– ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ
– ಅಂಕಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಜಿಗಿತ
ಕೊಹ್ಲಿ (Virat Kohli) ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಶಮಿ (Mohammed Shami) ಬೆಂಕಿ ಬೌಲಿಂಗ್ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ ಭಾರತ 274 ರನ್‌ಗಳಿಸಿ 4 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ಭಾರತ ಜಿಗಿತ ಕಂಡಿದೆ. ಅಲ್ಲದೇ 20 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ಭಾರತ ಕಿವೀಸ್ ಮಣಿಸಿ, ವಿಶೇಷ ಸಾಧನೆ ಮಾಡಿದೆ.
Advertisement
ಹಿಮಾಚಲ ಪ್ರದೇಶ ಧರ್ಮಶಾಲಾದ ಹೆಚ್‌ಪಿಸಿಎ ಕ್ರೀಡಾಂಗಣದಲ್ಲಿ ಇಂದು (ಭಾನುವಾರ) ನಡೆದ ವಿಶ್ವಕಪ್ 2023 (Cricket World Cup 2023) ಟೂರ್ನಿಯ ಪಂದ್ಯದಲ್ಲಿ ಭಾರತ (India) ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ (New Zealand) 273 ರನ್‌ಗಳಿಸಿ ಆಲೌಟ್ ಆಗಿ, 274 ರನ್ ಟಾರ್ಗೆಟ್ ನೀಡಿತು. ಗುರಿ ಬೆನ್ನತ್ತಿದ ಭಾರತ, ಉತ್ತಮ ಬ್ಯಾಟಿಂಗ್ ಪ್ರದರ್ಶನದೊಂದಿಗೆ 48 ಓವರ್‌ಗಳಿಗೆ 274 ರನ್ ಗಳಿಸಿ 4 ವಿಕೆಟ್‌ಗಳ ಗೆಲುವು ದಾಖಲಿಸಿತು. ಇದನ್ನೂ ಓದಿ: ಶಮಿ ಹೊಸ ದಾಖಲೆ – ODI ವಿಶ್ವಕಪ್ ಇತಿಹಾಸದಲ್ಲೇ 2 ಬಾರಿ ಐದು ವಿಕೆಟ್ ಕಬಳಿಸಿದ ಮೊದಲ ಭಾರತೀಯ
Advertisement
Advertisement
ಆರಂಭಿಕರಾಗಿ ಕಣಕ್ಕಿಳಿದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಉತ್ತಮ ಶುಭಾರಂಭ ನೀಡಿದರು. ಮೊದಲ ವಿಕೆಟ್ ನಷ್ಟಕ್ಕೆ ಈ ಜೋಡಿ 67 ಬಾಲ್‌ಗೆ 71 ರನ್ ಗಳಿಸಿತು. ರೋಹಿತ್ ಶರ್ಮಾ 40 ಬಾಲ್‌ಗಳಿಗೆ 46 ರನ್ ಗಳಿಸಿ (4 ಫೋರ್, 4 ಸಿಕ್ಸರ್) ಕ್ಲೀನ್ ಬೌಲ್ಡ್ ಆಗಿ ಅರ್ಧಶತಕ ವಂಚಿತರಾಗಿ ನಿರ್ಗಮಿಸಿದರು.
Advertisement
ಉತ್ತಮ ಪ್ರದರ್ಶನ ನೀಡುತ್ತ ಆಟ ಆರಂಭಿಸಿದ್ದ ಗಿಲ್ (31 ಬಾಲ್‌ಗೆ 21 ರನ್), ಫರ್ಗೂಸನ್ ಬೌಲಿಂಗ್‌ನಲ್ಲಿ ಬಾಲ್ ಅನ್ನು ಬೌಂಡರಿಗೆ ಅಟ್ಟಲು ಮುಂದಾಗಿ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು. 104 ಬಾಲ್‌ಗೆ 95 ರನ್ ಬಾರಿಸಿ (8 ಫೋರ್, 2 ಸಿಕ್ಸರ್) ಮಿಂಚಿದರು. ಕೊನೆ ವರೆಗೂ ಶತಕದ ಕುತೂಹಲ ಕೆರಳಿಸಿದ್ದ ಕೊಹ್ಲಿ ಶತಕ ವಂಚಿತರಾಗಿ ನಿರ್ಗಮಿಸಿದರು. ಇದು ಕಿಂಗ್ ಕೊಹ್ಲಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. ಇದನ್ನೂ ಓದಿ: ಮಿಚೆಲ್ ಶತಕದ ಅಬ್ಬರ – ಭಾರತ ಗೆಲುವಿಗೆ 274 ರನ್ ಗುರಿ
ಶ್ರೇಯಸ್ ಅಯ್ಯರ್ (33), ಕೆ.ಎಲ್.ರಾಹುಲ್ (27), ಸೂರ್ಯಕುಮಾರ್ ಯಾದವ್ (2) ರನ್ ಗಳಿಸಿದರು. ಕೊನೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ 44 ಬಾಲ್‌ಗೆ 39 ರನ್ ಗಳಿಸಿ (3 ಫೋರ್, 1 ಸಿಕ್ಸರ್) ಪಂದ್ಯದಲ್ಲಿ ತಂಡದ ಪರ ಫಿನಿಶರ್ ಆದರು.
ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ 2, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ, ಮಿಚೆಲ್ ಸ್ಯಾಂಟ್ನರ್ ತಲಾ ಒಂದು ವಿಕೆಟ್ ಕಿತ್ತರು. ಇದನ್ನೂ ಓದಿ: ಇಶಾನ್‌ಗೆ ಜೇನುಹುಳು ಕಂಟಕ, ಸೂರ್ಯನಿಗೆ ಮೊಣಕೈ ಗಾಯ – ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ ತ್ರಿಬಲ್ ಶಾಕ್
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ಶುಭಾರಂಭ ನೀಡುವಲ್ಲಿ ಎಡವಿತು. ಆರಂಭಿಕರಾಗಿ ಕಣಕ್ಕಿಳಿದ ಡೆವೊನ್ ಕಾನ್ವೇ ಶೂನ್ಯಕ್ಕೆ ಔಟ್ ಆಗಿ ನಿರ್ಗಮಿಸಿದರು. ವಿಲ್ ಯಂಗ್ ಕೇವಲ 17 ರನ್‌ಗಳಿಸಿ ಮಹಮ್ಮದ್ ಶಮಿ ಬೌಲಿಂಗ್‌ಗೆ ಕ್ಲೀನ್ ಬೌಲ್ಡ್ ಆದರು.
ನಂತರ ಬಂದ ರಚಿನ್ ರವೀಂದ್ರ ಹಾಗೂ ಡೇರಿಲ್ ಮಿಚೆಲ್ ಉತ್ತಮ ಜೊತೆಯಾಟ ಆಡಿದರು. ಈ ಇಬ್ಬರೂ ಬ್ಯಾಟರ್‌ಗಳು 152 ಬಾಲ್‌ಗಳಿಗೆ 159 ರನ್ ಜೊತೆಯಾಟವಾಡಿ ಸವಾಲಿನ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರಚಿನ್ ರವೀಂದ್ರ 87 ಬಾಲ್‌ಗಳಿಗೆ 75 ರನ್ (4 ಫೋರ್, 1 ಸಿಕ್ಸರ್) ಗಳಿಸಿದರು. ಡೇರಿಲ್ ಮಿಚೆಲ್ ಶತಕ ಸಿಡಿಸಿ ಮಿಂಚಿದರು. 127 ಬಾಲ್‌ಗಳಿಗೆ 130 ರನ್ ಬಾರಿಸಿ (9 ಫೋರ್, 5 ಸಿಕ್ಸರ್) ಭಾರತದ ಬೌಲರ್‌ಗಳನ್ನು ಕಾಡಿದರು. ಇದನ್ನೂ ಓದಿ: ಭಾನುವಾರ ಭಾರತ-ನ್ಯೂಜಿಲೆಂಡ್ ಮ್ಯಾಚ್; ಮಳೆ ಅಡ್ಡಿ?
ನಂತರ ಬಂದ ಯಾವೊಬ್ಬ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಟಾಮ್ ಲ್ಯಾಥಮ್ (5), ಗ್ಲೆನ್ ಫಿಲಿಪ್ಸ್ (23), ಮಾರ್ಕ್ ಚಾಪ್ಮನ್ (6), ಮಿಚೆಲ್ ಸ್ಯಾಂಟ್ನರ್ (1), ಲಾಕಿ ಫರ್ಗುಸನ್ (1) ರನ್ ಗಳಿಸಲಷ್ಟೇ ಶಕ್ತರಾದರು.
ಭಾರತದ ಪರ ಮಹಮ್ಮದ್ ಶಮಿ 5 ವಿಕೆಟ್ ಕಬಳಿಸಿ ಮಿಂಚಿದರು. ಜಸ್ಪ್ರಿತ್ ಬೂಮ್ರಾ 1, ಮಹಮ್ಮದ್ ಸಿರಾಜ್ 1, ಕುಲದೀಪ್ ಯಾದವ್ 2 ಕಿಕೆಟ್ ಕಿತ್ತರು.
Web Stories