ಇಸ್ಲಾಮಾಬಾದ್: ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದಲ್ಲಿನ (Pakistan) ನಮ್ಮ ಮೂಲಸೌಕರ್ಯವನ್ನು ಭಾರತ ನಾಶಪಡಿಸಿದೆ ಎಂದು ಲಷ್ಕರ್-ಎ-ತೈಬಾ (Let) ಉಗ್ರ ಸಂಘಟನೆಯ ನಾಯಕ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಕಸೂರಿ (Saifullah Kasuri) ಒಪ್ಪಿಕೊಂಡಿದ್ದಾನೆ.
ಹಫೀಜ್ ಸಯೀದ್(Hafiz Saeed) ನೇತೃತ್ವದ ಸಂಘಟನೆಯ ಉಪ ಮುಖ್ಯಸ್ಥನಾಗಿರುವ ಸೈಫುಲ್ಲಾ ಕಸೂರಿ ಸಾವಿರಾರು ಎಲ್‌ಇಟಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿ, ನಮ್ಮ ಶಿಬಿರಗಳ ಮೇಲೆ ದಾಳಿ ನಡೆಸಿ ಭಾರತ ತಪ್ಪು ಮಾಡಿದೆ ಎಂದು ಹೇಳಿದ್ದಾನೆ.
🚨🚨🚨#Exclusive Intel Report 🇵🇰👹:
In OperationSindoor, India made a big mistake by targeting only terrorist bases …
Pahalgam Mastermind and Lashkar-e-taiba Deputy Chief Saifullah Kasuri declares
“The last thing I say: let our own listen, let the outsiders listen, let the… pic.twitter.com/4iCa2dyu3S
— OsintTV 📺 (@OsintTV) December 31, 2025
ಕಾಶ್ಮೀರ ಕಾರ್ಯಾಚರಣೆಯಿಂದ ಎಂದಿಗೂ ನಾವು ಹಿಂದೆ ಸರಿಯುವುದಿಲ್ಲ. ಇಡೀ ಜಗತ್ತನ್ನು ತಲೆಕೆಳಗಾಗಿ ಮಾಡಬಹುದು, ವ್ಯವಸ್ಥೆಯನ್ನು ಬದಲಾಯಿಸಬಹುದು. ಆದರೆ ನಾವು ಯಾವುದೇ ಕಾರಣಕ್ಕೂ ನಮ್ಮ ಉದ್ದೇಶಗಳಿಂದ ಹಿಂದೆ ಸರಿಯುವುದಿಲ್ಲ ಎಂದು ವಿಷ ಹೊರಹಾಕಿದ್ದಾನೆ. ಇದನ್ನೂ ಓದಿ: 2026 ರಲ್ಲಿ ಭಾರತ-ಪಾಕಿಸ್ತಾನ ಸಂಘರ್ಷ ಸಾಧ್ಯತೆ; ಅಮೆರಿಕದ ಪ್ರಮುಖ ಥಿಂಕ್ ಟ್ಯಾಂಕ್ ಎಚ್ಚರಿಕೆ

