ಬೆಂಗಳೂರು: ದೇಶದೆಲ್ಲೆಡೆ 78ನೇ ಸ್ವಾತಂತ್ರ್ಯೋತ್ಸವದ (78th Independence Day) ಸಂಭ್ರಮ ಮನೆಮಾಡಿದೆ. ಸಮಸ್ತ ಭಾರತೀಯರು ದೇಶಭಕ್ತಿ ಭಾವ ಮೆರೆದಿದ್ದಾರೆ. ಇದರ ಭಾಗವಾಗಿ ಇತ್ತ ರಾಜ್ಯದ ಸಿಎಂ ನಿವಾಸದಲ್ಲಿ ಸ್ವಾತಂತ್ರ ದಿನ ಆಚರಿಸಲಾಯಿತು.
ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ನಿವಾಸ ಕಾವೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ, ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು. ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಇದನ್ನೂ ಓದಿ: Independence Day: ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ – ಧ್ವಜಾರೋಹಣ ನೆರವೇರಿಸಿದ ಪ್ರಧಾನಿ
ನಂತರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ (Flag Hoisting) ಕಾರ್ಯಕ್ರಮ ನೆರವೇರಿತು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು. ಇದನ್ನೂ ಓದಿ: Independence Day | ರಾಜಸ್ಥಾನಿ ಲೆಹರಿಯಾ ಪೇಟ ಧರಿಸಿ ಗಮನ ಸೆಳೆದ ಮೋದಿ
ಕೆಪಿಸಿಸಿ ಕಚೇರಿಯಲ್ಲಿ ದ್ಜಜಾರೋಹಣ ನೆರವೇರಿಸಿದ ಬಳಿಕ ಡಿಸಿಎಂ ಚನ್ನಪಟ್ಟಣಕ್ಕೆ ತೆರಳಿದರು. ಇದನ್ನೂ ಓದಿ: ದೇಶ ಮೊದಲು.. ಭಾರತವನ್ನು ಬಲಪಡಿಸಲು ದೊಡ್ಡ ಸುಧಾರಣೆಗಳಿಗೆ ಬದ್ಧ: ಪ್ರಧಾನಿ ಮೋದಿ ಪ್ರತಿಜ್ಞೆ