ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಹನುಮ ವಿಹಾರಿ ತಮ್ಮ ಮೊದಲ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿ ಗಮನಸೆಳೆದಿದ್ದಾರೆ.
ಟೀಂ ಇಂಡಿಯಾ ಪರ 292ನೇ ಟೆಸ್ಟ್ ಆಟಗಾರನಾಗಿ ಕ್ಯಾಪ್ ಧರಿಸಿದ ಹನುಮ ವಿಹಾರಿ ಅರ್ಧ ಶತಕ ಸಿಡಿಸಿ ಟೀಂ ಇಂಡಿಯಾ ಪರ ಈ ಸಾಧನೆ ಮಾಡಿದ 26ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. 1996ರಲ್ಲಿ ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಟೆಸ್ಟ್ ಗೆ ಪಾದಾರ್ಪಣೆ ಮಾಡಿದ್ದ ಗಂಗೂಲಿ (131) ಹಾಗೂ ದ್ರಾವಿಡ್ (95) ರನ್ ಸಿಡಿಸಿ ವಿಶ್ವ ಕ್ರಿಕೆಟ್‍ಗೆ ಸಂದೇಶ ರವಾನಿಸಿದ್ದರು.
Advertisement
India claim the first hour honours!
Debutant Hanuma Vihari and Ravindra Jadeja have battled through unscathed, surviving some testing spells from James Anderson and Stuart Broad.
????????: 207/6 (66 overs)
Follow #ENGvIND live ⬇️https://t.co/LQoNOzv9xA pic.twitter.com/KYtzbKKTSz
— ICC (@ICC) September 9, 2018
Advertisement
ರವೀಂದ್ರ ಜಡೇಜಾ ಅಜೇಯಾ 86 ರನ್ (156 ಎಸೆತ, 11 ಬೌಂಡರಿ, 1 ಸಿಕ್ಸರ್) ನೆರವಿನ ಹೊರತಾಗಿಯೂ ಟೀಂ ಇಂಡಿಯಾ 292 ರನ್‍ಗಳಿಗೆ ಅಲೌಟ್ ಆಗಿ 40 ರನ್ ಗಳ ಅಲ್ಪ ಹಿನ್ನಡೆ ಪಡೆಯಿತು. ಇನ್ನು ಪಂದ್ಯದ 58 ಓವರ್ ಆ್ಯಂಡರ್ ಸನ್ ಬೌಲಿಂಗ್‍ನಲ್ಲಿ ಜೀವದಾನ ಪಡೆದ ವಿಹಾರಿ 124 ಎಸೆತಗಳಲ್ಲಿ 56 ರನ್ ಗಳಿಸಿ ವಿಕೆಟ್ ಒಪ್ಪಿದರು. ಇದಕ್ಕೂ ಮುನ್ನ ಪ್ರಮುಖ ಬ್ಯಾಟ್ಸ್ ಮನ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆಈ ಇಬ್ಬರ ಜೊತೆಗೂಡಿ 77 ರನ್ ಗಳ ಜೊತೆಯಾಟ ನೀಡಿತು.
Advertisement
ಹನುಮವಿಹಾರಿ ಟೆಸ್ಟ್ ತಂಡದ ಆಯ್ಕೆ ಅಚ್ಚರಿಯಾಗಿ ಆದರು ಮೊದಲ ಪಂದ್ಯದಲ್ಲಿ ತಮ್ಮ ಆಯ್ಕೆಯನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದರು. ಇದರೊಂದಿಗೆ ಟೀಂ ಇಂಡಿಯಾ ಮದ್ಯಮ ಕ್ರಮಾಂಕದ ಬ್ಯಾಟಿಂಗ್‍ಗೆ ಶಕ್ತಿ ತುಂಬುವ ಭರವಸೆ ನೀಡಿದರು. ಆದರೆ ಹನುಮ ವಿಹಾರಿ ತಮ್ಮ ಬ್ಯಾಟಿಂಗ್ ಶಕ್ತಿಯನ್ನು ಮತ್ತಷ್ಟು ಸಾಬೀತು ಪಡಿಸುವುದು ಅಗತ್ಯವಿದೆ.
Advertisement
The sword came out of the sheath once again! ⚔
Gem of an innings this from Ravindra Jadeja! ????#KyaHogaIssBaar #ENGvIND LIVE on SONY SIX and SONY TEN 3. #SPNSports pic.twitter.com/W6iRles9fh
— Sony Sports Network (@SonySportsNetwk) September 9, 2018
ವಿಹಾರಿ ಸಾಧನೆ:
24 ವರ್ಷದ ಹನುಮ ವಿಹಾರಿ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಸದ್ಯ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಎಂಎಸ್‍ಕೆ ಪ್ರಸಾದ್ ಬಳಿಕ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದ ಆಂಧ್ರಪ್ರದೇಶ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಬಲಗೈ ಬ್ಯಾಟ್ಸ್ ಮನ್ ಆಟಗಾರ ವಿಹಾರಿ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 59.45 ಸರಾಸರಿಯಲ್ಲಿ ರನ್ ಗಳಿಸಿದ್ದು, ಸದ್ಯ ವಿಶ್ವ ಕ್ರಿಕೆಟ್‍ನಲ್ಲಿ ದಾಖಲೆಯಾಗಿದೆ.
Hanuma Vihari (56) now the fourth Indian to register a fifty-plus score in his Test debut inns in England after Rusi Modi (57* in 1946), Sourav Ganguly (131 in 1996) & Rahul Dravid (95 in 1996).#EngvInd
— Mohandas Menon (@mohanstatsman) September 9, 2018
2012 ರ ಅಂಡರ್ 19 ವಿಶ್ವಕಪ್ ಕ್ರಿಕೆಟ್ ಕಪ್ ಗೆದ್ದ ಭಾಗವಾಗಿದ್ದ ವಿಹಾರಿ, 2017-18ರ ರಣಜಿ ಟ್ರೋಫಿಯಲ್ಲಿ 94.00 ಸರಾಸರಿಯಲ್ಲಿ 752 ರನ್ ಸಿಡಿಸಿದ್ದರು. ಹನುಮ ವಿಹಾರಿ ಟೀಂ ಇಂಡಿಯಾ ಎ ತಂಡದಲ್ಲಿ ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು, ದಕ್ಷಿಣ ಅಫ್ರಿಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 148 ರನ್ ಸಿಡಿಸಿದ್ದರು. ರಣಜಿಯಲ್ಲಿ ಆಂಧ್ರಪ್ರದೇಶ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿದ್ದು, ಇದುವರೆಗೂ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 5,142 ರನ್ (63 ಪಂದ್ಯ, 59.79 ಸರಾಸರಿ), ಲಿಸ್ಟ್ ಎ ಕ್ರಿಕೆಟ್ 2268 ರನ್ (56 ಪಂದ್ಯ, 83.90 ಸರಾಸರಿ) ಗಳಿಸಿದ್ದಾರೆ. ಐಪಿಎಲ್ ನಲ್ಲಿ ಹೈದರಾಬಾದ್ ತಂಡದ ಭಾಗವಾಗಿದ್ದ ಹನುಮವಿಹಾರಿ ಬ್ಯಾಟಿಂಗ್ ನಿಂದ ಗಮನ ಸೆಳೆದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Well done @imjadeja should have played earlier in the series things could have been different.. 4 wickets and a brilliant 50.. keep going pal
— Harbhajan Turbanator (@harbhajan_singh) September 9, 2018