ನವದೆಹಲಿ: ಸ್ಮಾರ್ಟ್ ಫೋನ್ ಎಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಆಂಡ್ರಾಯ್ಡ್ ಇಲ್ಲವೇ ಐಒಎಸ್ ಫೋನ್‌ಗಳು. ಗೂಗಲ್ ಹಾಗೂ ಆಪಲ್ ಕಂಪನಿ ಅಭಿವೃದ್ಧಿ ಪಡಿಸಿರುವ ಆಂಡ್ರಾಯ್ಡ್ ಹಾಗೂ ಐಒಎಸ್ ಪೋನ್‌ಗಳಿಗೆ ಟಕ್ಕರ್ ನೀಡುವಂತಹ ಇತರ ಯಾವುದೇ ಕಂಪನಿಗಳು ಇಲ್ಲಿಯವರೆಗೆ ಬೆಳೆದು ನಿಂತಿಲ್ಲ. ಆದರೆ ಇದೀಗ ಭಾರತ ತನ್ನದೇ ಆದ ಹೊಸ ಆಪರೇಟಿಂಗ್ ಸಿಸ್ಟಮ್(ಒಎಸ್) ಅನ್ನು ಹೊರ ತರಲು ಯೋಜಿಸುತ್ತಿದೆ.
ಈ ಹಿಂದೆ ಮೈಕ್ರೊಸಾಫ್ಟ್ ಹಾಗೂ ಇತರ ಸಣ್ಣ ಪುಟ್ಟ ಕಂಪನಿಗಳು ತನ್ನದೇ ಆದ ಮೊಬೈಲ್ ಒಎಸ್‌ಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ತಂದಿವೆ. ಆದರೆ ಆಂಡ್ರಾಯ್ಡ್ ಅಥವಾ ಐಒಎಸ್ ಬೆಳೆದಿರುವಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿಲ್ಲ. ಇದೀಗ ಭಾರತ ಇವುಗಳಿಗೆ ಟಕ್ಕರ್ ನೀಡುವಂತಹ ಒಎಸ್ ತರಲಿದೆ ಎಂಬ ವಿಷಯ ಬಹಿರಂಗಪಡಿಸಿದೆ. ಇದನ್ನೂ ಓದಿ: ಭಾರತಕ್ಕೆ ಇಂಧನ ಭದ್ರತೆ ಪೂರೈಸಲು ಸಿದ್ಧ ಎಂದ ಇರಾನ್
Advertisement
Advertisement
ಮೊಬೈಲ್ ಫೋನ್ ಹಾಗೂ ಕಂಪ್ಯೂಟರ್‌ಗಳಿಗೆ ಹೊಸದಾದ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಗೆ ವ್ಯವಸ್ಥೆಯನ್ನು ರಚಿಸಲು ಸರ್ಕಾರ ಯೋಜಿಸುತ್ತಿದೆ ಎಂದು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಸಂಸತ್ತಿನಲ್ಲಿ ತಿಳಿಸಿದ್ದರು.
Advertisement
ಭಾರತದಲ್ಲಿ ತಯಾರಾಗಲಿರುವ ಒಎಸ್ ಕೇವಲ ಭಾರತೀಯ ಮಾರುಕಟ್ಟೆಗೆ ಸೀಮಿತವಾಗಲಿದೆಯೇ ಎಂದು ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರ್ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಚಂದ್ರಶೇಖರ್ ದೇಶದಲ್ಲಿ ತಯಾರಾಗಲಿರುವ ಒಎಸ್ ದೇಶದ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿರುತ್ತದೆ ಎನ್ನಲಾಗುವುದಿಲ್ಲ ಎಂದಿದ್ದಾರೆ.
Advertisement
ಈ ಹೇಳಿಕೆ ಮೂಲಕ ಭಾರತದಲ್ಲಿ ತಯಾರಾಗಲಿರುವ ಒಎಸ್‌ಗಳು ಇತರ ದೇಶಗಳಿಗೂ ರಫ್ತಾಗುವ ಸಾಧ್ಯತೆ ಇದ್ದು, ಇದರ ವ್ಯಾಪಕ ಮಾರಾಟದ ಬಗ್ಗೆಯೂ ಸರ್ಕಾರ ಯೋಜಿಸುತ್ತಿದೆ ಎಂಬ ಬಗ್ಗೆ ಸುಳಿವು ದೊರಕಿದೆ. ಇದನ್ನೂ ಓದಿ: ಇನ್ನು ಮುಂದೆ ಪಾಸ್‌ವರ್ಡ್ ಹಂಚಿಕೆಗೂ ಹೆಚ್ಚುವರಿ ಶುಲ್ಕ ವಿಧಿಸಲಿದೆ ನೆಟ್‌ಫ್ಲಿಕ್ಸ್
ಸ್ಟ್ಯಟಿಸ್ಟಾ ಡೇಟಾ ಪ್ರಕಾರ 2021ರಲ್ಲಿ ಭಾರತದಲ್ಲಿ ಮೊಬೈಲ್ ಫೋನ್ ಆಪರೇಟಿಂಗ್ ಸಿಸ್ಟಂ ಮಾರುಕಟ್ಟೆಯ ಶೇ.95.85 ರಷ್ಟು ಪಾಲನ್ನು ಆಂಡ್ರಾಯ್ಡ್ ಹೊಂದಿದ್ದರೆ, ಆಪಲ್‌ನ ಐಒಎಸ್ ಕೇವಲ ಶೇ.3.1 ರಷ್ಟು ಪಾಲನ್ನು ಹೊಂದಿದೆ. ಆಂಡ್ರಾಯ್ಡ್ ಫೋನ್‌ಗಳು ಭಾರತದ ಮಾರುಕಟ್ಟೆಯಲ್ಲಿ 5 ಸಾವಿರ ರೂ. ಯಿಂದ ಪ್ರಾರಂಭವಾಗುತ್ತದೆ ಹಾಗೂ ಐಒಎಸ್ ಫೋನ್‌ಗಳು 44 ಸಾವಿರ ರೂ. ಯಿಂದ ಪ್ರಾರಂಭವಾಗುತ್ತದೆ.
ಇದೀಗ ಭಾರತದಲ್ಲಿ ತಯಾರಾಗಲಿರುವ ಫೋನ್‌ಗಳು ಎಷ್ಟು ಬೆಲೆಗೆ ಜನರ ಕೈಗೆ ಎಟುಕಲಿದೆ ಎಂಬುದನ್ನು ನಿರೀಕ್ಷಿಸಬೇಕಿದೆ.