ನವದೆಹಲಿ: ಅತ್ಯಾಚಾರದ ವಿಚಾರವಾಗಿ ಶಾಸಕ ರಮೇಶ್ ಕುಮಾರ್ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಖಂಡಿಸಿದ್ದು, ಅವು ಅಸಮರ್ಥನೀಯ ಎಂದು ಹೇಳಿದ್ದಾರೆ.
Advertisement
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ರಮೇಶ್ ಕುಮಾರ್ ಅವರು ನೀಡಿರುವ ಹೇಳಿಕೆಯನ್ನು ನಾನು ಮನಃಪೂರ್ವಕವಾಗಿ ಖಂಡಿಸುತ್ತೇನೆ. ರಮೇಶ್ ಕುಮಾರ್ ಅಂತಹ ಪದಗಳನ್ನು ಯಾರಾದರೂ ಹೇಗೆ ಹೇಳಲು ಸಾಧ್ಯ ಎಂಬುವುದನ್ನು ವಿವರಿಸಲಾಗದು. ಅವು ಅಸಮರ್ಥನೀಯವಾಗಿದೆ. ಅತ್ಯಾಚಾರ ಒಂದು ಘೋರ ಅಪರಾಧ. ಅದಕ್ಕೆ ಪೂರ್ಣ ವಿರಾಮ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆಣ್ಣು ಕುಲಕ್ಕೆ ಕ್ಷಮೆ ಕೇಳಿದ ರಮೇಶ್ ಕುಮಾರ್ – ಮುಂದುವರಿಸೋದು ಬೇಡ ಎಂದ ಸ್ಪೀಕರ್ ಕಾಗೇರಿ
Advertisement
I wholeheartedly condemn the statement made earlier today by Sri. K.R.Ramesh Kumar. It is inexplicable how anyone can ever utter such words, they are indefensible. Rape is a heinous crime. Full stop.
— Priyanka Gandhi Vadra (@priyankagandhi) December 17, 2021
Advertisement
ಗುರುವಾರ ವಿಧಾನಸಭೆಯಲ್ಲಿ ಮಾತನಾಡುತ್ತಾ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಆಗದಿದ್ರೆ ಮಲಗಿ ಆನಂದಿಸಿ ಎಂದು ರಮೇಶ್ ಕುಮಾರ್ ಹೇಳಿಕೆ ನೀಡಿದ್ದರು. ರಮೇಶ್ ಕುಮಾರ್ ಈ ರೀತಿ ಹೇಳುತ್ತಿದ್ದಂತೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ಮಂದಿ ಸದಸ್ಯರು ಇದನ್ನು ತಮಾಷೆಯಾಗಿ ತೆಗೆದುಕೊಂಡರು. ಆದರೆ ಈ ಹೇಳಿಕೆಗೆ ಇದೀಗ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ರಮೇಶ್ ಕುಮಾರ್ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ: ಸುಧಾಕರ್
Advertisement
ಈ ಹೇಳಿಕೆ ಕುರಿತಂತೆ ರಮೇಶ್ ಕುಮಾರ್ ಅವರು, ಅತ್ಯಾಚಾರ ಸಂಬಂಧ ಅಧಿವೇಶನದಲ್ಲಿ ನೀಡಿರುವ ನನ್ನ ಹೇಳಿಕೆ ಕುರಿತು ಎಲ್ಲರಿಗೂ ನನ್ನ ಪ್ರಾಮಾಣಿಕ ಕ್ಷಮೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಅತ್ಯಂತ ಹೇಯವಾದ ಅಪರಾಧವನ್ನು ಅಲಕ್ಷಿಸುವುದು ನನ್ನ ಉದ್ದೇವಾಗಿರಲಿಲ್ಲ. ಮಾತಿನ ಭರದಲ್ಲಿ ಆ ಮಾತು ಬಂದಿದೆ. ಇನ್ಮುಂದೆ ಮಾತನಾಡುವಾಗ ಎಚ್ಚರಿಕೆ ವಹಿಸುತ್ತೇನೆಂದು ಟ್ವೀಟ್ ಮೂಲಕ ಕ್ಷಮೆಯಾಚಿಸಿದ್ದರು. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್ ಕುಮಾರ್ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದಲೇ ಟೀಕೆ
ಕಲಾಪ ನಡೆಯುವ ವೇಳೆ ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಗಿತ್ತು. ನಾನೂ ಕೂಡ ಇದನ್ನು ಅನುಭವಿಸ್ತಿದ್ದೇನೆ ಎಂದು ನೋವು ತೋಡಿಕೊಂಡೆ ನಾನು ಇಂಗ್ಲಿಷ್ ಭಾಷೆಯಲ್ಲಿರುವ ಒಂದು ಮಾತು ಉಲ್ಲೇಖ ಮಾಡಿದೆ ಅಷ್ಟೇ. ಹೆಣ್ಣಿಗೆ ಅಪಮಾನ ಮಾಡೋದು ಅಥವಾ ಸದನದ ಗೌರವ ಕಡಿಮೆ ಮಾಡೋದು, ಲಘುವಾಗಿ ವರ್ತಿಸಬೇಕು ಎನ್ನುವ ಯಾವುದೇ ದುರುದ್ದೇಶ ಇಲ್ಲ. ಯಾವ ಸನ್ನಿವೇಶದಲ್ಲಿ ಹೇಗೆ ಹೇಳ್ತೀವಿ ಅನ್ನೋದು ನಿರ್ಧಾರವಾಗಲಿದೆ. ಸಂದರ್ಭದಲ್ಲಿ ಕಲಾಪ ನಡೆಯುವಾಗ, ನಾನು ಇಲ್ಲಿ ಉಲ್ಲೇಖ ಮಾಡಿದ ಮಾತು. ಯಾರ ಮೇಲೂ ಚಾಲೆಂಜ್ ಮಾಡುವ ಉದ್ದೇಶ ಇಲ್ಲ. ಸ್ಪೀಕರ್ ಅವರೇ ತಮ್ಮನ್ನೂ ಸಹ ಅಪರಾಧಿ ಮಾಡಿದ್ದಾರೆ. ಚಿಂತಕ ಕನ್ಫೂಶಿಯಸ್ ಒಂದು ಮಾತು ಹೇಳ್ತಾನೆ. One mistake, ends up in a single mistake.. To Deny mistake, about multiple mistakes ಅಂತಾ ಹೇಳ್ತಾನೆ. ನನ್ನಿಂದ ಅಪರಾಧ ಆಗಿದೆ ಅಂತಾ ತೀರ್ಪನ್ನೇ ಕೊಟ್ಟಿರೋದ್ರಿಂದ, ನಾನು ಕ್ಷಮೆ ಕೇಳುತ್ತೇನೆ. ಇದಕ್ಕೆ ಇಲ್ಲೇ ಸುಖಾಂತ್ಯವನ್ನು ಹಾಡಿ, ಕಲಾಪ ಮುಂದುವರೆಸೋಣ. ಗ್ರಹಚಾರಕ್ಕೆ, ನೀವು ಹೇಳಿದ ಹಾಗೆ ನಾನು ಪ್ರತಿಕ್ರಿಯಿಸಿದೆ ಎಂದು ಕಲಾಪದಲ್ಲಿ ಕೂಡ ಎಲ್ಲರ ಸಮ್ಮುಖ ಕ್ಷಮೆ ಕೇಳಿದರು.