ವಿಶಾಖಪಟ್ಟಣಂ: ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಗಳು ತತ್ತರಿಸಿದ್ದು, ಟೀ ಇಂಡಿಯಾ 203 ರನ್ ಅಂತರದ ಗೆಲುವು ಪಡೆದುಕೊಂಡಿದೆ. ಆ ಮೂಲಕ ತವರಿನಲ್ಲಿ ಸತತ 10ನೇ ಟೆಸ್ಟ್ ಪಂದ್ಯ ಗೆದ್ದ ಸಾಧನೆ ಮಾಡಿದೆ.
395 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪಡೆಯನ್ನು ಟೀಂ ಇಂಡಿಯಾ ಬೌಲರ್ ಗಳು 191 ರನ್ ಗಳಿಗೆ ಅಲೌಟ್ ಮಾಡಿದರು. ಭಾನುವಾರ ಅಂತಿಮ ದಿನದ ಆಟದಲ್ಲಿ ಬೌಲರ್ ಗಳ ಒಗ್ಗಟ್ಟಿನ ಪ್ರದರ್ಶನದಿಂದ ಟೀಂ ಇಂಡಿಯಾ ಗೆಲುವು ಪಡೆಯಿತು. 2017ರ ಬಳಿಕ ತವರಿನಲ್ಲಿ ಟೀಂ ಇಂಡಿಯಾ ಪಡೆದ 10ನೇ ಗೆಲುವು ಇದಾಗಿದೆ. ಅಲ್ಲದೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‍ನಲ್ಲಿ ಟೀಂ ಇಂಡಿಯಾ 160 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದೆ.
Advertisement
1-0 ????????????????????????#TeamIndia win the 1st Test in Vizag by 203 runs #INDvSA @Paytm pic.twitter.com/iFvuKOXPOJ
— BCCI (@BCCI) October 6, 2019
Advertisement
ಪಂದ್ಯದಲ್ಲಿ ವೇಗಿ ಮೊಹಮ್ಮದ್ ಶಮಿ, ಸ್ಪಿನ್ನರ್ ರವೀಂದ್ರ ಜಡೇಜಾ ನಡೆಸಿದ ಮ್ಯಾಜಿಕಲ್ ಬೌಲಿಂಗ್ ದಾಳಿಯನ್ನು ಎದುರಿಸಲು ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್‍ಗಳು ವಿಫಲರಾದರು. ಅಂತಿಮ ದಿನದಾಟವನ್ನು 1 ವಿಕೆಟ್ ಕಳೆದುಕೊಂಡು 11 ರನ್ ಗಳಿಂದ ಆರಂಭಿಸಿದ ದಕ್ಷಿಣ ಅಫ್ರಿಕಾ ತಂಡ ಟೀಂ ಇಂಡಿಯಾ ಬೌಲರ್ ಜಡೇಜಾರ ದಾಳಿಗೆ ಸಿಲುಕಿ ತತ್ತರಿಸಿತು. ಆದರೆ ಮಧ್ಯಾಹ್ನದ ಭೋಜನ ವಿರಾಮ ವೇಳೆಗೆ ಟೀಂ ಇಂಡಿಯಾ ಗೆಲುವು ಸಾಧಿಸಲಿದೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದರು. ಆದರೆ ದಕ್ಷಿಣ ಆಫ್ರಿಕಾ ಪರ ಪೈಡಿಟ್- ಮುತ್ತುಸಾಮಿ ಅಂತಿಮ ಹಂತದಲ್ಲಿ ನಡೆಸಿದ ಹೋರಾಟ ವಿಫಲವಾಯಿತು. ಪೈಡಿಟ್ 56 ರನ್ ಗಳಿಸಿ ಔಟಾದರೆ, ಮುತ್ತುಸಾಮಿ 49 ರನ್ ಗಳಿಸಿ ಅಜೇಯರಾಗಿ ಉಳಿದರು. ಇಬ್ಬರು 9ನೇ ವಿಕೆಟ್‍ಗೆ 91 ರನ್ ಜೊತೆಯಾಟ ನೀಡಿದರು. ಅಂತಿಮವಾಗಿ ರಬಡಾ (18 ರನ್) ವಿಕೆಟ್ ಕಬಳಿಸಿದ ಶಮಿ ತಂಡಕ್ಕೆ ಗೆಲುವಿನ ಸಿಹಿ ನೀಡಿದರು. ಟೀಂ ಇಂಡಿಯಾ ಪರ ಜಡೇಜಾ 2ನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದರೆ ಶಮಿ 5 ವಿಕೆಟ್ ಪಡೆದು ಮಿಂಚಿದರು.
Advertisement
ಸಂಕ್ಷಿಪ್ತ ಸ್ಕೋರ್:
ಟೀಂ ಇಂಡಿಯಾ: ಮೊದಲ ಇನ್ನಿಂಗ್ಸ್ – 502/7 ಡಿಕ್ಲೇರ್
2ನೇ ಇನ್ನಿಂಗ್ಸ್ – 323/4 ಡಿಕ್ಲೇರ್
Advertisement
ದಕ್ಷಿಣ ಆಫ್ರಿಕಾ: ಮೊದಲ ಇನ್ನಿಂಗ್ಸ್ – 431 ಅಲೌಟ್
2ನೇ ಇನ್ನಿಂಗ್ಸ್ – 191 ಅಲೌಟ್
Mohammed Shami makes the breakthrough! Dane Piedt plays a drive away from the body and chops on at 56. That marks the end of the record ninth-wicket stand at 91.
???????? are just a wicket away!
Follow #INDvSA LIVE ????https://t.co/dCGJ4Pcug5 pic.twitter.com/NzSdigPcAC
— ICC (@ICC) October 6, 2019
LUNCH! Shami and Jadeja were the stars of that session with three wickets apiece.
But, Piedt and Muthuswamy have resisted with an unbroken 47-run partnership. How much longer will they keep ???????? at bay?
Follow #INDvSA LIVE ???? https://t.co/dCGJ4Pcug5 pic.twitter.com/2GIiOfMmQh
— ICC (@ICC) October 6, 2019