ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ಭಾರತ ಮಧ್ಯೆ ನಡೆಯುತ್ತಿರುವ ಎರಡನೇ ಟೆಸ್ಟ್ ಕ್ರಿಕೆಟ್ ಈಗ ರೋಚಕ ಘಟಕ್ಕೆ ತಲುಪಿದೆ. ಗೆಲ್ಲಲು 240 ರನ್‌ಗಳ ಗುರಿಯನ್ನು ಪಡೆದಿರುವ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ.
ಐಡೆನ್ ಮಾರ್ಕ್ರಾಮ್ 31 ರನ್(38 ಎಸೆತ, 6 ಬೌಂಡರಿ), ಕೀಗನ್ ಪೀಟರ್ಸನ್ 28 ರನ್(44 ಎಸೆತ, 4 ಬೌಂಡರಿ) ಹೊಡೆದು ಔಟಾದರು. ನಾಯಕ ಡೀನ್ ಎಲ್ಗರ್ ಔಟಾಗದೇ 46 ರನ್(121 ಎಸೆತ, 2 ಬೌಂಡರಿ) ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ 11 ರನ್ ಹೊಡೆದು ಕ್ರೀಸ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ 8 ವಿಕಟ್‌ಗಳ ಸಹಾಯದಿಂದ 122 ರನ್ ಗಳಿಸಬೇಕಿದೆ. ಭಾರತದ ಗೆಲುವಿಗೆ 8 ವಿಕೆಟ್ ಅಗತ್ಯವಿದೆ. ಇದನ್ನೂ ಓದಿ: ತೈಲ ಬೆಲೆ ಭಾರೀ ಏರಿಕೆ, ಕಜಕಿಸ್ತಾನದಲ್ಲಿ ಹಿಂಸಾಚಾರ – ಸರ್ಕಾರ ಪತನ
Advertisement
Advertisement
ಶಾರ್ದೂಲ್ ಠಾಕೂರ್ ಮತ್ತು ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಎರಡನೇ ದಿನ 2 ವಿಕೆಟ್ ನಷ್ಟಕ್ಕೆ 85 ರನ್‌ಗಳಿಸಿದ್ದ ಭಾರತ ಇಂದು 60.1 ಓವರ್‌ಗಳಲ್ಲಿ 266 ರನ್‌ಗಳಿಸಿ ಆಲೌಟ್ ಆಯ್ತು. ಇದನ್ನೂ ಓದಿ: 11 ಬಾರಿ ಕೋವಿಡ್ -19 ಲಸಿಕೆ ಪಡೆದ 84 ವರ್ಷದ ವೃದ್ಧ
Advertisement
ಚೇತೇಶ್ವರ ಪೂಜಾರ 53 ರನ್(86 ಎಸೆತ, 10 ಬೌಂಡರಿ), ಅಜಿಂಕ್ಯಾ ರಹಾನೆ 58 ರನ್(78 ಎಸೆತ, 8 ಬೌಂಡರಿ, 1 ಸಿಕ್ಸರ್) ಹನುಮ ವಿಹಾರಿ ಔಟಾಗದೇ 40 ರನ್ (84 ಎಸೆತ, 6 ಬೌಂಡರಿ), ಶಾರ್ದೂಲ್ ಠಾಕೂರ್ 28 ರನ್(24 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.