ಹುಬ್ಬಳ್ಳಿ: ಇಂದು ಭಾರತ ಮತ್ತು ಪಾಕ್ ಹೈವೋಲ್ಟೇಜ್ ಕ್ರಿಕೆಟ್ ಮ್ಯಾಚ್ ಹಿನ್ನೆಲೆಯಲ್ಲಿ ಇಡೀ ಕ್ರೀಡಾ ಜಗತ್ತೆ ದುಬೈನತ್ತ ಕಾತುರದಿಂದ ನೋಡುತ್ತಿದೆ. ಅಂತೆಯೇ ಇದೀಗ ಹುಬ್ಬಳ್ಳಿಯ ದರ್ಗಾವೊಂದರಲ್ಲಿ ಮುಸ್ಲಿಮರು ಭಾರತದ ಗೆಲುವಿಗೆ ಪೂಜೆ ಸಲ್ಲಿಸಿದ್ದಾರೆ.
Advertisement
ಹೌದು. ಪ್ರತೀ ಬಾರಿ ಪಾಕಿಸ್ತಾನದ ವಿರುದ್ಧ ಜಯಭೇರಿ ಬಾರಿಸುತ್ತಿದ್ದ ಬ್ಲೂ ಬಾಯ್ಸ್, ಕಳೆದ ಬಾರಿ ಕಳಪೆ ಆಟವಾಡಿ ಸೋತಿದ್ದರು. ಆದರೆ ಈ ಬಾರಿ ಭಾರತ ಗಲ್ಲಲೇ ಬೇಕು ಅಂತ ಹುಬ್ಬಳ್ಳಿಯ ಮುಸ್ಲಿಂ ಯುವಕರು ಐತಿಹಾಸಿಕ ದರ್ಗಾದಲ್ಲಿ ವಿಶೇಷ ಪೂಜೆ ಜೊತೆಗೆ ಪ್ರಾರ್ಥನೆ ಸಲ್ಲಿಸಿ ಕ್ರೀಡಾಭಿಮಾನ ಮೆರೆದಿದ್ದಾರೆ. ಇದನ್ನೂ ಓದಿ: AsiaCup 2022: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಲಂಕಾ – ಆಫ್ಘನ್‌ಗೆ 8 ವಿಕೆಟ್‌ಗಳ ಸುಲಭ ಜಯ
Advertisement
Advertisement
ಹಳೇ ಹುಬ್ಬಳ್ಳಿಯ ಫತೆಷಾ ವಲಿ ದರ್ಗಾದಲ್ಲಿ ಕ್ರಿಕೆಟ್ ಪ್ರಿಯ ಮುಸ್ಲಿಂ ಯುವಕರು ರಾಷ್ಟ್ರ ಧ್ವಜ ಹಿಡಿದು ಪೂಜೆ ಸಲ್ಲಿಸಿ, ಪ್ರಾರ್ಥನೆ ನಡೆಸಿ ಭಾರತ ಗೆಲುವಿಗೆ ದೇವರ ಬಳಿ ಮೊರೆ ಹೋಗಿದ್ದಾರೆ. ತನ್ನ ಪ್ರತಿಯೊಂದು ಯುದ್ಧಕ್ಕೂ ಮೊದಲು ಟಿಪ್ಪು ಸುಲ್ತಾನ ಈ ದರ್ಗಾಕ್ಕೆ ಪೂಜೆ ಸಲ್ಲಿಸಿ ಬಳಿಕ ಯುದ್ಧ ಮಾಡಿ ಗೆಲ್ಲುತ್ತಿದ್ದ ಎಂಬ ಪ್ರತೀತಿಯನ್ನು ಈ ದರ್ಗಾ ಹೊಂದಿದೆ.