ನವದೆಹಲಿ: ಭಾರತ ಸರ್ಕಾರ ಐಟಿ ನಿಯಮ 2021ರ ಅಡಿಯಲ್ಲಿ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದ್ದ 22 ಯೂಟ್ಯೂಬ್ ಚ್ಯಾನೆಲ್‌ಗಳನ್ನು ಬ್ಯಾನ್ ಮಾಡಿದೆ.
ಇದೇ ಮೊದಲ ಬಾರಿಗೆ ಐಟಿ ನಿಯಮ, 2021 ರ ಅಡಿಯಲ್ಲಿ 18 ಭಾರತೀಯ ಯೂಟ್ಯೂಬ್ ನ್ಯೂಸ್ ಚ್ಯಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ. ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಇತ್ತೀಚಿನ ಕ್ರಮದಲ್ಲಿ ಪಾಕಿಸ್ತಾನ ಮೂಲದ 4 ಯೂಟ್ಯೂಬ್ ನ್ಯೂಸ್ ಚಾನೆಲ್‌ಗಳನ್ನು ಕೂಡಾ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಅಡುಗೆ ಎಣ್ಣೆಯಿಂದ ತಯಾರಿಸಿದ ಇಂಧನದಲ್ಲಿ 3 ಗಂಟೆ ಹಾರಾಡಿತು ವಿಮಾನ
Advertisement
Advertisement
ಭಾರತೀಯ ಸಶಸ್ತ್ರ ಪಡೆ, ಜಮ್ಮು ಮತ್ತು ಕಾಶ್ಮೀರದಂತಹ ವಿವಿಧ ವಿಷಯಗಳ ಕುರಿತು ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಲು ಹಲವಾರು ಯೂಟ್ಯೂಬ್ ಚ್ಯಾನೆಲ್‌ಗಳನ್ನು ಬಳಸಲಾಗಿದೆ. ಇದೀಗ ಹೊಸದಾಗಿ ನಿರ್ಬಂಧಿಸಲಾಗಿರುವ ಯೂಟ್ಯೂಬ್ ಚಾನೆಲ್‌ಗಳಲ್ಲಿ ಬಹುತೇಕ ಭಾರತ ವಿರೋಧಿ ಸುದ್ದಿಗಳನ್ನೇ ಪೋಸ್ಟ್ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಎಡಿಟ್ ಬಟನ್ ಬೇಕಾ? – ಸಮೀಕ್ಷೆ ಆರಂಭಿಸಿದ ಮಸ್ಕ್
Advertisement
ಈ ಯೂಟ್ಯೂಬ್ ಚ್ಯಾನೆಲ್‌ಗಳು ಉಕ್ರೇನ್‌ನಲ್ಲಿ ನಡೆಯುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಮಾಣದ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದೆ. ಇದು ಭಾರತದೊಂದಿಗಿನ ವಿದೇಶೀ ಸಂಬಂಧಗಳನ್ನು ಅಪಾಯಕ್ಕೆ ತಳ್ಳುವ ಗುರಿ ಹೊಂದಿದೆ ಎಂದು ಸರ್ಕಾರ ಆಘಾತ ವ್ಯಕ್ತಪಡಿಸಿದೆ.