ಮಡಿಕೇರಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಧ್ವಜ ಕಟ್ಟುವಾಗ ಖಾಸಗಿ ಶಾಲೆಯಲ್ಲಿ ಮಾಡಿರುವ ಎಡವಟ್ಟಿಗೆ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ದೇಶದ ಹಬ್ಬವಾಗಿ ಆಚರಿಸುತ್ತಿದ್ದು, ಆ. 15 ರವರೆಗೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದಾರೆ. ದೇಶಪ್ರೇಮಿಗಳು ತ್ರಿವರ್ಣ ಧ್ವಜವನ್ನು ಮನೆಯ ಮುಂಭಾಗ ಹಾಗೂ ಮನೆಯ ಮೇಲೆ ಹಾರಿಸಿ ಗೌರವ ಸಲ್ಲಿಸುತ್ತಿದ್ದಾರೆ. ಸ್ವಾತಂತ್ರ್ಯೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಾ ಇರುವಾಗ ಇತ್ತ ಕೊಡಗಿನ ಶನಿವಾರ ಸಂತೆ ಗ್ರಾಮದಲ್ಲಿ ಇರುವ ಸೆಕ್ರೇಡ್ ಹಾರ್ಡ್ ಶಾಲೆ ಶಿಕ್ಷಣ ಸಂಸ್ಥೆಯೊಂದು ಶಾಲೆಯ ಆವರಣದಲ್ಲಿ ನೆಪ ಮಾತ್ರಕ್ಕೆ ಧ್ವಜಸ್ತಂಭ ಹಾಕಿ ಅದಕ್ಕೆ ತ್ರಿವರ್ಣ ಧ್ವಜವನ್ನು ಹಾಕಲಾಗಿದೆ.
Advertisement
Advertisement
ಅಲ್ಲದೇ ನಾಳೆ ಗ್ರಾಮೀಣ ಭಾಗದ ಮಕ್ಕಳಿಗೆ ಶಾಲಾ ಬಸ್ಸು ಕಳುಹಿಸುವುದಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ. ಇದರಿಂದ ಶಾಲಾ ಮಕ್ಕಳ ಪೋಷಕರು ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ.
Advertisement
ಧ್ವಜಸ್ತಂಭವನ್ನು ನಾಮಕಾವಸ್ಥೆಗೆ ಕಿಟಕಿಗೆ ಹಗ್ಗದಿಂದ ಕಟ್ಟಿದ್ದಾರೆ. ಧ್ವಜ ಹಾರಿಸಲು ಅದರದ್ದೇ ಆದ ರೀತಿ ನಿಯಮಗಳು ಇದೆ. ಶಾಲಾ ಮಕ್ಕಳಿಗೆ ಹೇಳಿಕೊಡುವ ಶಾಲೆಯ ಆಡಳಿತ ಮಂಡಳಿಗೆ ರಾಷ್ಟ್ರ ಧ್ವಜದ ಬಗ್ಗೆ ಅಭಿಮಾನ ಇಲ್ಲ ಎಂದರೆ ಹೇಗೆ ಎಂದು ಪೋಷಕರು ಶಾಲೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಚೊಚ್ಚಲ ಭಾಷಣದಲ್ಲಿ ಕುವೆಂಪು ಕವನ ಉಲ್ಲೇಖಿಸಿದ ರಾಷ್ಟ್ರಪತಿ ಮುರ್ಮು
Advertisement
ಸ್ವಾತಂತ್ರ್ಯ ದಿನಾಚರಣೆಗೆ ಗ್ರಾಮೀಣ ಭಾಗದ ಮಕ್ಕಳು ಬರುವುದಕ್ಕೆ ಶಾಲೆಯ ಬಸ್ಸು ಕಳಿಸುವಂತೆ ಪಟ್ಟು ಹಿಡಿದರು. ಇದರಿಂದಾಗಿ ಕೊನೆಗೂ ಶಾಲೆಯ ಆಡಳಿತ ಮಂಡಳಿ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೈಬಿಡಲಾಯಿತು. ಇದನ್ನೂ ಓದಿ: ಹರ್ ಘರ್ ತಿರಂಗಾ ಅಭಿಯಾನ – ಬಿಂದು ಅನ್ಮೋಲ್ ಅಪಾರ್ಟ್‍ಮೆಂಟ್ ನಿವಾಸಿಗಳಿಂದ ತಿರಂಗಾ ಅನಾವರಣ