹಲಿ: ಭಾರತ ಪಾಕಿಸ್ತಾನದ ಭಯೋತ್ಪಾದನ ಕೇಂದ್ರಗಳ ಮೇಲೆ ವಾಯು ದಾಳಿ ನಡೆಸಿದ ಬಳಿಕ ಎರಡು ದೇಶಗಳ ನಡುವಿನ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಯುದ್ಧ ನಡೆಯಬಹುದೇ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.
ಒಂದೊಮ್ಮೆ ಎರಡು ದೇಶಗಳ ನಡುವೆ ನೇರ ಯುದ್ಧ ಪರಿಸ್ಥಿತಿ ನಿರ್ಮಾಣವಾದರೆ ಪಾಕಿಸ್ತಾನ ಶಕ್ತಿ ಎಷ್ಟಿದೆ ಹಾಗೂ ಭಾರತ ಬಲ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Advertisement
Advertisement
ಬಜೆಟ್
ಭಾರತ – 2018 ರ ಬಜೆಟ್‍ನಲ್ಲಿ ಭಾರತ ರಕ್ಷಣಾ ಕ್ಷೇತ್ರಕ್ಕೆ 58 ಬಿಲಿಯನ್ ಡಾಲರ್ ಅನುದಾನ ನೀಡಿದೆ. ಇದು ಭಾರತದ ಜಿಡಿಪಿಯ ಶೇ.2.1 ರಷ್ಟು ಹೊಂದಿದೆ. ಬಜೆಟ್ ನ ಶೇ.9.1 ರಷ್ಟು ಹಣ ಮಿಲಿಟರಿಗೆ ವಿನಿಯೋಗಿಸಿದೆ.
Advertisement
ಪಾಕಿಸ್ತಾನ – 2018ರ ಬಜೆಟ್ ನಲ್ಲಿ 11 ಬಿಲಿಯನ್ ಡಾಲರ್ ನೀಡಿದೆ. ಇದರಲ್ಲಿ 100 ಮಿಲಿಯನ್ ಡಾಲರ್ ವಿದೇಶಿ ನೆರವಿನಿಂದ ಪಡೆದಿದೆ. ಇದು ಪಾಕ್‍ನ ಜಿಡಿಪಿಯ ಶೇ.3.6 ರಷ್ಟಿದ್ದು, ಒಟ್ಟಾರೆ ಶೇ.16 ರಷ್ಟು ಹಣ ಮಿಲಿಟರಿಗೆ ವಿನಿಯೋಗಿಸಿದೆ.
Advertisement
ಕ್ಷಿಪಣಿಗಳ ಸಾಮರ್ಥ್ಯ
ಭಾರತ – 5 ಸಾವಿರ ಕಿಲೋ ಮೀಟರ್ ದೂರ ಸಾಗಬಲ್ಲ ಅಗ್ನಿ 5 ನಮ್ಮ ಬಳಿಯಿದೆ. ಭಾರತ 140 ರಿಂದ 150 ಅಣ್ವಸ್ತ್ರ ಗಳನ್ನು ಅಭಿವೃದ್ಧಿ ಪಡಿಸಿದೆ.
ಪಾಕಿಸ್ತಾನ – ಷಹೀನ್-2 ಮಿಸೈಲ್ 2 ಸಾವಿರ ಕಿಲೋ ಮೀಟರ್ ದೂರ ಸಾಗುತ್ತದೆ. ಅಲ್ಲದೇ 130 ರಿಂದ 140 ಅಣ್ವಸ್ತ್ರಗಳನ್ನು ಅಭಿವೃದ್ಧಿ ಪಡಿಸಿದೆ.
ಭೂಸೇನೆ
ಭಾರತ – 12 ಲಕ್ಷ ಯೋಧರು, 336 ಶಸ್ತ್ರ ಸಜ್ಜಿತ ಸಿಬ್ಬಂದಿ ವಾಹಕಗಳು, 3,565 ಯುದ್ಧ ಟ್ಯಾಂಕರ್ ಹಾಗೂ 9,472 ಅರ್ಟಿಲ್ಲರಿ ಗನ್ ಹೊಂದಿದೆ.
ಪಾಕಿಸ್ತಾನ – 5.6 ಲಕ್ಷ ಸೇನಾ ಪಡೆ, 1,605 ಶಸ್ತ್ರ ಸಜ್ಜಿತ ಸಿಬ್ಬಂದಿ ವಾಹಕಗಳು, 2,496 ಯುದ್ಧ ಟ್ಯಾಂಕರ್ ಹಾಗು 4,472 ಆರ್ಟಿಲ್ಲರಿ ಗನ್ ಗಳಿದೆ.
ವಾಯುಸೇನೆ
ಭಾರತ – 1.27 ಲಕ್ಷ ಯೋಧರು ಸೇರಿ 720 ಹೆಲಿಕಾಪ್ಟರ್ ಗಳನ್ನು ಹೊಂದಿದೆ. ಇದರಲ್ಲಿ 590 ಫೈಟರ್ ಜೆಟ್, 708 ಸಾಗಣೆ ವಿಮಾನಗಳು, 15 ದಾಳಿ ಹೆಲಿಕಾಪ್ಟರ್ ಗಳಿವೆ. ರಷ್ಯಾ ತಂತ್ರಜ್ಞಾನದ ಮಿಗ್ 21 ಮತ್ತು ಫ್ರಾನ್ಸ್‍ನ ಮಿರಾಜ್-2000 ಭಾರತ ಪ್ರಮುಖ ವಿಮಾನವಾಗಿದೆ.
ಪಾಕಿಸ್ತಾನ – 320 ಫೈಟರ್ ಜೆಟ್, 296 ಸಾಗಣೆ ವಿಮಾನಗಳು, 49 ದಾಳಿ ಹೆಲಿಕಾಪ್ಟರ್ ಸೇರಿ ಒಟ್ಟು 328 ಹೆಲಿಕಾಪ್ಟರ್ ಗಳಿದೆ. ಚೀನಾ ಅಭಿವೃದ್ಧಿ ಪಡಿಸಿದ ಎಫ್-7ಪಿಜಿ, ಮತ್ತು ಅಮೆರಿಕದಿಂದ ಖರೀದಿಸಿರುವ ಫಾಲ್ಕನ್-16 ಫೈಟಿಂಗ್ ಜೆಟ್‍ಗಳನ್ನು ವಾಯುಪಡೆ ಹೊಂದಿದೆ.
ನೌಕಾಪಡೆ:
ಭಾರತ 7 ಸಾವಿರ ಕಿಲೋ ಮೀಟರ್ ಕರಾವಳಿ ತೀರ ಪ್ರದೇಶ ಹೊಂದಿದ್ದರೆ, ಪಾಕಿಸ್ತಾನ ಕೇವಲ 1 ಸಾವಿರ 46 ಕಿಮೀ ಕರಾವಳಿ ತೀರ ಪ್ರದೇಶ ಹೊಂದಿದೆ. ಭಾರತದ ಬಳಿ ಒಂದು ಯುದ್ಧ ವಿಮಾನಗಳನ್ನು ಹೊತ್ಯೊಯಬಲ್ಲ ನೌಕೆ ಹೊಂದಿದ್ದರೆ, 14 ವಿಮಾನನೌಕೆ (ಡೆಸ್ಟ್ರಾಯರ್) ಗಳನ್ನು ಹೊಡೆದುರುಳಿಸಬಲ್ಲ ನೌಕೆಗಳಿವೆ. ಅಲ್ಲದೇ 16 ಜಲಾಂತರ್ಗಾಮಿ ನೌಕೆಗಳು ಹಾಗೂ 13 ಯುದ್ಧ ನೌಕೆ ಮತ್ತು 106 ಕರಾವಳಿ ಯುದ್ಧ ಹಡಗುಗಳು ಇದೆ.
ಪಾಕಿಸ್ತಾನ 8 ಜಲಾತರ್ಗಾಮಿ ನೌಕೆ ಹಾಗೂ 9 ಯುದ್ಧ ನೌಕೆಗಳಿವೆ. ಕಡಿಮೆ ಕರಾವಳಿ ಪ್ರದೇಶವನ್ನು ಹೊಂದಿರುವ ಕಾರಣ ಪಾಕಿಸ್ತಾನ ನೌಕಾಬಲ ಭಾರತಕ್ಕೆ ಹೋಲಿಸಿದರೆ ಕಡಿಮೆಯಿದೆ.
ಭಾರತ ನೌಕಾಸೇನೆಯಲ್ಲಿ ವಿಮಾನ ವಾಹಕ ನೌಕೆ ವಿಕ್ರಮಾದಿತ್ಯ ಭಾರತದ ಪ್ರಮುಖ ಶಕ್ತಿ. ಈ ವಿಮಾನ ವಾಹಕ ನೌಕೆ ಯುದ್ಧ ವಿಮಾನಗಳ ಹಾರಾಟವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ ಈ ವಿಮಾನಗಳಿಗೆ ಇಂಧನವನ್ನು ಇದರಲ್ಲಿ ತುಂಬಿಸಬಹುದು.
https://www.youtube.com/watch?v=UmBWPjV5k7g
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv