ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ಐತಿಹಾಸಿಕ ಟಿ20 ಸರಣಿ ಗೆದ್ದಿರೋ ಟೀಂ ಇಂಡಿಯಾ ಇಂದು ನ್ಯೂಜಿಲೆಂಡ್ ವಿರುದ್ಧ 4ನೇ ಟಿ20 ಪಂದ್ಯ ಆಡಲಿದೆ. ಈಗಾಗಲೇ 5 ಪಂದ್ಯಗಳ ಸರಣಿಯಲ್ಲಿ 3 ಪಂದ್ಯ ಗೆದ್ದು ಟೀಂ ಇಂಡಿಯಾ ಸರಣಿ ಗೆದ್ದಿದೆ. ಉಳಿದ ಎರಡು ಪಂದ್ಯ ನೆಪ ಮಾತ್ರಕ್ಕೆ ನಡೆಯಲಿದೆ. ಆದರೂ ಉಳಿದ ಎರಡು ಪಂದ್ಯ ಗೆಲ್ಲೋ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡೋ ತವಕದಲ್ಲಿದೆ ಟೀಂ ಇಂಡಿಯಾ.
ಬ್ಯಾಟಿಂಗ್, ಬೌಲಿಂಗ್ ಎರಡಕ್ಕೂ ಈ ಪಿಚ್ ಸಹಕಾರಿಯಾಗಿದೆ. ಹಿಂದೆ ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯ ಮೊದಲು ಬ್ಯಾಟ್ ಮಾಡಿದ ತಂಡವೇ ಗೆಲುವು ಸಾಧಿಸಿದೆ. ಹೀಗಾಗಿ ಟಾಸ್ ಗೆದ್ದ ನಾಯಕ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳೊ ಸಾಧ್ಯತೆ ಇದೆ. ವೇಗದ ಬೌಲರ್ ಗಳಿಗೆ ಈ ಪಿಚ್ ಉತ್ತಮ ಸಹಕಾರ ನೀಡಲಿದೆ. ಇದನ್ನೂ ಓದಿ: ಮಗುವಿನಂತೆ ಹಾರಿ ರೋಹಿತ್‍ರನ್ನು ಬಿಗಿದಪ್ಪಿ ಅಭಿನಂದಿಸಿದ ಕೊಹ್ಲಿ – ವಿಡಿಯೋ ವೈರಲ್
Advertisement
Advertisement
ಈಗಾಗಲೇ ಸರಣಿ ಗೆದ್ದಿರೋ ಭಾರತ ತಂಡ ಈ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳೋ ಸಾಧ್ಯತೆ ಇದೆ. ಇದೂವರೆಗೂ ಒಂದೂ ಪಂದ್ಯವಾಡದ ಆಟಗಾರರಿಗೆ ಸ್ಥಾನ ನೀಡೋ ಸಾಧ್ಯತೆ ಇದೆ. ವಾಷಿಂಗ್ಟನ್ ಸುಂದರಂ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ರಿಷಬ್ ಪಂಥ್, ಸೈನಿಗೆ ಅವಕಾಶ ಸಿಗೋ ಸಾಧ್ಯತೆ ಇದೆ. ಹೀಗಾಗಿ ಹಿರಿಯ ಆಟಗಾರರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ಕೊಡೋ ಸಾಧ್ಯತೆ ಇದೆ. ಸರಣಿಯಲ್ಲಿ ಟೀಂ ಇಂಡಿಯಾ ಅದ್ಬುತ ಪ್ರದರ್ಶನ ತೋರುತ್ತಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು ಇಂದಿನ ಪಂದ್ಯದಲ್ಲೂ ಇದೇ ಪ್ರದರ್ಶನದ ನಿರೀಕ್ಷೆ ಇದೆ. ರಾಹುಲ್, ರೋಹಿತ್, ಕೊಹ್ಲಿ, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಅಸ್ತ್ರ. ಬೂಮ್ರಾ, ಶಮಿ, ಠಾಕೂರ್, ಚಹಲ್ ಬೌಲಿಂಗ್ ಪಡೆಯಲ್ಲಿದ್ದರೆ, ಜಡೇಜಾ, ಶಿವಂ ದುಬೆ ಅಲ್ರೌಂಡರ್ ಸ್ಥಾನ ನಿರ್ವಹಣೆ ಮಾಡಲಿದ್ದಾರೆ. ಇದನ್ನೂ ಓದಿ: ನ್ಯೂಜಿಲೆಂಡ್ ತಂಡವನ್ನು ಹಾಡಿ ಹೊಗಳಿದ ಹಿಟ್‍ಮ್ಯಾನ್
Advertisement
ಸತತ ಮೂರು ಪಂದ್ಯಗಳಲ್ಲಿ ಸೋತು ಸುಣ್ಣವಾಗಿರೋ ನ್ಯೂಜಿಲೆಂಡ್ ತಂಡ ಕೂಡ ಹಲವು ಬದಲಾವಣೆ ಮಾಡಿದೆ. ಈಗಾಗಲೇ ಅಲ್ರೌಂಡರ್ ಗ್ರಾಂಡ್ ಹೋಮ್ ತಂಡದಿಂದ ಹೊರ ಬಿದ್ದದ್ದು, ಅವ್ರ ಜಾಗಕ್ಕೆ ಟಾಮ್ ಬ್ರೂಸ್ ಆಯ್ಕೆಯಾಗಿದ್ದಾರೆ. ಇನ್ನು ನಾಯಕ ವಿಲಿಯಮ್ಸನ್ ಆರಂಭಿಕನಾಗಿ ಆಡೋ ಸಾಧ್ಯತೆ ಇದೆ. 3 ಪಂದ್ಯದಲ್ಲೂ ಬೌಲಿಂಗ್ ಪಡೆ ವಿಫಲವಾಗಿದ್ದು, ಇಂದಿನ ಪಂದ್ಯದಲ್ಲಿ ಇದನ್ನ ಸುಧಾರಿಸಿಕೊಳ್ಳೋ ನಿರೀಕ್ಷೆಯಲ್ಲಿದೆ. ಉಳಿದಂತೆ ಗಪ್ಟಿಲ್, ರಾಸ್ ಟೇಲರ್, ಮನ್ರೋ, ನ್ಯೂಜಿಲೆಂಡ್ ಬ್ಯಾಟಿಂಗ್ ಬಲ. ಸ್ಯಾಂಟ್ನರ್, ಅಲ್ರೌಂಡರ್ ಸ್ಥಾನ ತುಂಬಲಿದ್ದಾರೆ. ಸೋಧಿ, ಸೌಥಿ, ಹ್ಯಾಮಿಶ್ ಬೆನ್ನೆಟ್, ಕುಗ್ಗಿಲಿಯನ್ ಬೌಲಿಂಗ್ ಪಡೆಯಲಿದ್ದಾರೆ.
Advertisement
ಸಂಭವನೀಯ ಆಟಗಾರರ ತಂಡ
ಭಾರತ : ವಿರಾಟ್ ಕೊಹ್ಲಿ(ನಾಯಕ) ರೋಹಿತ್, ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಜಡೇಜಾ, ಶಿವಂ ದುಬೆ/ವಾಷಿಂಗ್ಟನ್ ಸುಂದರಂ, ಚಹಲ್/ ಕುಲ್ದೀಪ್, ಠಾಕೂರ್/ ಸೈನಿ, ಬೂಮ್ರಾ, ಶಮಿ.
ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್(ನಾಯಕ) ಗಪ್ಟಿಲ್, ಟೇಲರ್, ಮನ್ರೋ, ಡರೆಲ್ ಮಿಚೆಲ್, ಟಿಮ್ ಸೀಫರ್ಟ್, ಸ್ಯಾಂಟ್ನರ್, ಕುಗ್ಗಿಲಿಯನ್, ಸೌಥಿ, ಸೋಧಿ, ಹ್ಯಾಮಿಶ್ ಬೆನ್ನೆಟ್