CrimeInternationalLatestMain Post

46 ಅಕ್ರಮ ವಲಸಿಗರ ಶವ ಟ್ರ್ಯಾಕ್ಟರ್‌ನಲ್ಲಿ ಪತ್ತೆ

Advertisements

ವಾಷಿಂಗ್ಟನ್: ಟೆಕ್ಸಾಸ್‍ನ ನೈರುತ್ಯ ಸ್ಯಾನ್ ಆಂಟೋನಿಯೊದ ರಸ್ತೆಯಲ್ಲಿ ಮೆಕ್ಸಿಕೊದಿಂದ ಅಮೆರಿಕಕ್ಕೆ ನುಸುಳುತ್ತಿದ್ದ 46 ಅಕ್ರಮ ವಲಸಿಗರ ಶವ ನಿಂತಿದ್ದ ಟ್ರ್ಯಾಕ್ಟರ್ ಟ್ರೇಲರ್‌ನಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಈ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಲಸಿಗರ ತಂಡದಲ್ಲಿದ್ದ ನಾಲ್ವರು ಮಕ್ಕಳು ಸೇರಿದಂತೆ 16 ಮಂದಿಯನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ಸೇರಿಸಲಾಗಿದೆ. ಟ್ರೇಲರ್‌ನಲ್ಲಿರುವವರು ದಕ್ಷಿಣ ಟೆಕ್ಸಾಸ್‍ನಲ್ಲಿ ವಲಸಿಗರು ಅಮೆರಿಕಕ್ಕೆ ಅಕ್ರಮವಾಗಿ ಗಡಿ ಪ್ರವೇಶ ಮಾಡುವ ಪ್ರಯತ್ನದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಇವರೆಲ್ಲರೂ ಉಷ್ಣತೆ ಹಾಗೂ ನಿರ್ಜಲೀಕರಣಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಿದ್ದರು.

ಘಟನೆಗೆ ಸಂಬಂಧಿಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಅವರು ಅಕ್ರಮವಾಗಿ ಗಡಿಯೊಳಗೆ ನುಗ್ಗುವವರ ಸಂಪರ್ಕ ಹೊಂದಿದ್ದಾರೆಯೇ ಎನ್ನುವುದು ಇನ್ನೂ ಪತ್ತೆ ಆಗಿಲ್ಲ. ಘಟನೆಗೆ ಸಂಬಂಧಿಸಿ ಯುಎಸ್ ಹೋಮ್‍ಲ್ಯಾಂಡ್ ಸೆಕ್ಯುರಿಟಿ ಇನ್ವೆಸ್ಟಿಗೇಷನ್ಸ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.  ಇದನ್ನೂ ಓದಿ: ಶಿಕ್ಷಣ ಇಲಾಖೆಗೆ ಹೊಸ ವೆಬ್‌ಸೈಟ್‌ – ಸಚಿವರಿಗೆ ನೀವೇ ದೂರು ಕೊಡಬಹುದು

ಇತ್ತೀಚಿನ ದಶಕಗಳಲ್ಲಿ ಮೆಕ್ಸಿಕೋದಿಂದ ಅಮೆರಿಕ ಗಡಿಯನ್ನು ದಾಟಲು ಸಾವಿರಾರು ಮಂದಿ ಪ್ರಯತ್ನಿಸುತ್ತಿದ್ದಾರೆ. 2017ರಲ್ಲಿ ಸ್ಯಾನ್ ಆಂಟೋನಿಯೊದಲ್ಲಿನ ವಾಲ್‍ಮಾರ್ಟ್‍ನಲ್ಲಿ ನಿಲ್ಲಿಸಲಾಗಿದ್ದ ಟ್ರಕ್‍ನೊಳಗೆ ಹತ್ತು ವಲಸಿಗರು ಸಾವನ್ನಪ್ಪಿದರು. 2003ರಲ್ಲಿ 19 ವಲಸಿಗರ ಶವ ಸ್ಯಾನ್ ಆಂಟೋನಿಯೊದ ಆಗ್ನೇಯ ಟ್ರಕ್‍ನಲ್ಲಿ ಪತ್ತೆ ಆಗಿತ್ತು. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಆಹ್ವಾನಿಸಲು ಸಿದ್ದರಾಮಯ್ಯ ತೀರ್ಮಾನ

Live Tv

Leave a Reply

Your email address will not be published.

Back to top button