ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಸರಣಿಯನ್ನು ಕೈ ವಶ ಮಾಡಿಕೊಂಡರೂ ಟೀಂ ಇಂಡಿಯಾ ವಿಶ್ವ ದಾಖಲೆ ನಿರ್ಮಿಸುವ ಅವಕಾಶ ಸ್ಪಲ್ಪದರಲ್ಲಿಯೇ ಕೈ ತಪ್ಪಿದೆ.
ಹೌದು, ಒಂದು ವೇಳೆ 2 ಪಂದ್ಯಗಳನ್ನು ಗೆದ್ದಿದ್ದರೆ ಅಂತರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಯ ಪಂದ್ಯಗಳಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಗೆಲುವು ಪಡೆದ ತಂಡ ಎಂಬ ದಾಖಲೆಯನ್ನು ಟೀಂ ಇಂಡಿಯಾ ನಿರ್ಮಿಸುತಿತ್ತು.
Advertisement
Advertisement
2017ರಲ್ಲಿ ಭಾರತ ಒಟ್ಟು 37 ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಟೀಂ ಇಂಡಿಯಾ ಪಡೆದ 37 ಗೆಲುವುಗಳಲ್ಲಿ 7 ಟೆಸ್ಟ್, 21 ಏಕದಿನ ಪಂದ್ಯ ಹಾಗೂ 9 ಟಿ20 ಪಂದ್ಯಗಳು ಒಳಗೊಂಡಿದೆ.
Advertisement
ವರ್ಷ ಒಂದರಲ್ಲಿ ಅತಿ ಹೆಚ್ಚು ಪಂದ್ಯ ಗೆಲುವು ಪಡೆದ ರಾಷ್ಟ್ರಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾಗೆ ಮೊದಲ ಸ್ಥಾನ ಸಿಕ್ಕಿದ್ದು, 2003 ರಲ್ಲಿ ರಿಕಿ ಪಾಟಿಂಗ್ ನಾಯಕತ್ವದಲ್ಲಿ 38 ಪಂದ್ಯಗಳಲ್ಲಿ ಗೆಲುವು ಪಡೆದಿತ್ತು. ಇನ್ನು ಮೂರನೇ ಸ್ಥಾನದಲ್ಲಿಯೂ ಆಸ್ಟ್ರೇಲಿಯಾ ತಂಡವೇ ಇದ್ದು, 1999 ರಲ್ಲಿ 35 ಪಂದ್ಯಗಳಲ್ಲಿ ಗೆಲುವು ಪಡೆದಿತ್ತು.
Advertisement
ಟೀಂ ಇಂಡಿಯಾ ಪ್ರಸ್ತುತ ವರ್ಷದಲ್ಲಿ ಇಂಗ್ಲೆಂಡ್ (ಏಕದಿನ, ಟಿ20), ಬಾಂಗ್ಲಾದೇಶ (ಟೆಸ್ಟ್), ಆಸ್ಟ್ರೇಲಿಯಾ(ಟೆಸ್ಟ್, ಏಕದಿನ), ವೆಸ್ಟ್ ಇಂಡೀಸ್ (ಏಕದಿನ), ಶ್ರೀಲಂಕಾ (ಏಕದಿನ, ಟಿ20, ಟೆಸ್ಟ್), ನ್ಯೂಜಿಲೆಂಡ್(ಏಕದಿನ, ಟಿ20), ಶ್ರೀಲಂಕಾ (ಏಕದಿನ, ಟಿ20, ಟೆಸ್ಟ್) ವಿರುದ್ಧ ಸರಣಿಗಳಲ್ಲಿ ಭಾಗವಹಿಸಿದೆ. ಈ ಮೂಲಕ ಸತತ 9 ಟೆಸ್ಟ್ ಸರಣಿ ಹಾಗೂ 8 ಏಕದಿನ ಸರಣಿಗಳಲ್ಲಿ ಗೆಲುವು ಪಡೆದಿದೆ.