ಚೆನ್ನೈ: ಶಫಾಲಿ ವರ್ಮಾ, ಸ್ಮೃತಿ ಮಂಧಾನ (Smriti Mandhana) ಅವರ ಬ್ಯಾಟಿಂಗ್ ನೆರವು ಹಾಗೂ ಸ್ನೇಹ್ ರಾಣಾ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದ ಟೀಂ ಇಂಡಿಯಾ ಮಹಿಳಾ ತಂಡವು ದಕ್ಷಿಣಾ ಆಫ್ರಿಕಾ ಮಹಿಳಾ (South Africa Women) ತಂಡದ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದ್ದ ವನಿತೆಯರು ಇದೀಗ ಟೆಸ್ಟ್ ಕ್ರಿಕೆಟ್ನಲ್ಲಿ (Test Cricket) ಗೆಲುವು ಸಾಧಿಸಿದ್ದಾರೆ.
What a fantastic win for our girls in the one-off Test against South Africa! 💪 @SnehRana15 was unplayable with her off-breaks, recording the third-best innings figures (8/77) in Women’s Tests. 🤩 Huge centuries by @TheShafaliVerma and @mandhana_smriti gave us the right platform.… pic.twitter.com/XencrzARl5
— Jay Shah (@JayShah) July 1, 2024
Advertisement
ಚೆನ್ನೈನ (Chennai) ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ನಲ್ಲಿ 37 ರನ್ ಗುರಿ ಪಡೆದ ಭಾರತ ಮಹಿಳಾ ತಂಡ 9.2 ಓವರ್ಗಳಲ್ಲೇ ಗುರಿ ತಲುಪಿ ಗೆಲುವು ಸಾಧಿಸಿದೆ. ಶಫಾಲಿ ವರ್ಮಾ ಮತ್ತೆ 24 ರನ್, ಶುಭಾ ಸತೀಶ್ 13 ಅಜೇಯರಾಗಿ ಉಳಿದರು. ಇದನ್ನೂ ಓದಿ: ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದು 3 ಮಹತ್ವದ ನಿರ್ಧಾರ – ಟೀಂ ಇಂಡಿಯಾ ಸಿದ್ಧಗೊಂಡಿದ್ದು ಹೇಗೆ?
Advertisement
ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಹರ್ಮನ್ ಪ್ರೀತ್ ಕೌರ್ (Harmanpreet Kaur) ಬಳಗ ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಪೇರಿಸಿತ್ತು. 115.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಪ್ರತಿಯಾಗಿ ಆಡಿದ್ದ ದಕ್ಷಿಣ ಆಫ್ರಿಕಾ ವನಿತೆಯರ ತಂಡ ಮೊದಲ ಇನ್ನಿಂಗ್ಸ್ನಲ್ಲಿ 84.3 ಓವರ್ಗಳಿಗೆ 266 ರನ್ ಗಳಿಸಿ ಆಲೌಟ್ ಆಯಿತು. ಬಳಿಕ ಫಾಲೋ ಆನ್ ಗುರಿಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ 154.4 ಓವರ್ಗಳಲ್ಲಿ 373 ಗಳಿಸಿ ಆಲೌಟ್ ಆಯಿತು. ಇದರಿಂದ ಭಾರತ ತಂಡ 37 ರನ್ಗಳ ಗುರಿ ಪಡೆದು ಸುಲಭ ಜಯ ದಾಖಲಿಸಿತು.
Advertisement
All over in Chennai!
The @ImHarmanpreet led side win the one-off test by 10 wickets 👏👏
Scorecard ▶️ https://t.co/4EU1Kp7wJe#TeamIndia | #INDvSA | @IDFCFIRSTBank pic.twitter.com/rV3fiCqZMS
— BCCI Women (@BCCIWomen) July 1, 2024
Advertisement
ಮೊದಲ ಇನ್ನಿಂಗ್ಸ್ನಲ್ಲಿ ಮಿಂಚಿದ ಬ್ಯಾಟರ್ಸ್:
ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ ದಾಖಲಿಸಿದರು. ಇದರೊಂದಿಗೆ ಸ್ಮೃತಿ ಮಂಧಾನ ಅಮೋಘ ಶತಕ ಸಿಡಿಸಿದರು. ಮೊದಲ ವಿಕೆಟ್ಗೆ ಈ ಜೋಡಿ 292 ರನ್ಗಳ ಜತೆಯಾಟ ನೀಡಿತ್ತು. ಸ್ಮೃತಿ ಮಂಧಾನ 161 ಎಸೆತಗಳಲ್ಲಿ 26 ಬೌಂಡರಿ, 1 ಸಿಕ್ಸರ್ ಸಹಿತ 149 ರನ್ ಗಳಿಸಿ ಔಟಾದರೆ. ಶಫಾಲಿ 197 ಎಸೆತಗಳಲ್ಲಿ 23 ಬೌಂಡರಿ, 8 ಸಿಕ್ಸರ್ ಸಹಿತ ದಾಖಲೆಯ ದ್ವಿಶತಕ ಸಿಡಿಸಿದರು. ಬಳಿಕ ಜೆಮಿಮಾ ರೋಡ್ರಿಗ್ಸ್ 55 ರನ್, ಹರ್ಮನ್ಪ್ರೀತ್ ಕೌರ್ 69 ರನ್, ರಿಚಾ ಘೋಷ್ 86 ರನ್ ಸಿಡಿಸಿ ಮಿಂಚಿದರು.
ಸ್ನೇಹ್ ರಾಣಾ ದಾಳಿಗೆ ಆಫ್ರಿಕಾ ತತ್ತರ:
ಮೊದಲ ಇನ್ನಿಂಗ್ಸ್ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಸ್ನೇಹ್ ರಾಣಾ ಬೌಲಿಂಗ್ ದಾಳಿಗೆ ತತ್ತರಿಸಿತು. ಇದರ ನಡುವೆಯೂ ಸುನೆ ಲುಸ್ 65 ರನ್ ಮತ್ತು ಮರಿಜಾನ್ನೆ ಕಪ್ 74 ರನ್ ಗಳಿಸಿ ಬ್ಯಾಟಿಂಗ್ ಬಲ ನೀಡಿದ್ದರು. ಇದರೊಂದಿಗೆ ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ಸ್ನೇಹ್ ರಾಣಾ 8 ವಿಕೆಟ್ ಕಿತ್ತರು. ಇದನ್ನೂ ಓದಿ: ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು
ವೋಲ್ವರ್ತ್ ಮತ್ತು ಸುನೆ ಲೂಸ್ ಶತಕ:
337 ರನ್ಗಳ ಹಿನ್ನಡೆ ಅನುಭವಿಸಿದ ಪ್ರವಾಸಿ 2ನೇ ಇನ್ನಿಂಗ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿತು. ನಾಯಕಿ ಲಾರಾ ವೋಲ್ವರ್ತ್ ಮತ್ತು ಸುನೆ ಲುಸ್ ಶತಕ ಸಿಡಿಸಿ ಗಮನ ಸೆಳೆದರು. ಲಾರಾ 16 ಬೌಂಡರಿ ಸಹಿತ 122 ರನ್ ಬಾರಿಸಿದರೆ ಲುಸ್ 203 ಎಸೆತಗಳಲ್ಲಿ 18 ಬೌಂಡರಿ ಸಹಿತ 109 ರನ್ ಗಳಿಸಿದರು. ನಾಡಿನ್ ಡಿ ಕ್ಲರ್ಕ್ 61 ರನ್ ಸಿಡಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ 8 ವಿಕೆಟ್ ಕಿತ್ತಿದ್ದ ಸ್ನೆಹ್ ರಾಣಾ 2ನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್ ಕಿತ್ತರು, ಶಫಾಲಿ ವರ್ಮಾ, ಹರ್ಮನ್ ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಆಟವನ್ನು ಕೊನೆಗೊಳಿಸಿದರು.
4ನೇ ದಿನದಾಟದಲ್ಲಿ 37 ರನ್ಗಳ ಗುರಿ ಪಡೆದ ಭಾರತ 9.2 ಓವರ್ಗಳಲ್ಲೇ 37 ರನ್ ಗಳಿಸಿತು. ಇದನ್ನೂ ಓದಿ: `ನಿಯಂತ್ರಣವಿಲ್ಲದ ಮನಸ್ಸೇ ದೊಡ್ಡ ಶತ್ರು’ – ಭಗವದ್ಗೀತೆಯ ಸಂದೇಶ ಹಂಚಿಕೊಂಡ ಅಖ್ತರ್
ಸಂಕ್ಷಿಪ್ತ ಸ್ಕೋರ್
ಟೀಂ ಇಂಡಿಯಾ
ಮೊದಲ ಇನ್ನಿಂಗ್ಸ್ – 603/6d
2ನೇ ಇನ್ನಿಂಗ್ಸ್ – 37/0
ದಕ್ಷಿಣ ಆಫ್ರಿಕಾ
ಮೊದಲ ಇನ್ನಿಂಗ್ಸ್ – 266/10
2ನೇ ಇನ್ನಿಂಗ್ಸ್ – 373/10