– ಖಂಡಾಂತರ ಕ್ಷಿಪಣಿ ದಾಳಿಗೆ ನೂರ್ ಖಾನ್ ವಾಯುನೆಲೆ ಧ್ವಂಸ – ತಪ್ಪೊಪ್ಪಿಕೊಂಡ ಪಾಕ್
ಇಸ್ಲಾಮಾಬಾದ್: ಪಾಪಿ ಪಾಕಿಸ್ತಾನಕ್ಕೆ ಭಾರತ ಕೊಟ್ಟ ʻಆಪರೇಷನ್ ಸಿಂಧೂರʼ (Operation Sindoo0 ಏಟಿನ ಎಫೆಕ್ಟ್ ಒಂದೊಂದಾಗಿ ಆಚೆ ಬರ್ತಿದೆ. ಭಾರತೀಯ ಸೇನೆ ಕೊಟ್ಟ ಪ್ರತ್ಯುತ್ತರಕ್ಕೆ ಸುಧಾರಿಸಿಕೊಳ್ಳಲು ಆಗದೇ ಪಾಕಿಸ್ತಾನ ವಿಲ ವಿಲ ಒದ್ದಾಡುತ್ತಿದೆ. ವಿಶ್ವದ ಮುಂದೆ ಏನೂ ಆಗಿಲ್ಲ ಎಂದು ಬೊಬ್ಬೆ ಹೊಡೆದುಕೊಳ್ಳುತ್ತಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಕೊನೆಗೂ ಭಾರತದ ದಾಳಿಯನ್ನ ಒಪ್ಪಿಕೊಂಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಾ, ʻಆಪರೇಷನ್ ಸಿಂಧೂರʼದ ಯಶಸ್ಸನ್ನು ಒಪ್ಪಿಕೊಂಡಿದ್ದಾರೆ. ಮೇ 10ರಂದು ಭಾರತೀಯ ಖಂಡಾಂತರ ಕ್ಷಿಪಣಿಗಳು (Ballistic Missiles) ನೂರ್ ಖಾನ್ ವಾಯುನೆಲೆ ಸೇರಿದಂತೆ ಹಲವು ಸ್ಥಳಗಳನ್ನು ಧ್ವಂಸಗೊಳಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್!
ನಿನ್ನೆ ವರೆಗೂ ಏನೂ ಆಗಿಲ್ಲ ಎಂದು ಹೇಳಿಕೊಳ್ಳುತ್ತಿದ್ದ ಪಾಕ್, ತನ್ನ ದೇಶದ ನಾಗರಿಕರನ್ನ ಮೂರ್ಖರನ್ನಾಗಿಸಿ ವಿಜಯೋತ್ಸವ ಆಚರಿಸುತ್ತಿದ್ದ ಪಾಕಿಸ್ತಾನ ಇದೀಗ ಇಡೀ ವಿಶ್ವದ ಮುಂದೆ ತಪ್ಪೊಪ್ಪಿಕೊಂಡಿದೆ. ಈ ಕುರಿತು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲೂ ಹರಿದಾಡುತ್ತಿದೆ. ಇದನ್ನೂ ಓದಿ: ಅಣ್ವಸ್ತ್ರ ಸಂಗ್ರಹ ಇರೋ ಬೆಟ್ಟದ ಮೇಲೆ ದಾಳಿ ಚರ್ಚೆ – ಪತ್ರಕರ್ತನಿಗೆ ಥ್ಯಾಂಕ್ಸ್ ಹೇಳಿದ ವಾಯುಸೇನೆ
ವೈರಲ್ ವಿಡಿಯೋನಲ್ಲಿ ಏನಿದೆ?
ಇಸ್ಲಾಮಾಬಾದ್‌ನ ಸಮಾರಂಭದಲ್ಲಿ ಮಾತನಾಡುವ ಶೆಹಬಾಜ್ ಷರೀಫ್, ಮೇ 9 ಮತ್ತು 10ರ ಮಧ್ಯರಾತ್ರಿ ಸುಮಾರು 2:30ರ ಸುಮಾರಿಗೆ, ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ನನಗೆ ಫೋನ್‌ನಲ್ಲಿ ಸುರಕ್ಷಿತವಾಗಿರುವಂತೆ ಹೇಳಿದ್ದರು. ಸಾಹಿಬ್… ಭಾರತವು ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನ ಉಡಾಯಿಸಿದೆ. ಅದರಲ್ಲಿ ಒಂದು ನೂರ್‌ಖಾನ್ ವಾಯುನೆಲೆಯ ಮೇಲೆ ಬಿದ್ದಿದೆ ಮತ್ತು ಕೆಲವು ಇತರ ಪ್ರದೇಶಗಳಲ್ಲಿ ಬಿದ್ದಿವೆ. ನಮ್ಮ ವಾಯುಪಡೆಯು ನಮ್ಮ ದೇಶವನ್ನ ರಕ್ಷಿಸಲು ಸ್ಥಳೀಯ ತಂತ್ರಜ್ಞಾನವನ್ನ ಬಳಸಿತು ಜೊತೆಗೆ ಚೀನೀ ಯುದ್ಧ ವಿಮಾನಗಳಲ್ಲಿ ಆಧುನಿಕ ಗ್ಯಾಜೆಟ್‌ಗಳು ಮತ್ತು ತಂತ್ರಜ್ಞಾನವನ್ನೂ ಸಹ ಬಳಸಿದೆʼ ನೀವು ಸುರಕ್ಷಿತ ಸ್ಥಳದಲ್ಲಿರಿ ಎಂದು ಎಚ್ಚರಿಸಿದ್ದರುʼ ಎಂಬುದಾಗಿ ಪ್ರಧಾನಿ ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಪರಾಕ್ರಮಕ್ಕೆ ಬೆದರಿ ಬಂಕರ್‌ನಲ್ಲಿ ಅಡಗಿದ್ದ ಅಸಿಮ್ ಮುನೀರ್!
ನೂರ್‌ಖಾನ್ ಪಾಕ್‌ನ ಪ್ರಮುಖ ವಾಯುನೆಲೆ
ನೂರ್ ಖಾನ್ ವಾಯುನೆಲೆ ಪಾಕ್‌ನ ಹೃದಯವಿದ್ದಂತೆ. ಇದು ಪಾಕಿಸ್ತಾನದ ಉನ್ನತ ಮಟ್ಟದ ಮಿಲಿಟರಿ ಸೌಲಭ್ಯ ಹೊಂದಿರುವ ಪ್ರಮುಖ ಕೇಂದ್ರವಾಗಿತ್ತು. ದೇಶದ ಉನ್ನತ ವಿವಿಐಪಿಗಳು ವಾಯು ಸಾರಿಗೆಗಾಗಿ ಇದನ್ನ ಬಳಸುತ್ತಾರೆ.
ಮೇ 10 ರಂದು ಕ್ಷಿಪಣಿ ದಾಳಿ ನಡೆದ ಬಳಿಕ ಭಾರತ ಉಪಗ್ರಹ ಚಿತ್ರ ಸಹಿತ ಸಾಕ್ಷ್ಯವನ್ನ ಬಿಡುಗಡೆ ಮಾಡಿತ್ತು. ಇದನ್ನೂ ಓದಿ: ಅಣ್ವಸ್ತ್ರಗಳಿರೋ ಬೆಟ್ಟದ ಮೇಲೆ ದಾಳಿ – ಬೆದರಿದ ಪಾಕ್, ಅಮೆರಿಕಕ್ಕೂ ಶಾಕ್!