ಜೋಹಾನ್ಸ್ ಬರ್ಗ್: ಬ್ರಿಕ್ಸ್ (BRICS) ಸದಸ್ಯರ ವಿಸ್ತರಣೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ ಎಂದು ಪ್ರಧಾನಿ ನರೇಂದ್ರ (Narendra Modi) ಹೇಳಿದ್ದಾರೆ. ಜೋಹಾನ್ಸ್ ಬರ್ಗ್‍ನಲ್ಲಿ (Johannesburg) ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರು ಆರು ಹೊಸ ಸದಸ್ಯ ರಾಷ್ಟ್ರಗಳ ಸೇರ್ಪಡೆಯನ್ನು ಘೋಷಿಸಿದ ಬಳಿಕ ಮಾತನಾಡಿದ ಅವರು, ಬ್ರಿಕ್ಸ್ ನ ಸದಸ್ಯರ ವಿಸ್ತರಣೆಯನ್ನು ಬೆಂಬಲಿಸಿದರು.
ಕಳೆದ 3 ದಿನಗಳ ಕಾಲ ಬ್ರಿಕ್ಸ್ ಸಭೆಯಲ್ಲಿ ಬಹಳಷ್ಟು ಸಕಾರಾತ್ಮಕ ಫಲಿತಾಂಶಗಳು ಹೊರಬಂದಿದ್ದು, ಇದು ಖುಷಿಯ ಸಂಗತಿಯಾಗಿದೆ. ನಮ್ಮ ಮಾರ್ಗದರ್ಶಿ ಸೂತ್ರಗಳು, ಮಾನದಂಡಗಳು ಮತ್ತು ಕಾರ್ಯವಿಧಾನಗಳನ್ನು ಇತರೆ ಆರು ದೇಶಗಳು ಒಪ್ಪಿಕೊಂಡು ನಮ್ಮ ಭಾಗವಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.
ಇನ್ನು ಶೃಂಗಸಭೆಯಲ್ಲಿ ಚಂದ್ರಯಾನ-3 ಯಶಸ್ಸಿನ ಬಗ್ಗೆ ಮಾತನಾಡಿ, ಭಾರತದ ಚಂದ್ರಯಾನ-3 (Chandrayaan-3) ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಇದು ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ವೈಜ್ಞಾನಿಕ ಸಮುದಾಯಕ್ಕೂ ದೊಡ್ಡ ಸಾಧನೆಯಾಗಿದೆ. ಈ ಸಾಧನೆಯನ್ನು ಎಲ್ಲಾ ಮಾನವೀಯತೆಯ ಸಾಧನೆ ಎಂದು ಒಪ್ಪಿಕೊಳ್ಳುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಭಾರತ ಮತ್ತು ಅದರ ಜನರು ಹಾಗೂ ನಮ್ಮ ವಿಜ್ಞಾನಿಗಳ ಪರವಾಗಿ ವಿಶ್ವದ ವೈಜ್ಞಾನಿಕ ಸಮುದಾಯಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮೋದಿ ಹೇಳಿದರು. ಇದನ್ನೂ ಓದಿ: ಟೆಕ್ಕಿಗಳಿಗೆ ಮತ್ತೆ ನಿರಾಸೆ – ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸಂಚಾರ ವಿಳಂಬ
ಬ್ರಿಕ್ಸ್ ನ ಪೂರ್ಣ ಸದಸ್ಯರಾಗಲು ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಆಹ್ವಾನಿಸಲು ನಾವು ಒಪ್ಪಂದಕ್ಕೆ ಬಂದಿದ್ದೇವೆ. ಸದಸ್ಯತ್ವವು ಜನವರಿ 2024 ರಿಂದ ಜಾರಿಗೆ ಬರಲಿದೆ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಮೋದಿ ಭಾಷಣಕ್ಕೂ ಮುನ್ನ ಹೇಳಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]