LatestLeading NewsMain PostSports

ಕೈಜಾರಿದ ಚಿನ್ನ – ಹಾಕಿಯಲ್ಲಿ ಬೆಳ್ಳಿಗೆ ತೃಪ್ತಿಪಟ್ಟ ಭಾರತ

ಲಂಡನ್: ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಹಾಕಿ ಫೈನಲ್‌ನಲ್ಲಿ ಭಾರತ ಬೆಳ್ಳಿಯ ಪದಕವನ್ನು ಬಾಚಿಕೊಂಡಿದೆ. ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಆಸಸ್ಟ್ರೇಲಿಯಾ ಚಿನ್ನದ ಪದಕ ಗೆದ್ದಿದೆ.

ಮೊದಲ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ 2-1 ಮುನ್ನಡೆ ಪಡೆದುಕೊಂಡಿತು. ಎರಡನೇ ಕ್ವಾರ್ಟರ್ ಆರಂಭದಿಂದಲೇ ಆಸ್ಟ್ರೇಲಿಯಾ ಗೋಲ್‌ನ ಮಳೆ ಸುರಿಸಿತು. ಮೊದಲಾರ್ಧದ ಮುಕ್ತಾಯಕ್ಕೆ 5-0 ಮುನ್ನಡೆ ಕಾಯ್ದಕೊಂಡಿತು. ಇದನ್ನೂ ಓದಿ: CWG 2022: ಬ್ಯಾಡ್ಮಿಂಟನ್‍ನಲ್ಲಿ 20ರ ಹರೆಯದ ಯುವಕನಿಗೆ ಚಿನ್ನದ ಹಾರ – ದಿಗ್ಗಜರ ಸಾಲಿಗೆ ಸೇರಿದ ಲಕ್ಷ್ಯ ಸೇನ್

ದ್ವಿತಿಯಾರ್ಧ ಆರಂಭದಲ್ಲೇ ಆಸ್ಟ್ರೇಲಿಯಾಗೆ ಗೋಲ್‌ನ ಮುನ್ನಡೆ ದೊರೆತು, 3 ನೇ ಕ್ವಾರ್ಟರ್ ಮುಕ್ತಾಯಕ್ಕೆ 6-0 ಮೂಲಕ ಮುನ್ನಡೆ ಕಾಯ್ದುಕೊಂಡಿತು. ಈ ಮೂಲಕ ಭಾರತ ಪುರುಷರ ಹಾಕಿ ಚಿನ್ನದ ಹೋರಾಟದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ – ಪಿವಿ ಸಿಂಧುಗೆ ಚಿನ್ನ

Live Tv

Leave a Reply

Your email address will not be published. Required fields are marked *

Back to top button