– ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸಹಕಾರಿ
ಚೆನ್ನೈ: ಜಾಗತಿಕ ತಾಪಮಾನ, ಹವಾಮಾನ ಬದಲಾವಣೆಯ ಕುರಿತು ದತ್ತಾಂಶ ಸಂಗ್ರಹಿಸಲು ಭಾರತವು ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ‘RHUMI-1’ (Hybrid Rocket ‘RHUMI-1) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
Advertisement
#WATCH | India launches its first reusable hybrid rocket, RHUMI 1. The rocket, developed by the Tamil Nadu-based start-up Space Zone India and Martin Group was launched from Thiruvidandhai in Chennai using a mobile launcher. It carries 3 Cube Satellites and 50 PICO Satellites… pic.twitter.com/Io97TvfNhE
— ANI (@ANI) August 24, 2024
Advertisement
ಶನಿವಾರ ಚೆನ್ನೈನ ತಿರುವಿದಂಧೈನಿಂದ ರಾಕೆಟ್ ಉಡಾವಣೆ ಮಾಡಲಾಯಿತು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಸಾಧನೆಗೆ ಇದು ಮತ್ತೊಂದು ಗರಿಯಾಗಿದೆ. ಇದನ್ನೂ ಓದಿ: ಅರ್ಹತೆ ಹೊಂದಿರದ ಸಿಬ್ಬಂದಿ ಬಳಕೆ – ಏರ್ ಇಂಡಿಯಾಗೆ 90 ಲಕ್ಷ ರೂ. ದಂಡ
Advertisement
Advertisement
ಮಾರ್ಟಿನ್ ಗ್ರೂಪ್‌ನೊಂದಿಗೆ ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಸ್ಪೇಸ್ ಝೋನ್ ಇಂಡಿಯಾ ಅಭಿವೃದ್ಧಿಪಡಿಸಿದ ಮೂರು ಕ್ಯೂಬ್ ಉಪಗ್ರಹಗಳು ಮತ್ತು 50 PICO ಉಪಗ್ರಹಗಳನ್ನು ಹೊತ್ತ ರಾಕೆಟ್ ಅನ್ನು ಮೊಬೈಲ್ ಲಾಂಚರ್ ಬಳಸಿ ಉಪಕಕ್ಷೆಯ ಪಥಕ್ಕೆ ಉಡಾವಣೆ ಮಾಡಲಾಯಿತು.
ಈ ಉಪಗ್ರಹಗಳು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಸಂಶೋಧನಾ ಉದ್ದೇಶಗಳಿಗಾಗಿ ಡೇಟಾ ಮತ್ತು ಮಾಹಿತಿಯನ್ನು ಸಂಗ್ರಹಿಸುತ್ತವೆ. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!
RHUMI-1 ರಾಕೆಟ್ ದಕ್ಷತೆಯನ್ನು ಸುಧಾರಿಸಲು ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ದ್ರವ ಮತ್ತು ಘನ ಇಂಧನ ಪ್ರೊಪೆಲ್ಲಂಟ್ ಸಿಸ್ಟಮ್‌ಗಳು ಅನುಕೂಲಕರವಾಗಿವೆ.
ISRO ಉಪಗ್ರಹ ಕೇಂದ್ರದ (ISAC) ಮಾಜಿ ನಿರ್ದೇಶಕ ಡಾ. ಮೈಲ್ಸ್ವಾಮಿ ಅಣ್ಣಾದೊರೈ ಅವರ ಮಾರ್ಗದರ್ಶನದಲ್ಲಿ ಸ್ಪೇಸ್ ಝೋನ್ ಸಂಸ್ಥಾಪಕ ಆನಂದ್ ಮೇಗಲಿಂಗಂ ಅವರು RHUMI ಮಿಷನ್ ಅನ್ನು ಮುನ್ನಡೆಸಿದ್ದಾರೆ.
ಸ್ಪೇಸ್ ಝೋನ್ ಇಂಡಿಯಾ ಎಂಬುದು ಚೆನ್ನೈನಲ್ಲಿರುವ ಏರೋ-ಟೆಕ್ನಾಲಜಿ ಕಂಪನಿಯಾಗಿದ್ದು, ಬಾಹ್ಯಾಕಾಶ ಉದ್ಯಮದಲ್ಲಿ ಕಡಿಮೆ-ವೆಚ್ಚದ, ದೀರ್ಘಾವಧಿಯ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.