ಸೌರಶಕ್ತಿ ಉತ್ಪಾದನೆಯಲ್ಲಿ ಜಪಾನ್ ಹಿಂದಿಕ್ಕಿದ ಭಾರತ

Public TV
3 Min Read
Solar Energy

– 1,08,494 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಮುಂಚೂಣಿಯಲ್ಲಿದೆ: ಪ್ರಹ್ಲಾದ್ ಜೋಶಿ
– ಭಾರತವೀಗ 3ನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರ

ನವದೆಹಲಿ: ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ ಈಗ ಜಪಾನ್‌ಗಿಂತ (Japan) ಮುಂದಿದ್ದು, 1,08,494 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.

ನವದೆಹಲಿಯಲ್ಲಿಂದು ಈ ಮಾಹಿತಿ ಹಂಚಿಕೊಂಡ ಸಚಿವರು, ಜಪಾನ್ ಸದ್ಯ 96,459 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದರೆ ಭಾರತ (India) 1,08,494 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಮುಂಚೂಣಿಯಲ್ಲಿದೆ. ಪಳೆಯುಳಿಕೆಯೇತರ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ 50% ಅನ್ನು ಅದಾಗಲೇ ಸಾಧಿಸಿದೆ ಎಂದಿದ್ದಾರೆ. ಇದನ್ನೂ ಓದಿ: ‘ಮಹಾ’ ಚುನಾವಣೆಯಲ್ಲಿ ಇವಿಎಂ ತಿರುಚುವಿಕೆ ನಡೆದಿಲ್ಲ.. ಪರಿಶೀಲನೆಯಿಂದ ಮತ್ತೆ ಸಾಬೀತು: ಚುನಾವಣಾ ಆಯೋಗ

ಸೌರಶಕ್ತಿ ಉತ್ಪಾದನೆಯಲ್ಲಿ ಭಾರತವೀಗ ಜಪಾನ್ ಅನ್ನು ಹಿಂದಿಕ್ಕುವ ಮೂಲಕ ಮೂರನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಚೀನಾ ಮತ್ತು ಅಮೆರಿಕ ನಂತರದ ಸ್ಥಾನದಲ್ಲಿ ಭಾರತ ರಾರಾಜಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆಯಾಗಿ ಖುಷ್ಬೂ ಸುಂದರ್‌ ನೇಮಕ

ಭಾರತ ವಿಶ್ವದ ಮೂರನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗುವಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೆಂಬಲ, ಪ್ರೋತ್ಸಾಹ, ಮಾರ್ಗದರ್ಶನ ಅತ್ಯಮೂಲ್ಯವಾಗಿದೆ. ಮೋದಿ ಅವರ ದೂರದೃಷ್ಟಿಯಿಂದಾಗಿ ಭಾರತ ಶುದ್ಧ ಇಂಧನ ಕ್ರಾಂತಿಯಲ್ಲಿ ಜಾಗತಿಕವಾಗಿ ಮುಂಚೂಣಿ ಸಾಧಿಸಿದೆ ಎಂದು ವಿವರಿಸಿದ್ದಾರೆ.

ಅಂತರರಾಷ್ಟ್ರೀಯ ಇಂಧನ ಸಂಸ್ಥೆ 2024ರ ದತ್ತಾಂಶದ ಪ್ರಕಾರ ಚೀನಾ (China) ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. 2023ರಲ್ಲಿ 260 ಗಿಗಾವ್ಯಾಟ್ ಸೇರಿಸಿದ್ದು, ಕಳೆದ ವರ್ಷಕ್ಕಿಂತ ಮೂರುಪಟ್ಟು ಸನಿಹದಲ್ಲಿದೆ. ನವೀಕರಿಸಬಹುದಾದ ಇಂಧನಕ್ಕಾಗಿ ಚೀನಾ 14ನೇ ಪಂಚವಾರ್ಷಿಕ ಯೋಜನೆಗೆ ಮಹತ್ವಾಕಾಂಕ್ಷೆಯ ಗುರಿ ನಿಗದಿಪಡಿಸಿದ್ದು, ಮತ್ತಷ್ಟು ಬೆಳವಣಿಗೆಗೆ ಕಾರಣವಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಇದನ್ನೂ ಓದಿ: ಟೇಕಾಫ್‌ ಆಗ್ಬೇಕಿದ್ದ ಫ್ಲೈಟ್‌ನಲ್ಲಿ ತಾಂತ್ರಿಕ ದೋಷ – ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ಬೋಯಿಂಗ್ ವಿಮಾನ ರದ್ದು

ಅಮೆರಿಕ 2022ರಲ್ಲಿ ಹಣದುಬ್ಬರ ಕಡಿತ ಕಾಯ್ದೆಯಲ್ಲಿ (IRV) ಸೌರ ಪಿವಿಗಾಗಿ ಉದಾರವಾಗಿ ಅನುದಾನ ಒದಗಿಸಿತು. ಪರಿಣಾಮ 2023ರಲ್ಲಿ ಯುಎಸ್‌ನಲ್ಲಿ 70% ರಷ್ಟು ಹೆಚ್ಚಾಗಿ ದಾಖಲೆಯ 32 ಗಿಗಾವ್ಯಾಟ್ ತಲುಪಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆ. 11ರಿಂದ ಕಾಶಿ ವಿಶ್ವನಾಥ ಧಾಮ ಪ್ಲಾಸ್ಟಿಕ್ ಮುಕ್ತ

ಭಾರತ 2023ರಲ್ಲಿ 12 ಗಿಗಾವ್ಯಾಟ್ ಸೌರ ಪಿವಿ (ಫೋಟೋವೋಲ್ಟಾಯಿಕ್) ಅನ್ನು ಸ್ಥಾಪಿಸಿತು. 2024ರಲ್ಲಿ ಇದು ಗಮನಾರ್ಹವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ಬ್ರೆಜಿಲ್ 2023ರಲ್ಲಿ 15 ಗಿಗಾವ್ಯಾಟ್ ಸೌರ ಪಿವಿ ಸಾಮರ್ಥ್ಯ ಸಾಧಿಸಿದ್ದು, ಇದು ಹಿಂದಿನ ವರ್ಷಕ್ಕಿಂತ 30% ಹೆಚ್ಚಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಸುಹಾಸ್‌ ಶೆಟ್ಟಿ ಹತ್ಯೆ ಎನ್‌ಐಎಗೆ ಹಸ್ತಾಂತರ; ಅಮಿತ್‌ ಶಾ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ಕ್ಯಾ. ಚೌಟ

ಪ್ಯಾರಿಸ್ ಒಪ್ಪಂದ ಸಾಧಿಸಿದ ಭಾರತ:
ಪ್ಯಾರಿಸ್ ಒಪ್ಪಂದಕ್ಕೆ ಅನುಗುಣವಾಗಿ ಭಾರತ ತನ್ನ ವಿದ್ಯುತ್ ಸಾಮರ್ಥ್ಯದ 50% ಅನ್ನು ಪಳೆಯುಳಿಕೆಯೇತರ ಮೂಲಗಳಿಂದ 5 ವರ್ಷ ಮೊದಲೇ ಸಾಧಿಸಿದೆ. 2030ರ ವೇಳೆಗೆ ಪಳೆಯುಳಿಕೆಯೇತರ ಆಧಾರಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 50% ಹೆಚ್ಚಿಸಲಿದೆ ಎಂದು ತಿಳಿಸಿದ್ದಾರೆ.

ಭಾರತದ ಇಂಧನ ಸಾಮರ್ಥ್ಯವೀಗ 484.8 ಗಿಗಾವ್ಯಾಟ್ ಜೂನ್ 30ರ ಹೊತ್ತಿಗೆ ಭಾರತದ ಒಟ್ಟು ಇಂಧನ ಸಾಮರ್ಥ್ಯ 484.8 ಗಿಗಾವ್ಯಾಟ್ ಆಗಿದ್ದು, ಇದರಲ್ಲಿ 242.04 ಗಿಗಾವ್ಯಾಟ್ (49.92%) ಉಷ್ಣ-ಕಲ್ಲಿದ್ದಲಿನಿಂದ ಹಾಗೂ 8.78 ಗಿಗಾವ್ಯಾಟ್ (1.81%) ಪರಮಾಣುವಿನಿಂದ ಮತ್ತು 234.00 ಗಿಗಾವ್ಯಾಟ್ (48.27%) ನವೀಕರಿಸಬಹುದಾದ ಮೂಲಗಳಿಂದ ಸಾಧ್ಯವಾಗಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 6520 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ: ಪ್ರಹ್ಲಾದ್‌ ಜೋಶಿ

ಗ್ಲ್ಯಾಸ್ಗೋದಲ್ಲಿ ನಡೆದ ಸಿಒಪಿ26ನಲ್ಲಿ ಭಾರತ ತನ್ನ ಬದ್ಧತೆಗಳನ್ನು ಪೂರೈಸುವ ಹಾದಿಯಲ್ಲಿದೆ. 2030ರ ವೇಳೆಗೆ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು 500 ಗಿಗಾವ್ಯಾಟ್‌ಗೆ ಹೆಚ್ಚಿಸಲಿದೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಂದ 50% ರಷ್ಟು ಇಂಧನ ಅಗತ್ಯಗಳನ್ನು ಪೂರೈಸಲಿದೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಮಾಲೆಗಾಂವ್ ಸ್ಫೋಟ ಕೇಸ್‌ನಿಂದ ನನ್ನ ಜೀವನವೇ ಹಾಳಾಯ್ತು: ಪ್ರಜ್ಞಾ ಠಾಕೂರ್

1 ಶತಕೋಟಿ ಟನ್ ಇಂಗಾಲ ಹೊರಸೂಸುವಿಕೆ ಗುರಿ:
ಭಾರತ ಒಂದು ಶತಕೋಟಿ ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಗುರಿ ಹೊಂದಿದ್ದು, 2030ರ ವೇಳೆಗೆ 45% ರಷ್ಟು ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆ ಗುರಿ ಸಾಧಿಸುವತ್ತ ಹೆಜ್ಜೆ ಹಾಕಿದೆ ಎಂದು ತಿಳಿಸಿದ್ದಾರೆ.

Share This Article