ನವದೆಹಲಿ: ನಕಲಿ ಸುದ್ದಿಗಳನ್ನು ಹರಡುವ ಆರೋಪದ ಮೇಲೆ ಪಾಕಿಸ್ತಾನ ರಾಯಭಾರಿ ಕಚೇರಿಗಳ ಹಲವಾರು ಅಧಿಕೃತ ಟ್ವಿಟ್ಟರ್ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಿದೆ.
ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದ ವಿಶ್ವಸಂಸ್ಥೆ, ಟರ್ಕಿ, ಇರಾನ್ ಮತ್ತು ಈಜಿಪ್ಟ್‌ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟ್ಟರ್ ಖಾತೆಗಳನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ. ಇದರ ಜೊತೆಗೆ ಪಾಕಿಸ್ತಾನದ ರಾಷ್ಟ್ರೀಯ ಸಾರ್ವಜನಿಕ ಪ್ರಸಾರಕ ರೇಡಿಯೋ ಖಾತೆಯನ್ನು ತಡೆಹಿಡಿಯಲಾಗಿದೆ.
Advertisement
Pakistan Foreign Ministry urges Twitter “to restore immediate access to its accounts after Twitter in India withheld official accounts of Pakistan embassies in Iran, Turkey, Egypt, UN.” pic.twitter.com/zp54AU0Jk8
— ANI (@ANI) June 27, 2022
ಈ ಅಧಿಕೃತ ಖಾತೆಗಳನ್ನು ನಿಷೇಧಿಸುವ ಮೂಲಕ ಭಾರತದ ಟ್ವಿಟ್ಟರ್‌ಗೆ ಮಾಹಿತಿ ನೀಡುವುದನ್ನು ನಿರ್ಬಂಧಿಸಿದೆ. ಇದನ್ನು ತಕ್ಷಣ ಸರಿಪಡಿಸಬೇಕು ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒತ್ತಾಯಿಸಿದೆ.
Advertisement
Diminishing space for plurality of voices & access to info in #India is extremely alarming. SM platforms must abide by applicable int’l norms; we are urging @Twitter to restore immediate access to our accounts & ensure adherence to democratic freedoms of speech & expression.
— Spokesperson ???????? MoFA (@ForeignOfficePk) June 27, 2022
ಏಪ್ರಿಲ್‍ನಲ್ಲಿ ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 16 ಯೂಟ್ಯೂಬ್ ಚಾನೆಲ್‍ಗಳನ್ನು ನಿಬರ್ಂಧಿಸಿತ್ತು. ಇದರಲ್ಲಿ 6 ಪಾಕಿಸ್ತಾನದ ಯೂಟ್ಯೂಬ್ ಚಾನೆಲ್‍ಗಳಿದ್ದವು. ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳು, ದೇಶದಲ್ಲಿ ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳನ್ನು ಹರಡಲು ಈ ಚಾನೆಲ್‍ಗಳನ್ನು ಬಳಸಲಾಗಿದೆ. ಇದರಿಂದಾಗಿ ನಿಷೇಧಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿತ್ತು. ಇದನ್ನೂ ಓದಿ: ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ: ಸುಮಲತಾ
Advertisement
Advertisement
ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ, ಉಕ್ರೇನ್‍ನಲ್ಲಿನ ಪರಿಸ್ಥಿತಿ, ಭಾರತದ ವಿದೇಶಿ ಸಂಬಂಧಗಳಂತಹ ವಿವಿಧ ವಿಷಯಗಳ ಕುರಿತು ಭಾರತದ ಬಗ್ಗೆ ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಲು ಪಾಕಿಸ್ತಾನ ಮೂಲದ ಯೂಟ್ಯೂಬ್ ಚಾನೆಲ್‍ಗಳನ್ನು ಸಂಘಟಿತ ರೀತಿಯಲ್ಲಿ ಬಳಸಲಾಗಿತ್ತು. ಈ ಚಾನೆಲ್‍ಗಳ ವಿಷಯವು ಸಂಪೂರ್ಣವಾಗಿ ಸುಳ್ಳು ಮತ್ತು ರಾಷ್ಟ್ರೀಯ ಭದ್ರತೆ, ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ ಹಾಗೂ ವಿದೇಶಗಳೊಂದಿಗಿನ ಭಾರತದ ಸ್ನೇಹ-ಸಂಬಂಧಗಳಿಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಇದನ್ನೂ ಓದಿ: 46 ಅಕ್ರಮ ವಲಸಿಗರ ಶವ ಟ್ರ್ಯಾಕ್ಟರ್‌ನಲ್ಲಿ ಪತ್ತೆ