ಲಂಡನ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ಕೊನೆಗೂ ಮುಕ್ತಾಯಗೊಂಡಿದೆ. ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನಗಳನ್ನು ನೀಡಿ ಒಟ್ಟು 61 ಪದಕಗಳನ್ನು ಗೆದ್ದು, ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ವೇದಿಕೆಯಲ್ಲಿ 4ನೇ ಸ್ಥಾನ ಗಳಿಸುವಂತೆ ಮಾಡಿದ್ದಾರೆ.
Advertisement
ಈ ಬಾರಿ ಭಾರತ 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು, ಇದು ಭಾರತದ ಕಾಮನ್‌ವೆಲ್ತ್‌ನ 5ನೇ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಹಿಂದೆ 2010ರಲ್ಲಿ ಭಾರತ 38 ಚಿನ್ನ ಸೇರಿದಂತೆ 101 ಪದಕಗಳನ್ನು ಗೆದ್ದು ಅತ್ಯುತ್ತಮ ಪ್ರದರ್ಶನ ನೀಡಿತ್ತು. ಮ್ಯಾಂಚೆಸ್ಟರ್-2002ರಲ್ಲಿ 69 ಪದಕ, ಗೋಲ್ಡ್ ಕೋಸ್ಟ್-2018ರಲ್ಲಿ 66 ಪದಕ ಹಾಗೂ ಗ್ಲಾಸ್ಗೋ-2014ರಲ್ಲಿ 64 ಪದಕಗಳನ್ನು ಭಾರತ ಪಡೆದಿತ್ತು.
Advertisement
Advertisement
ಈ ಬಾರಿ ಆಸ್ಟ್ರೇಲಿಯಾ 67 ಚಿನ್ನದೊಂದಿಗೆ ಒಟ್ಟು 178 ಪದಕಗಳನ್ನು ಪಡೆದು ಪ್ರಥಮ ಸ್ಥಾನಕ್ಕೇರಿದೆ. ಇಂಗ್ಲೆಂಡ್ 57 ಚಿನ್ನದೊಂದಿಗೆ 176 ಪದಕಗಳನ್ನು ಪಡೆದರೆ, ಕೆನಡಾ 26 ಚಿನ್ನದೊಂದಿಗೆ ಒಟ್ಟು 92 ಪದಕಗಳನ್ನು ಪಡೆದಿದೆ. ಇದನ್ನೂ ಓದಿ: CWG 2022: 40ರ ಹುಮ್ಮಸ್ಸಿನಲ್ಲೂ TTಯಲ್ಲಿ ಚಿನ್ನ ಗೆದ್ದ ಅಚಂತ ಶರತ್
Advertisement
ಈ ಹಿಂದೆ ಶೂಟಿಂಗ್‌ನಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆಲ್ಲುತ್ತಿದ್ದು, ಈ ಬಾರಿ ಕಾಮನ್‌ವೆಲ್ತ್‌ನಿಂದ ಅದನ್ನು ಕೈ ಬಿಡಲಾಗಿತ್ತು. ಆದರೂ ಭಾರತ ಇತರ ಆಟಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಗ್ರ 5 ಸ್ಥಾನಗಳಲ್ಲೊಂದಾಗಲು ಸಾಧ್ಯವಾಯಿತು. ಕುಸ್ತಿಯಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆದ್ದಿದ್ದು, 12 ಪದಕಗಳನ್ನು ಬಾಚಿಕೊಂಡಿದೆ. ವೇಟ್‌ಲಿಫ್ಟಿಂಗ್‌ನಲ್ಲಿ 10 ಪದಕಗಳನ್ನು ಗೆದ್ದರೆ, ಟೇಬಲ್ ಟೆನ್ನಿಸ್‌ನಲ್ಲಿ 7 ಪದಕಗಳು ಭಾರತದ ಪಾಲಾಗಿದೆ.
ಒಟ್ಟು ಪದಕಗಳು:
ಕುಸ್ತಿಯಲ್ಲಿ 6 ಚಿನ್ನ, 1 ಬೆಳ್ಳಿ, 5 ಕಂಚು. ಟೇಬಲ್ ಟೆನ್ನಿಸ್‌ನಲ್ಲಿ 4 ಚಿನ್ನ, 1 ಬೆಳ್ಳಿ, 2 ಕಂಚು. ವೈಟ್‌ಲಿಫ್ಟಿಂಗ್‌ನಲ್ಲಿ 3 ಚಿನ್ನ, 3 ಬೆಳ್ಳಿ, 4 ಕಂಚು. ಬಾಕ್ಸಿಂಗ್‌ನಲ್ಲಿ 3 ಚಿನ್ನ, 1 ಬೆಳ್ಳಿ, 3 ಕಂಚು. ಬ್ಯಾಡ್ಮಿಂಟನ್‌ನಲ್ಲಿ 3 ಚಿನ್ನ, 1 ಬೆಳ್ಳಿ, 2 ಕಂಚು. ಅಥ್ಲೆಟಿಕ್ಸ್ನಲ್ಲಿ 1 ಚಿನ್ನ, 4 ಬೆಳ್ಳಿ, 3 ಕಂಚು. ಲಾನ್ ಬೌಲ್ಸ್‌ನಲ್ಲಿ 1 ಚಿನ್ನ, 1 ಬೆಳ್ಳಿ. ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ 1 ಚಿನ್ನ. ಜುಡೋದಲ್ಲಿ 2 ಬೆಳ್ಳಿ, 1 ಕಂಚು. ಹಾಕಿಯಲ್ಲಿ 1 ಬೆಳ್ಳಿ, 1 ಕಂಚು. ಕ್ರಿಕೆಟ್‌ನಲ್ಲಿ 1 ಬೆಳ್ಳಿ. ಸ್ಕ್ವಾಷ್‌ನಲ್ಲಿ 2 ಕಂಚು. ಇದನ್ನೂ ಓದಿ: ಕೈಜಾರಿದ ಚಿನ್ನ – ಹಾಕಿಯಲ್ಲಿ ಬೆಳ್ಳಿಗೆ ತೃಪ್ತಿಪಟ್ಟ ಭಾರತ