ಪುಣೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಅನೇಕ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಶುಕ್ರವಾರ ಶ್ರೀಲಂಕಾ ವಿರುದ್ಧ ನಡೆದ ಕೊನೆಯ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.
ಪುಣೆಯ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಒಂದು ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಎಲ್ಲಾ ಮೂರು ಮಾದರಿಯ ಕ್ರಿಕೆಟ್‍ನಲ್ಲಿ ಅತಿ ವೇತವಾಗಿ 11,000 ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಕೊಹ್ಲಿ ತಮ್ಮ 169ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು. ಈ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ.
Advertisement
ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 11,000 ರನ್ ಗಳಿಸಿದ ಬ್ಯಾಟ್ಸ್‍ಮನ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಕಳೆದ ವರ್ಷ ಜೂನ್‍ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಮ್ಯಾಂಚೆಸ್ಟರ್‍ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
Advertisement
Advertisement
31 ವರ್ಷದ ವಿರಾಟ್ 84 ಟೆಸ್ಟ್‍ಗಳಿಂದ 7,202 ರನ್ ಮತ್ತು 242 ಏಕದಿನ ಪಂದ್ಯಗಳಿಂದ 11,609 ರನ್ ಗಳಿಸಿದ್ದಾರೆ. ಜೊತೆಗೆ ಎಲ್ಲಾ ಮೂರು ಮಾದರಿಯಲ್ಲಿ ಸರಾಸರಿ 50ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಇದು ಅವರ ಮತ್ತೊಂದು ದಾಖಲೆಯಾಗಿದೆ.
Advertisement
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಂತರ ಮೂರು ಸ್ವರೂಪಗಳಲ್ಲಿ 11,000 ರನ್ ಗಳಿಸಿದ ಎರಡನೇ ಭಾರತೀಯ ನಾಯಕ ಕೊಹ್ಲಿ ಆಗಿದ್ದಾರೆ. ವಿರಾಟ್ ಕೊಹ್ಲಿ 11,000 ರನ್ ಗಳಿಸಿದ ಕ್ಲಬ್‍ನ ಇತರ ಎಲ್ಲಾ ನಾಯಕರಿಗಿಂತ ಅತ್ಯಧಿಕ ಸರಾಸರಿಯನ್ನು ಹೊಂದಿದ್ದಾರೆ.
ರಿಕಿ ಪಾಂಟಿಂಗ್, ಗ್ರೇಮ್ ಸ್ಮಿತ್, ಸ್ಟೀಫನ್ ಫ್ಲೆಮಿಂಗ್, ಎಂಎಸ್ ಧೋನಿ ಮತ್ತು ಅಲನ್ ಬಾರ್ಡರ್ ನಂತರ ಈ ಸಾಧನೆ ಮಾಡಿದ ಆರನೇ ನಾಯಕ ವಿರಾಟ್ ಕೊಹ್ಲಿ ಆಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಪಾಂಟಿಂಗ್ 324 ಪಂದ್ಯಗಳಲ್ಲಿ 15,440 ರನ್ ಗಳಿಸಿದರೆ, ಗ್ರೇಮ್ ಸ್ಮಿತ್ 286 ಪಂದ್ಯಗಳಲ್ಲಿ 14,878 ರನ್, ಸ್ಟೀಫನ್ ಫ್ಲೆಮಿಂಗ್ 303 ಪಂದ್ಯಗಳಲ್ಲಿ 11,561 ರನ್, ಎಂ.ಎಸ್.ಧೋನಿ 332 ಪಂದ್ಯಗಳಲ್ಲಿ 11,207 ರನ್ ಮತ್ತು ಅನಲ್ ಬಾರ್ಡರ್ 271 ಪಂದ್ಯಗಳಲ್ಲಿ 11,062 ರನ್ ಗಳಿಸಿದ್ದಾರೆ. ಈ ಕ್ಲಬ್‍ಗೆ ಸೇರಿದ ವಿರಾಟ್ ತಮ್ಮ 196ನೇ ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದಾರೆ.
ಅತಿ ವೇಗವಾಗಿ 11,000 ರನ್ ಗಳಿಸಿದ ನಾಯಕ ಎಂಬ ದಾಖಲೆ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. ಅವರು ಅದನ್ನು 252 ಇನ್ನಿಂಗ್ಸ್ ಗಳಲ್ಲಿ ಈ ದಾಖಲೆ ಮಾಡಿದ್ದರು. ಟೀ ಇಂಡಿಯಾ ಮಾಜಿ ನಾಯಕ ಧೋನಿ 324 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
ಇಂದೋರ್‍ನಲ್ಲಿ ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಟಿ20ಯಲ್ಲಿ 1,000 ರನ್ ಗಳಿಸಿದ ವೇಗದ ನಾಯಕ ಎಂಬ ವಿಶ್ವ ದಾಖಲೆ ಬರೆದಿದ್ದರು. ಕೊಹ್ಲಿ ತಮ್ಮ 30ನೇ ಇನ್ನಿಂಗ್ಸ್ ನಲ್ಲಿ ನಾಯಕನಾಗಿ ಈ ಸಾಧನೆ ಮಾಡಿದ್ದರು.