ಮುಂಬೈ: 20ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿ 16 ವರ್ಷ ಪೂರೈಸಿದ್ದಾರೆ.
2007ರ ಜೂನ್ 23ರಂದು ಭಾರತ ತಂಡದ (Team India) ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ಐರ್ಲೆಂಡ್‌ನಲ್ಲಿ ನಡೆದ ಏಕದಿನ ಪಂದ್ಯದ ಮೂಲಕ ರೋಹಿತ್ ಶರ್ಮಾ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದರು. ಅಂದು ಬೆಲ್ಫಾಸ್‌ನಲ್ಲಿ ಪೂರ್ಣ ತೋಳಿನ ಜಂಪರ್‌ಗಳಲ್ಲಿ ರೋಹಿತ್ ಕಾಣಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿತ್ತು.
Advertisement
Advertisement
ಇದುವೆರೆಗೆ 441 ಅಂತಾರಾಷ್ಟ್ರೀಯ (International Cricket) ಪಂದ್ಯಗಳನ್ನಾಡಿರುವ ಹಿಟ್‌ಮ್ಯಾನ್, 17,115 ರನ್ ಪೂರೈಸಿದ್ದಾರೆ. 43 ಅಂತಾರಾಷ್ಟ್ರೀಯ ಶತಕಗಳೂ ಇದರಲ್ಲಿ ಸೇರಿವೆ. 36ರ ಹರೆಯದ `ಹಿಟ್ ಮ್ಯಾನ್’ ಈಗ ತಮ್ಮ ವೃತ್ತಿಜೀವನದ ಪ್ರಮುಖ ಹೊಸ್ತಿಲಲ್ಲಿದ್ದಾರೆ. ಇದನ್ನೂ ಓದಿ: ಪೂಜಾರ ಔಟ್, ಯಶಸ್ವಿ ಇನ್ – ವಿಂಡೀಸ್ ಸರಣಿಗೆ ಭಾರತ ಟೆಸ್ಟ್, ಏಕದಿನ ತಂಡ ಪ್ರಕಟ
Advertisement
Advertisement
3 ದ್ವಿಶತಕ ಸಿಡಿಸಿದ ನಂ.1 ಬ್ಯಾಟರ್:
ಟೀಂ ಇಂಡಿಯಾ ಹಾಲಿ ನಾಯಕನಾಗಿರುವ ರೋಹಿತ್ ಶರ್ಮಾ ಮೂರು ದ್ವಿಶತಕ ಬಾರಿಸಿದ ವಿಶ್ವದ ನಂ.1 ಬ್ಯಾಟ್ಸ್‌ಮ್ಯಾನ್ ಸಹ ಆಗಿದ್ದಾರೆ. ಇದನ್ನೂ ಓದಿ: T20 ಕ್ರಿಕೆಟ್‌ನಲ್ಲಿ ಸಿಕ್ಸರ್ ಬ್ಲಾಸ್ಟ್ – ಒಂದೇ ಓವರ್‌ನಲ್ಲಿ 6,6,6,6,6 ಚಚ್ಚಿದ RCB ಸ್ಟಾರ್
ರೋಹಿತ್ ಶರ್ಮಾ 2013ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ 209 ರನ್ ಗಳಿಸಿದ್ದರು. 2014ರಲ್ಲಿ ಈಡನ್ ಗಾರ್ಡನ್‌ನಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 264 ರನ್ ಚಚ್ಚಿದ್ದರು. 2017ರಲ್ಲಿ ಮೂರನೇ ಬಾರಿಗೆ ಶ್ರೀಲಂಕಾ ವಿರುದ್ಧವೇ ಮೊಹಾಲಿಯಲ್ಲಿ 208 ರನ್ ಸಿಡಿಸಿದ್ದರು. ಈ ಮೂಲಕ ಮೂರು ಬಾರಿ ದ್ವಿಶತಕ ಸಿಡಿಸಿದ ನಂ.1 ಬ್ಯಾಟ್ಸ್‌ಮ್ಯಾನ್ ಎನಿಸಿಕೊಂಡರು.
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಇಶಾನ್ ಕಿಶನ್, ಶುಭಮನ್ ಗಿಲ್ ತಲಾ ಒಂದೊಂದು ಬಾರಿ ದ್ವಿಶತಕ ಸಿಡಿಸಿದ್ದಾರೆ.