ಧಾರವಾಡ: ಇನ್ನು ಮುಂದೆ ಧಾರವಾಡ ಪೇಡ ಮಾತ್ರ ಫೇಮಸ್ ಅಂತಾ ತಿಳಿಯಬೇಡಿ. ಧಾರವಾಡ ಎಮ್ಮೆ ಕೂಡಾ ಅಷ್ಟೇ ಫೇಮಸ್. ಯಾಕಂದ್ರೆ ಧಾರವಾಡ ಎಮ್ಮೆಗೆ ‘ಧಾರವಾಡಿ ಎಮ್ಮೆ’ ಎಂದು ಮಾನ್ಯತೆ ಸಿಕ್ಕಿದೆ. ದೇಸೀ ತಳಿಯ ಈ ಎಮ್ಮೆಯನ್ನು 18ನೇ ತಳಿಯಾಗಿ ಘೋಷಣೆ ಮಾಡಲಾಗಿದೆ.
Advertisement
ಹೌದು. ಇಷ್ಟು ದಿನ ಧಾರವಾಡ ಎಂದರೆ ಎಲ್ಲರೂ ಪೇಡವನ್ನೇ ನೆನಪಿಸಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ಧಾರವಾಡ ಎಮ್ಮೆಯಿಂದ ಕೂಡ ವಿದ್ಯಾಕಾಶಿಯನ್ನು ಗುರುತಿಸಬಹುದು. ಯಾಕಂದರೆ ಹರಿಯಾಣದ ರಾಷ್ಟ್ರೀಯ ಪಶು ಅನುವಂಶಿಕ ಸಂಸಾಧನ ಬ್ಯುರೋದಿಂದ, ಧಾರವಾಡ ಎಮ್ಮೆ ತಳಿಗೆ ಮಾನ್ಯತೆ ಸಿಕ್ಕಿದೆ. ಇನ್ನು ಮುಂದೆ ಈ ಎಮ್ಮೆಗೆ ‘ಧಾರವಾಡಿ ಎಮ್ಮೆ’ ಎಂದು ಕರೆಯಬೇಕಾಗಿದ್ದು, ಈ ರಾಷ್ಟ್ರೀಯ ಪಶು ಬ್ಯುರೋ ‘ಇಂಡಿಯಾ ಬಫೆಲ್ಲೋ 0800’ ಎಂದು ನೊಂದಣಿ ಸಂಖ್ಯೆಯೊಂದಿಗೆ 18 ನೇ ತಳಿಯನ್ನಾಗಿ ಮಾನ್ಯತೆ ಕೊಟ್ಟಿದೆ.
Advertisement
Advertisement
ಎಮ್ಮೆಯ ವಿಶೇಷತೆ ಏನು..?
ಇದು 140 ಸೆಂಟಿ ಮೀಟರ್ ಎತ್ತರ ಇರುತ್ತೆ, ಇದರ ಕೋಡುಗಳು ಅರ್ಧಚಂದ್ರಾಕೃತಿಯಲ್ಲಿ ಇರುತ್ತವೆ. ಇದನ್ನೇ ನೋಡಿ ಇದಕ್ಕೆ 18 ನೇ ತಳಿಯನ್ನಾಗಿ ಮಾನ್ಯತೆ ಕೊಡಲಾಗಿದೆ. ಅಲ್ಲದೇ ಈ ಎಮ್ಮೆ 17 ತಿಂಗಳಿಗೊಮ್ಮೆ ಕರು ಕೊಡುತ್ತೆ. ಒಮ್ಮೆ ಕರು ಕೊಟ್ಟರೆ 10 ತಿಂಗಳವರೆಗೆ 1 ಸಾವಿರ ಲೀಟರ್ ಹಾಲನ್ನ ಕೊಡಬಲ್ಲದು. ಇದರ ಮಾನ್ಯತೆಗಾಗಿ ಉತ್ತರ ಕರ್ನಾಟಕದ 4 ಜಿಲ್ಲೆಗಳಲ್ಲಿ ಸಂಶೋಧನೆ ಮಾಡಿಯೇ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಗೆ ಕಳಿಸಿಕೊಡಲಾಗಿತ್ತು. ಈ ಹಿನ್ನೆಲೆ ಈ ವರ್ಷ ಇದಕ್ಕೆ ಮಾನ್ಯತೆ ಸಿಕ್ಕಿದೆ. ಇದನ್ನೂ ಓದಿ: ಡ್ರಗ್ಸ್ ತೆಗೆದುಕೊಂಡಿಲ್ಲ, 12 ಕೋಟಿ ಮನೆ ಇಲ್ಲ, ಈಗಲೂ ವಿಚಾರಣೆಗೆ ಸಿದ್ಧ: ಅನುಶ್ರೀ
Advertisement
ಈ ಎಮ್ಮೆಯ ಹಾಲು ಮಕ್ಕಳಿಗೆ ಬಹಳ ಉಪಯುಕ್ತ. ಅಲ್ಲದೇ ಇದೇ ಎಮ್ಮೆಯ ಹಾಲಿನಿಂದ ಧಾರವಾಡ ಪ್ರಸಿದ್ಧ ಪೇಡ ಕೂಡಾ ಮಾಡಲಾಗುತ್ತೆ. ಇದನ್ನ ಕೂಡಾ ಸಂಶೋಧನೆ ವೇಳೆ ಕಂಡು ಹಿಡಯಲಾಗಿದೆ. ಇದನ್ನೂ ಓದಿ: ನೂರಾರು ಕೋಟಿ ಟೆಂಡರ್ ವಂಚನೆ ಪ್ರಕರಣ- ಐಷಾರಾಮಿ ಹೋಟೆಲ್ ನಲ್ಲಿ ಸಿಕ್ಕಿಬಿದ್ದ ಮಾಲೀಕ
ಸಭಾಪತಿ ಬಸವರಾಜ್ ಹೊರಟ್ಟಿಯವರು, ಈ ತಳಿಗೆ ಮಾನ್ಯತೆ ಕೊಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಬಹಳ ದಿನಗಳ ಹಿಂದೆಯೇ ಇದಕ್ಕೆ ಮಾನ್ಯತೆ ಸಿಗಬೇಕಿತ್ತು ಎನ್ನುವ ಹೊರಟ್ಟಿ, ಮೂರ್ರಾ ಎಮ್ಮೆಯೆಂತೆಯೇ ನಮ್ಮ ಎಮ್ಮೆ ಕೂಡಾ ಈಗ ಪ್ರಸಿದ್ಧಿ ಪಡೆದಿದ್ದು, ಬಹಳ ಸಂತೋಷದ ವಿಷಯ ಎಂದಿದ್ದಾರೆ.
ಒಟ್ಟಾರೆಯಾಗಿ ಧಾರವಾಡ ಎಮ್ಮೆ ಎಂದರೆನೇ ಮೊದಲು ಫೇಮಸ್ ಆಗಿತ್ತು. ಈಗ ಅದಕ್ಕೆ ಮಾನ್ಯತೆ ಸಿಕ್ಕ ಮೇಲೆ ಮತ್ತಷ್ಟು ಪ್ರಸಿದ್ಧಿ ಪಡೆಯಲಿದೆ. ಉತ್ತರ ಕರ್ನಾಟಕದಲ್ಲಿ ಯಾರಾದರೂ ರಸ್ತೆಯ ನಡುವೆ ಹೋಗುತ್ತಿದ್ದರೆ, ಅವರಿಗೆ ಧಾರವಾಡ ಎಮ್ಮೆ ಎಂದು ನಗೆಚಟಾಕಿ ಹಾರಿಸುತ್ತಿದ್ದೆವು.. ಆದರೆ ಈಗ ಅದೇ ಎಮ್ಮೆ ದೇಸಿ ತಳಿಯ ಸಾಲಿನಲ್ಲಿ ಸೇರಿಕೊಂಡಿದೆ. ಇದನ್ನೂ ಓದಿ: ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ