ಲಂಡನ್: ಇಂದು ಕ್ರಿಕೆಟ್‍ನಲ್ಲಿ ಮಹಾಯುದ್ಧ ನಡೆಯಲಿದೆ. ಪಾಕ್ ಬೇಟೆಗೆ ಭಾರತ ಕಾದು ಕುಳಿತಿದೆ. ನೆರೆ ರಾಷ್ಟ್ರ ಕೂಡ ಗೆಲುವಿಗೇ ಕಣ್ಣಿಟ್ಟಿದೆ.
1985ರ ವಿಶ್ವಚಾಂಪಿಯನ್‍ಶಿಪ್ ಕ್ರಿಕೆಟ್ ಫೈನಲ್‍ನಲ್ಲಿ ಭಾರತ-ಪಾಕ್ ಮುಖಾಮುಖಿಯಾಗಿತ್ತು. ಆ ಬಳಿಕ ಇಂಟರ್‍ನ್ಯಾಷನಲ್ ಒನ್‍ಡೇ ಫೈನಲ್‍ನಲ್ಲಿ ಭಾರತ -ಪಾಕ್ ಎದುರಾಗೇ ಇರ್ಲಿಲ್ಲ. 32 ವರ್ಷಗಳ ಬಳಿಕ ಅಂತರಾಷ್ಟ್ರೀಯ ಏಕದಿನದಲ್ಲಿ ಭಾರತ-ಪಾಕ್ ಇಂದು ಭಾರೀ ಯುದ್ಧಕ್ಕೆ ಸಜ್ಜಾಗಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್‍ಗೆ ಇಂಗ್ಲೆಂಡ್‍ನ ಓವಲ್ ಕೂಡ ರೆಡಿಯಾಗಿದೆ.
Advertisement
ಟೀಂ ಇಂಡಿಯಾದ ಪ್ಲಸ್ ಪಾಯಿಂಟ್‍ಗಳು ಇಲ್ಲಿವೆ.
* ಉತ್ತಮವಾಗಿರುವ ಬ್ಯಾಟಿಂಗ್ ಲೈನ್‍ಅಪ್
* ಫಾರ್ಮ್‍ನಲ್ಲಿರುವ ಧವನ್, ರೋಹಿತ್ ಶರ್ಮಾ, ಯುವಿ, ಕೊಹ್ಲಿ
* ತಂಡಕ್ಕೆ ನೆರವಾಗುತ್ತಿರುವ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ
* ಚಾಂಪಿಯನ್ಸ್ ಲೀಗ್‍ನಲ್ಲಿ ಸಾಂಘಿಕ ಹೋರಾಟ ನಡೆಸಿರುವುದು
* ಪ್ರಮುಖ ಟೂರ್ನಿಗಳಲ್ಲಿ ಪಾಕ್ ವಿರುದ್ಧ ಗೆದ್ದು ಭಾರತ ಆತ್ಮವಿಶ್ವಾಸದಲ್ಲಿರೋದು
Advertisement
Advertisement
Advertisement
ಟೀಂ ಇಂಡಿಯಾ ಮೈನಸ್ ಪಾಯಿಂಟ್
* ದುಬಾರಿಯಾಗುತ್ತಿರುವ ಬೌಲರ್ಸ್.
* ಎದುರಾಳಿಗಳನ್ನ ಕಟ್ಟಿಹಾಕುವಲ್ಲಿ ಬೌಲರ್ಸ್ ವಿಫಲವಾಗುತ್ತಿರೋದು.
* ಕ್ಷೇತ್ರ ರಕ್ಷಣೆ ಇನ್ನಷ್ಟು ಬಲವಾಗಬೇಕು.
ಎದುರಾಳಿ ತಂಡದ ಪ್ಲಸ್ ಮತ್ತು ಮೈನಸ್ ಪಾಯಿಂಟ್‍ಗಳನ್ನು ಕೆಳಗೆ ನೀಡಲಾಗಿದೆ.
ಪಾಕಿಸ್ತಾನ ಪ್ಲಸ್ ಪಾಯಿಂಟ್
* ಯುವ ಪಡೆಯ ಬ್ಯಾಟಿಂಗ್ ಪವರ್.
* ಫಾರ್ಮ್‍ನಲ್ಲಿರುವ ನಾಯಕ ಸರ್ಫರಾಜ್ .
* ಗಾಯಾಳು ಮೊಹಮದ್ ಅಮಿರ್ ತಂಡಕ್ಕೆ ಮರಳುತ್ತಿರೋದು.
* ಸೆಮಿ ಫೈನಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಮಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಪಾಕ್.
ಪಾಕಿಸ್ತಾನ ಮೈನಸ್ ಪಾಯಿಂಟ್
* ಕಳಪೆ ಕ್ಷೇತ್ರ ರಕ್ಷಣೆ, ಕ್ಯಾಚ್‍ಗಳನ್ನ ಕೈಚೆಲ್ಲುತ್ತಿರೋದು.
* ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಬ್ಯಾಟ್ಸ್‍ಮನ್‍ಗಳ ವಿಫಲವಾಗ್ತಿರೋದು.
* ತಂಡಕ್ಕೆ ಕಾಡುತ್ತಿರುವ ಗಾಯಾಳುಗಳ ಸಮಸ್ಯೆ.
* ಅನುಭವಿ ಆಟಗಾರರ ಕೊರತೆ.
4 ಕಾರಣಗಳಿಂದಾಗಿ ಭಾರತ ಗೆಲ್ಲಲೇಬೇಕು:
1. ಯೋಧರಲ್ಲಿ ಆತ್ಮಸ್ಥೈರ್ಯ: ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಕ್ರೀಡೆಯ ಒಂದು ಭಾಗವಾಗಿದ್ದರೂ, ಇದೊಂದು ಭಾವನಾತ್ಮಕ ವಿಚಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಗಡಿಯಲ್ಲಿ ಪಾಕಿಸ್ತಾನ ತೆಗೆಯುತ್ತಿರುವ ಕ್ಯಾತೆಗೆ, ಯೋಧರಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸಲು ಆತ್ಮಬಲ ತುಂಬಲು ಇಂದಿನ ಗೆಲುವು ಅನಿವಾರ್ಯವಾಗಿದೆ.
2. ಹಾಲಿ ಚಾಂಪಿಯನ್ ಪಟ್ಟ ಉಳಿವು: ಭಾರತ ತಂಡ ಹಾಲಿ ಚಾಂಪಿಯನ್ ಟ್ರೋಫಿಯ ವಿಜೇತ ತಂಡವಾಗಿದ್ದು, 2013ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ ಗಳಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಹೀಗಾಗಿ ಈ ಬಾರಿಯೂ ಭಾರತ ಪ್ರಶಸ್ತಿ ಸುತ್ತಿಗೇರಿದ್ದು, ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ.
3. ಐಸಿಸಿಯಲ್ಲಿ ದಾಖಲೆ ಮುಂದುವರಿಕೆ: ಐಸಿಸಿ ಆಯೋಜಿಸುವ ಯಾವುದೇ ಟೂರ್ನ್‍ಮೆಂಟ್ ಗಳಲ್ಲೂ ಭಾರತ ಪಾಕಿಸ್ತಾನದ ವಿರುದ್ಧ ಈ ವರೆಗೂ 2 ಪಂದ್ಯಗಳಲ್ಲಿ ಮಾತ್ರ ಸೋತಿದ್ದು, ಉಳಿದೆಲ್ಲಾ ಪಂದ್ಯಗಳಲ್ಲೂ ಗೆದ್ದಿದೆ. ಅಂತೆಯೇ ವಿಶ್ವಕಪ್ ನಲ್ಲಿ ಭಾರತ ಪಾಕ್ ವಿರುದ್ಧ ಅಜೇಯ ದಾಖಲೆ ಮುಂದುವರೆದಿದೆ. ಹೀಗಾಗಿ ಭಾರತ ತನ್ನ ಈ ದಾಖಲೆಯನ್ನು ಮುಂದವೆರಸಲು ಹೋರಾಡಬೇಕಿದೆ.
5.ನಂ ರ್ 1 ಸ್ಥಾನಕ್ಕೇರಲು ಅವಕಾಶ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಭಾರತಕ್ಕೆ ಎಷ್ಟು ಪ್ರಮುಖವೆಂದರೆ, ಫೈನಲ್ ಪಂದ್ಯವನ್ನು ಭಾರತ ಜಯಿಸಿದ್ದೇ ಆದರೆ ಭಾರತ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುತ್ತದೆ. ಪ್ರಸ್ತುತ 119 ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತಂಡ ಅಗ್ರಸ್ಥಾನದಲ್ಲಿದ್ದು, 117 ಅಂಕಗಳನ್ನು ಹೊಂದಿರುವ ಭಾರತ 3ನೇ ಸ್ಥಾನದಲ್ಲಿದೆ. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯ ಗೆದ್ದರೆ ಆಗ ಭಾರತದ ಅಂಕ 119ಕ್ಕೇರಿಕೆಯಾಗಲಿದೆ. ಆ ಮೂಲಕ ಭಾರತ ಆಗ್ರ ಸ್ಥಾನಕ್ಕೇರಲಿದ್ದು, ದಕ್ಷಿಣ ಆಫ್ರಿಕಾ ತಂಡ 2ನೇ ಸ್ಥಾನಕ್ಕೆ ಕುಸಿಯಲಿದೆ.
Ahead of today's #CT17 final, watch how Pakistan got there, with the highlights of their semi-final win v England!https://t.co/dJoXgRMzFi pic.twitter.com/FvIBs84YA0
— ICC (@ICC) June 18, 2017
How Pakistan's exciting youngsters have led the way to the #CT17 final #PAKvIND
READ: https://t.co/tEAvKBAuCn pic.twitter.com/OT6T1Qtbuh
— ICC (@ICC) June 18, 2017
India captain @imVkohli has by far the highest batting average at #CT17 – will he maintain it today in the final? #PAKvIND #howzstat pic.twitter.com/dNmd02SQa2
— ICC (@ICC) June 18, 2017
Ahead of the #CT17 final, take a look back at previous #PAKvIND knockout encounters!
READ: https://t.co/4b99bY0gDv pic.twitter.com/Cqy5gJci09
— ICC (@ICC) June 18, 2017
Pakistan's @RealHa55an is well placed to claim the Golden Ball – his closest competitor playing the final is @JunaidkhanREAL with 7! #CT17 pic.twitter.com/LyEsJFHnGA
— ICC (@ICC) June 17, 2017
#CT17 has been a good tournament for batsmen, with a higher run rate than the last two editions!
READ: https://t.co/PlpJ1etIkJ pic.twitter.com/GOhZGBfjiP
— ICC (@ICC) June 17, 2017
Today in Tweets – a round-up of the day before the #CT17 Final! #PAKvIND
READ: https://t.co/zu2Cgf6Y35 pic.twitter.com/c7ZGwtb7JB
— ICC (@ICC) June 17, 2017
Here it is – the #CT17 Final Preview! #PAKvIND
READ: https://t.co/fUHuvX3dWH pic.twitter.com/brWs7bqGPn
— ICC (@ICC) June 17, 2017
Ahead of tomorrow's final, watch the highlights of India v Pakistan in the #CT17 group stage! #PAKvIND
WATCH: https://t.co/vKEqrLoJWR pic.twitter.com/6mBUA5pamt
— ICC (@ICC) June 17, 2017
#CT17 Ambassador @KumarSanga2 doesn't dare predict who will win the final tomorrow!
Read his pre-final column!https://t.co/u6fK3LIHKI pic.twitter.com/pavsKcQ4BB
— ICC (@ICC) June 17, 2017