– ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಕಿಡಿ
ನವದೆಹಲಿ: ಭಾರತ 3,000 ವರ್ಷಗಳಿಂದ ಹಿಂದೂ ರಾಷ್ಟ್ರವಾಗಿದೆ, ನೂರು ವರ್ಷಗಳ ಹಿಂದೆ ಬಂದ ಆರ್‌ಎಸ್‌ಎಸ್ (RSS) ಇದರ ಬಗ್ಗೆ ಹೊಸದಾಗಿ ಹೇಳೋದೇನಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.
ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸೂರ್ಯ, ಚಂದ್ರರ ಹುಟ್ಟು ವಿಜ್ಞಾನ ಅದರ ಮೇಲೆ ದೇಶ ನಡೆಯುವುದಿಲ್ಲ, ನಮ್ಮ ದೇಶದಲ್ಲಿ ಸಂವಿಧಾನದಿಂದ ನಡೆಯುತ್ತದೆ. ಭಾರತ್ ವರ್ಷ ಅಥವಾ ಹಿಂದೂಸ್ತಾನ ಅಂತಾ ಭಾರತಕ್ಕೆ ಪ್ರಾಚೀನ ಹೆಸರುಗಳಿದೆ, ಇವರೇನು ಹಿಂದೂ ದೇಶ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಮೋಹನ್ ಭಾಗವತ್ ಕಾನೂನು ಬಾಹಿರ ಸಂಘಟನೆ ಮುಖ್ಯಸ್ಥ: ಹಿಂದೂ ರಾಷ್ಟ್ರ ಹೇಳಿಕೆಗೆ ಬಿ.ಕೆ.ಹರಿಪ್ರಸಾದ್ ತಿರುಗೇಟು
ಇವರಿಗೆ ಹಿಂದೂ ಧರ್ಮ ಕಾಪಾಡುವ ಅಧಿಕಾರ ಕೊಟ್ಟವರು ಯಾರು? ನಮ್ಮ ದೇಶ ನಡೆಯುತ್ತಿರುವುದು ಮನುಸ್ಮೃತಿಯಿಂದ ಅಲ್ಲ, ಸಂವಿಧಾನದಿಂದ ನಡೆಯುತ್ತಿದೆ, ಆರ್‌ಎಸ್‌ಎಸ್ ಈವರೆಗೂ ನೋಂದಣಿ ಮಾಡಿಕೊಂಡಿಲ್ಲ. ಶೀಘ್ರದಲ್ಲೇ ಹೊರಬಂದು ನೋಂದಣಿ ಮಾಡಿಕೊಳ್ಳುತ್ತಾರೆ ನೋಡಿ ಎಂದಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೈಕಮಾಂಡ್ ಸರಿಯಾದ ಸಮಯಕ್ಕೆ ಮಧ್ಯಪ್ರವೇಶ ಮಾಡುತ್ತದೆ. ಲೋಕಲ್ ಗೊಂದಲ ಸೃಷ್ಟಿ ಮಾಡುತ್ತಿರುವುದು ಯಾರು? ನಮ್ಮ ನಾಯಕರು, ಸಿಎಂ, ಡಿಸಿಎಂ ಹೇಳಿಕೆಗಳು ಸ್ಪಷ್ಟವಾಗಿವೆ. ಕೆಲವು ಅಭಿಮಾನಗಳು ಇರ್ತಾರೆ, ನೀವು ಕೇಳುತ್ತೀರಿ, ಅವರು ಹೇಳುತ್ತಾರೆ. ಸಂಪುಟ ಪುನರ್ ರಚನೆ ಅದು ಸಾಮಾನ್ಯ ಪ್ರಕ್ರಿಯೆ, ಅದಕ್ಕೆ ಗಡಿಬಿಡಿ ಯಾಕೆ, ಅದು ಸಿಎಂ ಅಧಿಕಾರ ಅವರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಶಾಸಕ ಬೈರತಿ ಬಸವರಾಜ್‌ಗೆ ಶಾಕ್ – ನಿರೀಕ್ಷಣಾ ಜಾಮೀನು ಅರ್ಜಿ ವಜಾ

