ಜಾಹೀರಾತಿನಲ್ಲಿ ನಟಿಸಲು 50 ಸೆಕೆಂಡಿಗೆ 5 ಕೋಟಿ ಸಂಭಾವನೆ ಪಡೆದ ನಯನತಾರಾ

Public TV
1 Min Read
nayantara

ಟಿ ನಯನತಾರಾ ತಮಿಳು ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್. ಕಾಲಿವುಡ್‌ನಲ್ಲಿ (Kollywood) ಭಾರೀ ಬೇಡಿಕೆ ಇರುವಾಗಲೇ ಬಾಲಿವುಡ್‌ನಲ್ಲಿಯೂ ಶಾರುಖ್ ಖಾನ್ ಜೊತೆ ನಟಿಸಿದ ಮೇಲೆ ನಟಿ ಖದರ್ ಬದಲಾಗಿದೆ. ಜಸ್ಟ್ 50 ಸೆಕೆಂಡ್ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ದುಬಾರಿ ಸಂಭಾವನೆ ಪಡೆದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ:ತಲೆಗೆ ಸೆರಗು ಸುತ್ತಿಕೊಂಡು ಘಾಟಿಗೆ ಹೊರಟ ಅನುಷ್ಕಾ ಶೆಟ್ಟಿ

ajith nayanathara 1‘ಜವಾನ್’ ನಟಿ ನಯನತಾರಾಗೆ (Nayanthara) ಸಿನಿಮಾ, ಜಾಹೀರಾತು ಕ್ಷೇತ್ರದಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ನಟಿಸಿದ ಮೊದಲ ಬಾಲಿವುಡ್ ಚಿತ್ರ ಹಿಟ್ ಆದ್ಮೇಲೆ ಕೇಳಬೇಕೇ. ಸಂಭಾವನೆ ತುಸು ಜಾಸ್ತಿಯೇ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಜಾಹೀರಾತಿನಲ್ಲಿ ನಯನತಾರಾ ನಟಿಸಿದ್ದಾರೆ. ಕೇವಲ 50 ಸೆಕೆಂಡ್ ಕಾಣಿಸಿಕೊಂಡಿದ್ದಕ್ಕೆ 5 ಕೋಟಿ ರೂ. ನಟಿ ಪಡೆದಿದ್ದಾರೆ ಎನ್ನಲಾಗಿದೆ.

nayanatara

ಪ್ರತಿಷ್ಠಿತ ಸಂಸ್ಥೆ ಜಾಹೀರಾತಿನಲ್ಲಿ ನಟಿ ಕಾಣಿಸಿಕೊಂಡಿದ್ದು, 2 ದಿನಗಳ ಕಾಲ ಶೂಟಿಂಗ್ ನಡೆದಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರೀಕರಣ ಮಾಡಲಾಗಿದೆ. ಅದಕ್ಕೆ 5 ಕೋಟಿ ಸಂಭಾವನೆ ಪಡೆಯುವ ಮೂಲಕ ಬೇಡಿಕೆ ನಟಿಯಾಗಿ ಸುದ್ದಿಯಾಗಿದ್ದಾರೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ಕತ್ರಿನಾ ಕೈಫ್‌, ಕರೀನಾ ಕಪೂರ್‌ಗೆ ಠಕ್ಕರ್‌ ಕೊಟ್ಟು ನಯನತಾರಾ ದುಬಾರಿ ಸಂಭಾವನೆ ಪಡೆದಿದ್ದಾರೆ.

50 ಸೆಕೆಂಡ್ ಆ್ಯಡ್‌ನಲ್ಲಿ ನಟಿಸಿದ್ದಕ್ಕೆ 5 ಕೋಟಿ ರೂ. ಸಂಭಾವನೆ ಇನ್ನೂ ಸಿನಿಮಾ ಬಗ್ಗೆ ಕೇಳಬೇಕಾ? ಒಂದು ಸಿನಿಮಾಗೆ ನಯನತಾರಾ 10 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಸದ್ಯ ಲೇಡಿ ಸೂಪರ್ ಸ್ಟಾರ್ ಖದರ್ ನೋಡಿ ಫ್ಯಾನ್ಸ್ ಖುಷಿಪಡುತ್ತಿದ್ದಾರೆ.

Share This Article