ಪ್ಯಾರಿಸ್: ಇತ್ತೀಚೆಗೆ ಅಡುಗೆ ಎಣ್ಣೆಯಿಂದ ತಯಾರಿಸಲಾದ ಇಂಧನದಿಂದ ವಿಮಾನವೊಂದನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಇಂಧನದಿಂದ ವಿಮಾನ 3 ಗಂಟೆಗಳ ಕಾಲ ಪ್ರಾಯೋಗಿಕ ಹಾರಾಟ ನಡೆಸಿದೆ.
ಎ380 ಏರ್‌ಬಸ್ ವಿಮಾನ ಇತ್ತೀಚೆಗೆ ಫ್ರಾನ್ಸ್ ದೇಶದ ಬ್ಲಾಗ್ನಾಕ್ ವಿಮಾನ ನಿಲ್ದಾಣದಿಂದ ಪ್ರಾಯೋಗಿಕ ಹಾರಾಟವನ್ನು ನಡೆಸಿತು. ವಿಶೇಷವೆಂದರೆ ವಿಮಾನದಲ್ಲಿ ಅಡುಗೆ ಎಣ್ಣೆಯನ್ನು ಹೊರತುಪಡಿಸಿ ಬೇರೇನೂ ಬಳಸಲಾಗಿಲ್ಲ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ವಿದ್ಯುತ್ ಶಾಕ್ – ಯೂನಿಟ್‍ಗೆ 35 ಪೈಸೆ ಹೆಚ್ಚಳ
Advertisement
???? who’s the next ✈️ to take off with 100% Sustainable Aviation Fuel…it’s the #A380! After the #A350 and the #A319neo last year, we’re so proud to continue our 100% SAF journey with this iconic aircraft that will remain in our skies for decades to come https://t.co/l3WS4fmiJM pic.twitter.com/PShaVbTMLh
— Airbus (@Airbus) March 28, 2022
Advertisement
ಸಸ್ಟೆನೆಬಲ್ ಏವಿಯೇಷನ್ ಫ್ಯೂಯೆಲ್(ಎಸ್‌ಎಎಫ್) ಎಂದು ಕರೆಯಲಾಗುವ ಇಂಧನವನ್ನು ಈ ವಿಮಾನದಲ್ಲಿ ಬಳಸಲಾಗಿದ್ದು, ಇದು ಅಡುಗೆ ಎಣ್ಣೆ ಹಾಗೂ ತ್ಯಾಜ್ಯದಿಂದ ಮಾಡಲ್ಪಟ್ಟಿದೆ. ಕೇವಲ ಒಂದು ರೋಲ್ಸ್ ರಾಯ್ಸ್ ಟ್ರೆಂಟ್ 900 ಎಂಜಿನ್ ಮೂಲಕ ಈ ವಿಮಾನವನ್ನು ಹಾರಿಸಲಾಗಿದೆ.
Advertisement
ಏನಿದು ಎಸ್‌ಎಎಫ್:
ಎಸ್‌ಎಎಫ್ ಒಂದು ರೀತಿಯ ಇಂಧನವಾಗಿದ್ದು ಇದನ್ನು ಮುಖ್ಯವಾಗಿ ಅಡುಗೆ ಎಣ್ಣೆ ಹಾಗೂ ತ್ಯಾಜ್ಯದಿಂದ ಮಾಡಲಾಗಿದೆ. ಪರೀಕ್ಷೆಯಲ್ಲಿ ಬಳಸಲಾದ ಇಂಧನವನ್ನು ಹೈಡ್ರೊ ಪ್ರೊಸೆಸ್ಡ್ ಎಸ್ರ‍್ಸ್ ಹಾಗೂ ಫ್ಯಾಟಿ ಆಸಿಡ್(ಹೆಚ್‌ಇಎಫ್‌ಎ)ಗಳಿಂದ ತಯಾರಿಸಲಾಗಿದೆ. ಇದು ಸುಗಂಧ ಹಾಗೂ ಸಲ್ಫರ್ ಮುಕ್ತವಾಗಿದ್ದು, ಫ್ರಾನ್ಸ್‌ನ ನಾರ್ಮಂಡಿ ಪ್ರದೇಶದ ಟೋಟಲ್ ಎನರ್ಜಿಸ್ ಕಂಪನಿ ಪೂರೈಸಿದೆ. ಇದನ್ನೂ ಓದಿ: ಎಡಿಟ್ ಫೀಚರ್ ತರಲಿದ್ದೇವೆ ಎಂದ ಟ್ವಿಟ್ಟರ್ – ಇದು ಏಪ್ರಿಲ್ ಫೂಲ್ ಅಂದ್ರು ನೆಟ್ಟಿಗರು
Advertisement
ಎಸ್‌ಎಎಫ್ ಇಂಧನವನ್ನು ಬಳಸಿ ಹಾರುವ ವಿಮಾನಗಳು ಶೇ.53 ರಿಂದ ಶೇ.71ರ ವರೆಗೆ ಹೊರ ಹಾಕುವ ಇಂಗಾಲವನ್ನು ಕಡಿತಗೊಳಿಸಬಹುದು ಎಂದು ಕಂಪನಿ ತಿಳಿಸಿದೆ.