ಇಸ್ಲಾಮಾಬಾದ್: ಸೂಪರ್ ಪವರ್ ಆಗಲು ಭಾರತ ಕನಸು ಕಾಣುತ್ತಿರುವ ಹೊತ್ತಲ್ಲಿ ಪಾಕಿಸ್ತಾನವು (Pakistan) ದಿವಾಳಿತನದಿಂದ ತಪ್ಪಿಸಿಕೊಳ್ಳಲು ಭಿಕ್ಷೆ ಬೇಡುತ್ತಿದೆ ಎಂದು ಪಾಕಿಸ್ತಾನದ ಪ್ರಮುಖ ಬಲಪಂಥೀಯ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ (Maulana Fazlur Rehman) ಬೇಸರ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ನಮ್ಮನ್ನು ಹೋಲಿಸಿ ನೋಡಿ. ಎರಡೂ ದೇಶಗಳಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಒಂದೇ ದಿನ. ಆದರೆ ಇಂದು ಅವರು (ಭಾರತ) ಸೂಪರ್ ಪವರ್ ಆಗುವ ಕನಸು ಕಾಣುತ್ತಿದ್ದಾರೆ. ನಾವು ದಿವಾಳಿತನವನ್ನು ತಪ್ಪಿಸಲು ಭಿಕ್ಷೆ ಬೇಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಉತ್ತರಾಖಂಡ ಪ್ರಾಧಿಕಾರದಿಂದ 14 ಪತಂಜಲಿ ಉತ್ಪನ್ನಗಳ ಲೈಸನ್ಸ್ ರದ್ದು
Advertisement
Advertisement
ನಿರ್ಧಾರಗಳನ್ನು ಬೇರೆಯವರು ಮಾಡುತ್ತಾರೆ. ಆದರೆ ಸಮಸ್ಯೆಗಳಿಗೆ ರಾಜಕಾರಣಿಗಳೇ ಕಾರಣ. ನಾವು ಇಸ್ಲಾಂ ಹೆಸರಿನಲ್ಲಿ ದೇಶವನ್ನು ಪಡೆದುಕೊಂಡಿದ್ದೇವೆ. ಆದರೆ ಇಂದು ಜಾತ್ಯತೀತ ರಾಜ್ಯವಾಗಿದೆ. 1973ರಿಂದ ಸಿಐಐನ ಒಂದೇ ಒಂದು ಶಿಫಾರಸನ್ನೂ ಜಾರಿಗೆ ತಂದಿಲ್ಲ. ನಾವು ಇಸ್ಲಾಮಿಕ್ ದೇಶವಾಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ದಿವಾಳಿತನ ತಪ್ಪಿಸಲು ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಳಿ ಭಿಕ್ಷೆ ಬೇಡುತ್ತಿದೆ ಎಂದು ರೆಹಮಾನ್ ಬೇಸರಿಸಿದ್ದಾರೆ. ಇದನ್ನೂ ಓದಿ: ತೀವ್ರವಾದ ಬಿಸಿ ಗಾಳಿ- ಜಾರ್ಖಂಡ್‌ನಲ್ಲಿ 8 ತರಗತಿವರೆಗೆ ಇಂದಿನಿಂದ ರಜೆ ಘೋಷಣೆ